KCC ಸರಣಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿದ ಸಿಎಂ: ಯಾವ ನಟರು, ಕ್ರಿಕೆಟಿಗರು ಇದ್ದಾರೆ ನೋಡಿ
ಕನ್ನಡ ಚಲನಚಿತ್ರ ಕಪ್ 2023ರ (KCC) ಮೂರನೇ ಆವೃತ್ತಿಯು ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದೆ. ಇಂದು ಸಂಜೆ ಉದ್ಘಾಟನಾ ಸಮಾರಂಭ ನಡೆಯಿತು. ಚಿನ್ನಸ್ವಾಮಿ ಕೀಡಾಂಗಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿ KCC ಸರಣಿಗೆ ಚಾಲನೆ ನೀಡಿದರು.
ಬೆಂಗಳೂರು, ಫೆಬ್ರವರಿ 24: ಕನ್ನಡ ಚಲನಚಿತ್ರ ಕಪ್ 2023 ರ (KCC) ಮೂರನೇ ಆವೃತ್ತಿಯು ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದೆ. ಇಂದು ಸಂಜೆ ಉದ್ಘಾಟನಾ ಸಮಾರಂಭ ನಡೆಯಿತು. ಚಿನ್ನಸ್ವಾಮಿ ಕೀಡಾಂಗಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿ KCC ಸರಣಿಗೆ ಚಾಲನೆ ನೀಡಿದರು. ಈ ವೇಳೆ, ಚಿತ್ರನಟರು, ಖ್ಯಾತ ಕ್ರಿಕೆಟ್ ಆಟಗಾರರನ್ನು ಬೊಮ್ಮಾಯಿ ಅಭಿನಂದಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕಚೇರಿಯು, 'ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ 2023 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಹಾಗೂ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರು ಹಾಜರಿದ್ದರು' ಎಂದು ತಿಳಿಸಿದೆ. ಈ ಟ್ವೀಟ್ ಜೊತೆ ಫೋಟೊಗಳನ್ನು ಹಂಚಿಕೊಂಡಿದೆ.

ಕ್ರೀಡಾಂಗಣಕ್ಕೆ ಭೇಟಿ ನೀಡಿರುವ ಆರೋಗ್ಯ ಸಚಿವ ಸುಧಾಕರ್, 'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ 'ಕನ್ನಡ ಚಲನಚಿತ್ರ ಕಪ್' ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು' ಎಂದು ಟ್ವೀಟ್ ಮಾಡಿದ್ದಾರೆ.
'ಪಂದ್ಯಾವಳಿಯಲ್ಲಿ ಶ್ರೀ ಕಿಚ್ಚ ಸುದೀಪ್, ಶ್ರೀ ಶಿವರಾಜ್ ಕುಮಾರ್, ಶ್ರೀ ಗೋಲ್ಡನ್ ಸ್ಟಾರ್ ಗಣೇಶ್, ಶ್ರೀ ದ್ರುವ ಸರ್ಜಾ ಸೇರಿದಂತೆ ಕನ್ನಡ ಚಲನಚಿತ್ರ ರಂಗದ ಅನೇಕ ತಾರೆಯರು ಪಾಲ್ಗೊಂಡಿದ್ದಾರೆ' ಎಂದು ಸುಧಾಕರ್ ಹೇಳಿದ್ದಾರೆ.
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ 2023 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
— CM of Karnataka (@CMofKarnataka) February 24, 2023
ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ @mla_sudhakar ಹಾಗೂ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರು ಹಾಜರಿದ್ದರು. pic.twitter.com/7bJJMzP9kW
ಎರಡು ಗುಂಪುಗಳಾಗಿ ವಿಂಗಡಿಸಲಾದ ಆರು ತಂಡಗಳನ್ನು ಒಳಗೊಂಡಿರುವ ಕ್ರಿಕೆಟ್ ಲೀಗ್‌ನಲ್ಲಿ ಕನ್ನಡದ ಪ್ರಮುಖ ನಟರು ಮತ್ತು ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಆರಂಭಿಕ ದಿನ, ಮೂರು ಪಂದ್ಯಗಳನ್ನು ನಿಗದಿಪಡಿಸಲಾಗಿದೆ.
