ತಿಂಗಳಿಗೆ ₹4 ಲಕ್ಷ ಜೀವನಾಂಶವನ್ನು ಪತ್ನಿ, ಮಗಳಿಗೆ ನೀಡುವಂತೆ ಶಮಿಗೆ ಕೋರ್ಟ್ ಆದೇಶ

ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ ಮೊಹಮ್ಮದ್ ಶಮಿ ಹಾಗೂ ಅವರ ಪತ್ನಿ ಹಸಿನ್ ಜಹಾನ್‌ ನಡುವಿನ ಪ್ರಕರಣವು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈ ಕೋರ್ಟ್‌ ಮಂಗಳವಾರ (ಜುಲೈ 1)ಕ್ಕೆ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದ ಶಮಿ ಅವರ ಪತ್ನಿ ಹಾಗೂ ಮಗಳಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಆದೇಶಿಸಿದೆ.

ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಶಮಿ ಅವರ ಪತ್ನಿ ಹಸಿನ್ ಜಹಾನ್ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ತೀರ್ಪು ನೀಡಿದೆ. ಇದರಿಂದ ಶಮಿ ಜೇಬಿಗೆ ಕತ್ತರಿ ಬಿದ್ದಿದೆ.

Calcutta High Court Orders Mohammed Shami to Pay 4 Lakh Monthly Alimony

ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವ ಮುನ್ನ ಶಮಿ ಹಾಗೂ ಹಸಿನ್‌ ಜಹಾನ್‌ ಪ್ರಕರಣದ ವಿಚಾರಣೆ ನಡೆಸಿತ್ತು. ಈ ವೇಳೆ ನ್ಯಾಯಾಲಯ ಶಮಿ ಅವರ ಪತ್ನಿ ಹಸಿನ್ ಜಹಾನ್‌ ಅವರಿಗೆ 50 ಸಾವಿರ ಹಾಗೂ ಮಗಳಿಗೆ 80 ಸಾವಿರ ಜೀವನಾಂಶುವನ್ನು ನೀಡುವಂತೆ 2023ರಲ್ಲಿ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿಲಾಗಿತ್ತು.

ಹೈಕೋರ್ಟ್‌ ತೀರ್ಪು

ಕೋಲ್ಕತ್ತಾ ಹೈಕೋರ್ಟ್‌ ನೀಡಿದ ತೀರ್ಪಿನಲ್ಲಿ ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್‌ ಅವರಿಗೆ ಪ್ರತಿ ತಿಂಗಳು 1.5 ಲಕ್ಷ ರೂ ಹಾಗೂ ಮಗಳು ಐರಾಗೆ 2.5 ಲಕ್ಷ ರೂ. ಜೀವನಾಂಶ ನೀಡುವಂತೆ ಕೋರ್ಟ್ ಆದೇಶಿಸಿದೆ. ಶಮಿ ಪತ್ನಿಗೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ನೀಡಬೇಕಾಗುತ್ತದೆ. ಮೊಹಮ್ಮದ್ ಶಮಿ ಅವರ ಮಗಳು ಐರಾ ಅವರ ಪತ್ನಿ ಹಸಿನ್ ಜಹಾನ್ ಅವರೊಂದಿಗೆ ವಾಸಿಸುತ್ತಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್‌ 2014ರಲ್ಲಿ ಮದುವೆಯಾದರು. ಒಂದು ವರ್ಷದ ಬಳಿಕ ಇಬ್ಬರಿಗೂ ಒಂದು ಹೆಣ್ಣು ಮಗು ಜನಿಸಿತು. ಇವರಿಬ್ಬರ ಸಂಬಂಧ ನಾಲ್ಕು ವರ್ಷಗಳ ಮಾತ್ರ ನಡೆಯಿತು. 2018ರಲ್ಲಿ ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದರು. ಕೋಲ್ಕತ್ತಾ ಹೈಕೋರ್ಟ್ ತನ್ನ ತೀರ್ಪು ನೀಡಿದೆ. ಕಳೆದ ಏಳು ವರ್ಷಗಳಿಂದ ಮೊಹಮ್ಮದ್ ಶಮಿ ತಿಂಗಳಿಗೆ ಈ ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಭಾರತ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ಆದರೆ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಈ ಪ್ರವಾಸದ ಭಾಗವಾಗಿಲ್ಲ. ಇವರು ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಬೌಲಿಂಗ್ ಮಾಡಿದ್ದರು. ಆದರೆ ಇವರು ತಮ್ಮ ಕ್ಷಮತೆಗೆ ತಕ್ಕ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+