Asia Cup 2023 : ಪಂದ್ಯದ ಸಮಯ ಬಹಿರಂಗ : ವೇಳಾಪಟ್ಟಿ, ಸಮಯ ತಿಳಿಯಿರಿ

ಏಷ್ಯಾಕಪ್ 2023 ಪಂದ್ಯಾವಳಿಗೆ ಈಗಾಗಲೇ ಬಹಿರಂಗವಾಗಿದೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತ ತಂಡದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಆಗಸ್ಟ್ 30ರಂದು ಪಂದ್ಯಾವಳಿ ಆರಂಭವಾಗಲಿದ್ದು, ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ.

ಪಂದ್ಯಾವಳಿಯಲ್ಲಿ ಆರು ಏಷ್ಯನ್ ತಂಡಗಳು, ಅಂದರೆ, ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಭಾಗವಹಿಸಲಿವೆ. ಬಹು-ರಾಷ್ಟ್ರಗಳ ಈವೆಂಟ್ ಅನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ: ಗುಂಪು ಹಂತ ಮತ್ತು ಸೂಪರ್ ಫೋರ್ ಹಂತಗಳಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳು ನಡೆಯಲಿದೆ.

Asia Cup 2023 Match Schedule Unveiled – Find Out the Timings Here

ಏಷ್ಯಾ ಕಪ್ ಎರಡು ದೇಶಗಳಲ್ಲಿ ಮತ್ತು ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಟೂರ್ನಿಯ ಆರಂಭಿಕ ಪಂದ್ಯವು ಮುಲ್ತಾನ್‌ನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಶ್ರೀಲಂಕಾ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ಒಟ್ಟು 9 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಪಾಕಿಸ್ತಾನವು ಮುಲ್ತಾನ್ ಮತ್ತು ಲಾಹೋರ್‌ನಲ್ಲಿ 4 ಪಂದ್ಯಗಳನ್ನು ಆಯೋಜಿಸಲಿದೆ.

ಪಾಕ್‌ ತಂಡಕ್ಕೆ ತವರಿನಲ್ಲಿ ಒಂದು ಪಂದ್ಯ

ಆತಿಥೇಯ ಪಾಕಿಸ್ತಾನವು ಗ್ರೂಪ್ ಸ್ಟೇಜ್‌ನಲ್ಲಿ ಕೇವಲ ಒಂದು ಪಂದ್ಯವನ್ನು ತವರಿನಲ್ಲಿ ಆಡಲಿದೆ, ಇದು ಪಂದ್ಯಾವಳಿಯ ಆರಂಭಿಕ ಪಂದ್ಯವಾಗಿದೆ ಮತ್ತು ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡರೆ ಲಾಹೋರ್‌ನಲ್ಲಿ ಮೊದಲ ಸೂಪರ್ ಫೋರ್ ಅನ್ನು ಆಡುವ ಅವಕಾಶ ಹೊಂದಿದೆ. ಏತನ್ಮಧ್ಯೆ, ಸಹ-ಆತಿಥೇಯ ಶ್ರೀಲಂಕಾ ಲಾಹೋರ್‌ನಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಲಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‌ನಲ್ಲಿ 13 ಪಂದ್ಯಗಳಲ್ಲಿ 3 ಬಾರಿ ಮುಖಾಮುಖಿಯಾಗುವ ಅವಕಾಶವನ್ನು ಹೊಂದಿದೆ. ಒಮ್ಮೆ ಗ್ರೂಪ್ ಸ್ಟೇಜ್ (ಗ್ರೂಪ್ ಎ), ಮತ್ತು ಒಮ್ಮೆ ಸೂಪರ್ ಫೋರ್ಸ್ ಮತ್ತು ಫೈನಲ್‌ಗೆ ಪ್ರವೇಶದ ಪಡೆದರೆ ಮೂರನೇ ಬಾರಿ ಮುಖಾಮುಖಿಯಾಗಲಿವೆ.

ಪಂದ್ಯಾವಳಿ ಆರಂಭ ಸಮಯ

ಏಷ್ಯಾಕಪ್ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಆಗಸ್ಟ್ 30ರಂದು ಪಂದ್ಯಾವಳಿಯ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ಮುಖಾಮುಖಿಯಾಗಲಿದ್ದು, ಸೆಪ್ಟಂಬರ್ 2ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ಈ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 4ರಂದು ಭಾರತ ನೇಪಾಳದ ವಿರುದ್ಧ ತನ್ನ ಎರಡನೇ ಪಂದ್ಯ ಆಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+