ಮಧ್ಯಾಹ್ನ 3 ರಿಂದ 5 ರವರೆಗೆ ಗಂಗಾ ವಾರಿಯರ್ಸ್ ಮತ್ತು ಹೊಯ್ಸಳ ಈಗಲ್ಸ್ ತಮ್ಮ ಆರಂಭಿಕ ಪಂದ್ಯವನ್ನು ಆಡಲಿವೆ. ಸಂಜೆ 5:15 ರಿಂದ 7:15 ರ ನಡುವೆ, ಹೊಯ್ಸಳ ಈಗಲ್ಸ್ ಮತ್ತು ಒಡೆಯರ್ ಚಾರ್ಜಸ್ ಮುಖಾಮುಖಿಯಾಗಲಿದ್ದು, ಮೂರನೇ ಪಂದ್ಯದಲ್ಲಿ ಕದಂಬ ಲಯನ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ಆಡಲಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ 'ಕನ್ನಡ ಚಲನಚಿತ್ರ ಕಪ್’ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
— Dr Sudhakar K (@mla_sudhakar) February 24, 2023
1/2 pic.twitter.com/rKo7rQpWvJ
ಟೂರ್ನಿಯಲ್ಲಿ ಭಾಗವಹಿಸಲಿರುವ ಮಾಜಿ ಕ್ರಿಕೆಟಿಗರಲ್ಲಿ ಸುರೇಶ್ ರೈನಾ (ಭಾರತ), ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), ಸುಬ್ರಮಣ್ಯಂ ಬದ್ರಿನಾಥ್ (ಭಾರತ), ಹರ್ಷಲ್ ಗಿಬ್ಸ್ (ದಕ್ಷಿಣ ಆಫ್ರಿಕಾ) ಮತ್ತು ತಿಲಕರತ್ನೆ ದಿಲ್ಶನ್ (ಶ್ರೀಲಂಕಾ) ಸೇರಿದ್ದಾರೆ.
ಕ್ರಿಕೆಟಿಗರನ್ನು ಹೊರತುಪಡಿಸಿ ಹಲವಾರು ಪ್ರಮುಖ ನಟರು ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಕನ್ನಡದ ಸ್ಟಾರ್ ನಟರಾದ ಶಿವರಾಜಕುಮಾರ್, ಸುದೀಪ, ಡಾಲಿ ಧನಂಜಯ, ಧ್ರುವ ಸರ್ಜಾ, ಗಣೇಶ್ ಮತ್ತು ಉಪೇಂದ್ರ ಅವರು ಆಡಲಿದ್ದಾರೆ.

KCC 2023: ತಂಡಗಳು
ಹೊಯ್ಸಳ ಈಗಲ್ಸ್: ಕ್ರಿಸ್ ಗೇಲ್, ಸುದೀಪ (ಸಿ), ಸಾಗರ್ ಗೌಡ, ಅನುಪ್ ಭಂಡಾರಿ, ನಾಗಾರ್ಜುನ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನೀಲ್ ಗೌಡ, ತರುಣ್ ಸುಧೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅಭಿಷೇಕ್ ಬಾಡ್ಕರ್.
ಗಂಗಾ ವಾರಿಯರ್ಸ್: ಸುರೇಶ್ ರೈನಾ, ಧನಂಜಯ, ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾಚರಣ್ ವಾಡಿ, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ರಾಜನ್ ಹಾಸನ, ಪ್ರವೀಣ್, ಶಿವಕುಮಾರ್ ಬಿಯು, ಕೃಷ್ಣ (ಸಿ).
ವಿಜಯನಗರ ಪೇಟ್ರಿಯಾಟ್ಸ್: ಹರ್ಷಲ್ ಗಿಬ್ಸ್, ಉಪೇಂದ್ರ, ತ್ರಿವಿಕ್ರಮ್, ಗರುಡ ರಾಮ್, ವಿಕಾಸ್, ಧರ್ಮ ಕೀರ್ತಿ ರಾಜ್, ವಿಟ್ಟಲ್ ಕಾಮತ್, ಕಿರಣ್, ಸಚಿನ್, ಮಹೇಶ್ ಕೃಷ್ಣ, ಮಯೂರ್ ಪಟೇಲ್, ಆದರ್ಶ್, ರಜತ್ ಹೆಗ್ಡೆ, ಪ್ರದೀಪ್ (ಸಿ).
ರಾಷ್ಟ್ರಕೂಟ ಪ್ಯಾಂಥರ್ಸ್: ಎಸ್.ಬದ್ರಿನಾಥ್, ಧ್ರುವ ಸರ್ಜಾ, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಲಕ್ ಆನಂದ, ಜಗ್ಗಿ, ಸೈಯದ್, ನಿಹಾಲ್ ಉಳ್ಳಾಲ್, ಅನೀಶ್ವರ್ ಗೌತಮ್, ಜಯರಾಮ್ ಕಾರ್ತಿಕ್ (ಸಿ).
ಒಡೆಯರ್ ಚಾರ್ಜರ್ಸ್: ಬ್ರಿಯಾನ್ ಲಾರಾ, ಶಿವಣ್ಣ (ಸಿ), ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ನರೇಶ್ ಗಾಂಧಿ, ಸಿಎಂ ಹರ್ಷ, ರಾಮ್ ಪವನ್, ವಿಜಯ್, ಗಣೇಶ್ ರಾಜ್, ಮಧು, ಮೋಹಿತ್ ಬಿಎ, ರಾಹುಲ್ ಪ್ರಸನ್ನ, ಆರ್ಯನ್, ಥಮನ್ ಎಸ್.
-
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications