ಟೀಮ್‌ ಇಂಡಿಯಾದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರ ವೈಫಲ್ಯ: ನೆಟ್ಟಿಗರು ಹೇಳೋದೇನು?

Bhuvneshwar: ಭಾರತೀಯ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ನಡೆದ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡಕ್ಕೆ ಸೇರಿದ ಆಟಗಾರರಾದ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಅವರ ಕಳಪೆ ಪ್ರದರ್ಶನ ತೋರಿದ್ದು, ಈ ಕುರಿತು ಚರ್ಚೆಗಳು ಶುರುವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ತೀವ್ರ ಆಕ್ರೋಶ ಹಾಗೂ ಟ್ರೋಲ್‌ಗಳು ವ್ಯಕ್ತವಾಗುತ್ತಿವೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಪಡೆದ ಅನುಭವಿ ವೇಗಿ, 'ಸ್ವಿಂಗ್ ಸುಲ್ತಾನ್' ಭುವನೇಶ್ವರ್ ಕುಮಾರ್, ತಾವು ಆಡಿದ ಮೂರು ಪಂದ್ಯಗಳಲ್ಲಿ ತೀವ್ರ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಮೂರು ಪಂದ್ಯಗಳಿಂದ ಒಟ್ಟು 139 ರನ್‌ಗಳನ್ನು ಬಿಟ್ಟುಕೊಟ್ಟು, ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಪ್ರತಿ ಓವರ್‌ಗೆ 12ಕ್ಕೂ ಹೆಚ್ಚು ರನ್ ನೀಡುವ ಮೂಲಕ ಕಳಪೆ ಎಕನಾಮಿ ರೇಟ್ ಕಾಯ್ದುಕೊಂಡ ಕಾರಣ, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ನಾಲ್ಕನೇ ಟಿ20 ಪಂದ್ಯದಿಂದ ಅವರನ್ನು ಹೊರಗಿಟ್ಟರು.

Bhuvneshwar Kumar Krunal Pandya Trolled After Poor Performances RCB Fans Hit Back Know details

ಕೃನಾಲ್ ಪಾಂಡ್ಯ ವೈಫಲ್ಯ

ಮತ್ತೊಂದೆಡೆ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ನಾಯಕತ್ವದ ಅವಕಾಶವನ್ನು ಕೃನಾಲ್ ಪಾಂಡ್ಯ ಅವರಿಗೆ ನೀಡಲಾಗಿತ್ತು. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದರು. ಬ್ಯಾಟಿಂಗ್‌ನಲ್ಲಿ ಶೂನ್ಯಕ್ಕೆ ಔಟಾದ ಅವರು, ಬೌಲಿಂಗ್‌ನಲ್ಲಿ ಎಸೆದ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಸಹಿತ 31 ರನ್‌ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಭಾರತ 4 ವಿಕೆಟ್‌ಗಳಿಂದ ಸೋಲನುಭವಿಸಬೇಕಾಯಿತು.

ಅಜಿತ್ ಅಗರ್ಕರ್ ನಿರ್ಧಾರ ಸರಿ ಎಂದ ನೆಟ್ಟಿಗರು

ಒಂದೇ ದಿನದಲ್ಲಿ ಆರ್‌ಸಿಬಿ ಆಟಗಾರರಿಂದಾಗಿ ಭಾರತ ತಂಡಕ್ಕೆ ಎರಡು ವಿಭಿನ್ನ ವೇದಿಕೆಗಳಲ್ಲಿ ಸೋಲು ಎದುರಾಯಿತು ಎಂಬ ಕಾರಣಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಟೀಮ್‌ನ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿದ್ದಾಗ ಅನೇಕರು ಆಕ್ರೋಶ ಹೊರಹಾಕಿದ್ದರು.

ಆದರೆ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದ ಅಭಿಮಾನಿಗಳು 'ಆರ್‌ಸಿಬಿ ಆಟಗಾರರನ್ನು ತಂಡದಿಂದ ದೂರವಿಡುವ ವಿಚಾರದಲ್ಲಿ ಅಜಿತ್ ಅಗರ್ಕರ್ ಅವರ ನಿರ್ಧಾರವೇ ಸರಿಯಾಗಿತ್ತು,' ಎಂದು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುಂಬರುವ ಸರಣಿಗಳಲ್ಲಿ ಪ್ರಗ್ಯಾನ್ ಓಜಾ ಮತ್ತು ಗೌತಮ್ ಗಂಭೀರ್ ಅವರು ಈ ಆಟಗಾರರನ್ನು ಆಯ್ಕೆ ಮಾಡುವ ಮುನ್ನ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ತಿರುಗೇಟು ನೀಡಿದ ಆರ್‌ಸಿಬಿ ಅಭಿಮಾನಿಗಳು

ಇನ್ನೊಂದೆಡೆ ಟ್ರೋಲ್‌ಗಳು ಮತ್ತು ಟೀಕೆಗಳು ಹೆಚ್ಚಾಗುತ್ತಿದ್ದಂತೆ, ಆರ್‌ಸಿಬಿ ಬೆಂಬಲಿಗರು ತಮ್ಮ ಆಟಗಾರರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದಾರೆ. 'ನಮ್ಮ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರುವುದೇ ಇತ್ತೀಚೆಗೆ. ಕೇವಲ ಒಂದೆರಡು ಪಂದ್ಯಗಳ ಪ್ರದರ್ಶನವನ್ನು ಇಟ್ಟುಕೊಂಡು ಆಟಗಾರರ ಸಾಮರ್ಥ್ಯವನ್ನು ನಿರ್ಣಯಿಸುವುದು ಸರಿಯಲ್ಲ. ಅವರಿಗೆ ಸ್ವಲ್ಪ ಸಮಯ ನೀಡಿ, ಮುಂಬರುವ ಪಂದ್ಯಗಳಲ್ಲಿ ಅವರ ನಿಜವಾದ ಸಾಮರ್ಥ್ಯ ಏನೆಂಬುದು ತಿಳಿಯಲಿದೆ,' ಎಂದು ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಇದೀಗ ರಾಯಲ್‌ ಚಾಲೆಂಜರ್ಸ್‌ ಆಟಗಾರರ ಪ್ರದರ್ಶನಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನೂ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+