Asia Cup 2023: ಏಷ್ಯಾಕಪ್‌ಗೆ ಭಾರತ ತಂಡ: ಈ ಇಬ್ಬರ ಫಿಟ್‌ನೆಸ್‌ಗೆ ಕಾಯುತ್ತಿದೆ ಬಿಸಿಸಿಐ

ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್‌ಗೆ ಭಾರತ ತಂಡ ತಯಾರಿ ಆರಂಭಿಸಿದೆ. ಅದಕ್ಕೂ ಮುನ್ನ ಭಾರತ ತಂಡ ಏಷ್ಯಾಕಪ್‌ನಲ್ಲಿ ಆಡಲಿದ್ದು, ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.

ವೆಸ್ಟ್ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ಹೊಸ ಆಟಗಾರರಿಗೆ ಅವಕಾಶ ನೀಡುವ ಮೂಲಕ ಪ್ರಯೋಗ ಕೂಡ ಮಾಡಿದೆ. ಮುಂದಿನ ವಾರ ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಿದ್ದು ಅದಕ್ಕೂ ಮುನ್ನ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್‌ನೆಸ್‌ ಪರೀಕ್ಷೆಗಳನ್ನು ನಡೆಸಲಿದ್ದು, ಅವರ ಆಯ್ಕೆ ಬಗ್ಗೆ ನಿರ್ಧರಿಸಲಾಗುತ್ತದೆ.

 Asia Cup 2023: India Awaits Iyer And Rahul Fitness Updates for Asia Cup Squad

ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಈ ವಾರ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲಿದ್ದಾರೆ ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ನೋಡಿಕೊಂಡು ಇವರಿಬ್ಬರನ್ನು ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಮುಂದಿನ ಸೋಮವಾರದ ವೇಳೆಗೆ ಏಷ್ಯಾಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ.

ಸಂಪೂರ್ಣವಾಗಿ ಫಿಟ್ ಆಗಿಲ್ಲ

"ನಾವು ಒಂದೆರಡು ಗಾಯದ ನವೀಕರಣಗಳಿಗಾಗಿ ಕಾಯುತ್ತಿದ್ದೇವೆ. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 80 ಪ್ರತಿಶತ ಫಿಟ್ ಆಗಿದ್ದಾರೆ ಆದರೆ ಇನ್ನೂ ಪಂದ್ಯ ಆಡುವಷ್ಟು ಫಿಟ್ ಆಗಿಲ್ಲ. ಶನಿವಾರದ ವೇಳೆಗೆ ಫಿಟ್‌ನೆಸ್‌ ವರದಿ ಬರುವ ಸಾಧ್ಯತೆ ಇದೆ, ನಮಗೆ ಹೆಚ್ಚಿನ ಸ್ಪಷ್ಟತೆ ದೊರೆತ ನಂತರ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್‌ಗೆ ತ್ವರಿತವಾಗಿ ಫಿಟ್ನೆಸ್‌ಗೆ ಮರಳುತ್ತಿದ್ದರೂ, ಆಯ್ಕೆದಾರರಾದ ಅಜಿತ್ ಅಗರ್ಕರ್ ಅವರು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರ ಜೊತೆ ಚರ್ಚೆ ಮಾಡಿದ್ದು, ಇವರಿಬ್ಬರೂ ಲಭ್ಯವಿಲ್ಲದಿದ್ದರೆ ಬೇರೆ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ.

ಅಗರ್ಕರ್ ತಂಡದೊಂದಿಗೆ ಸಲಿಲ್ ಅಂಕೋಲಾ ಜೊತೆಗೆ ಬಾರ್ಬಡೋಸ್‌ಗೆ ತೆರಳಿದ್ದರು, ಇಬ್ಬರೂ ರೋಹಿತ್ ಮತ್ತು ರಾಹುಲ್ ಅವರೊಂದಿಗೆ ಏಷ್ಯಾ ಕಪ್ ಸಂಯೋಜನೆಗಳು ಮತ್ತು ತಂಡದ ಬಗ್ಗೆ ಚರ್ಚೆ ನಡೆಸಿದರು.

ಸಂಜು ಸ್ಯಾಮ್ಸನ್ - ಸೂರ್ಯಕುಮಾರ್ ಯಾದವ್‌ಗೆ ಅವಕಾಶ

"ಅಜಿತ್ ಅಗರ್ಕರ್ ಅವರು ರೋಹಿತ್ ಮತ್ತು ರಾಹುಲ್ ಅವರನ್ನು ಭೇಟಿ ಮಾಡಿದರು ಮತ್ತು ಏಷ್ಯಾಕಪ್ ಯೋಜನೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದರು. ಅಯ್ಯರ್ ಮತ್ತು ರಾಹುಲ್ ಆಡುವುದು ಅನುಮಾನ ಇರುವುದರಿಂದ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಏಷ್ಯಾ ಕಪ್ 2023 ಶಿಬಿರದಲ್ಲಿ ಭವಿಷ್ಯ ನಿರ್ಧಾರ

ಏಷ್ಯಾಕಪ್ 2023ರ ವೇಳೆಗೆ ರಾಹುಲ್ ಮತ್ತು ಅಯ್ಯರ್ ಫಿಟ್ ಆಗುತ್ತಾರೆಯೇ ಎನ್ನುವ ಆತಂಕ ಇದೆ. ಇಬ್ಬರೂ ಕೂಡ ಆಗಸ್ಟ್ 24-29 ರ ನಡುವೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಏಷ್ಯಾ ಕಪ್ ಶಿಬಿರದಲ್ಲಿ ಭಾರತ ತಂಡದ ಜೊತೆ ಭಾಗವಹಿಸಲಿದ್ದಾರೆ.

ಏಷ್ಯಾ ಕಪ್ ತಂಡ ಸಲ್ಲಿಕೆ ಅಂತಿಮ ದಿನಾಂಕ ಆಗಸ್ಟ್ 15 ಆಗಿದ್ದರೂ, ತಾಂತ್ರಿಕ ಸಮಿತಿಯ ಅನುಮೋದನೆಯೊಂದಿಗೆ ತಡವಾಗಿ ಬದಲಾವಣೆಗಳನ್ನು ಮಾಡಬಹುದು. ಸೆಪ್ಟೆಂಬರ್ 2 ರಂದು ಭಾರತ ಪಾಕಿಸ್ತಾನದ ವಿರುದ್ಧ ಆಡಲಿದ್ದು, 7 ದಿನಗಳ ಮೊದಲು ಕೂಡ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ. ಶಿಬಿರದಲ್ಲಿ ಇವರಿಬ್ಬರೂ ಫಿಟ್ ಆದರೆ ತಂಡಕ್ಕೆ ಮರಳು ಸಾಧ್ಯತೆ ಇದೆ.

ಇಬ್ಬರೂ ವಿಶ್ವಕಪ್‌ಗೆ ಫಿಟ್ ಆಗುತ್ತಾರೆ ಎಂಬುದು ನಮಗೆ ಖಚಿತವಾಗಿದೆ. ಏಷ್ಯಾಕಪ್ ಆರಂಭವಾಗುವ ವೇಳೆಗೆ ಅವರು ಫಿಟ್ ಆಗಿರಬಹುದು. ಆದರೂ ಈ ವಿಚಾರದಲ್ಲಿ ಹೆಚ್ಚು ಅವಸರ ತೋರುವುದಿಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+