• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

|
Google Oneindia Kannada News

ಬಹುನಿರೀಕ್ಷಿತ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದುಬೀಗಿದೆ. ಆಗಸ್ಟ್ 28ರ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.

ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಕ್ರಿಕೆಟರ್ ಸೇರಿದಂತೆ ಭಾರತದ ಅಭಿಮಾನಿಗಳು ಭಾರತ ತಂಡಕ್ಕೆ ಆಟಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು100ನೇ ಟಿ20ಐ ಪಂದ್ಯವಾಡಿದ 'ಕಿಂಗ್' ಕೊಹ್ಲಿ ವೃತ್ತಿ ಬದುಕಿನ ಅಂಕಿ ಅಂಶಗಳು

ಹಾರ್ದಿಕ್ ಪಾಂಡ್ಯ ತಮ್ಮ ಆಲ್‌ರೌಂಡರ್ ಆಟಕ್ಕಾಗಿ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬರುತ್ತಿದೆ. ಒತ್ತಡದ ನಡುವೆ ಅದ್ಭುತ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.

ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ 2018ರಲ್ಲಿ ತಾವು ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 2018ರಲ್ಲಿ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಬೌಲಿಂಗ್ ಮಾಡುವ ವೇಳೆ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯರನ್ನು ಸ್ಟ್ರೆಚರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಕ್ಕೆ ಬಹುಪರಾಕ್ ಎಂದ ಮೋದಿಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಕ್ಕೆ ಬಹುಪರಾಕ್ ಎಂದ ಮೋದಿ

ಆದರೆ ತಮ್ಮ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಹಾರ್ದಿಕ್ ಪಾಂಡ್ಯ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ. ಗಾಯಗೊಳ್ಳುವ ಮೊದಲಿಗಿಂತ ಈಗ ಅತ್ಯುತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

 ವೈರಲ್ ಆಯ್ತು ಹಾರ್ದಿಕ್ ಪಾಂಡ್ಯ ಮಾಡಿದ ಟ್ವೀಟ್

ವೈರಲ್ ಆಯ್ತು ಹಾರ್ದಿಕ್ ಪಾಂಡ್ಯ ಮಾಡಿದ ಟ್ವೀಟ್

ಪಾಕಿಸ್ತಾನದ ವಿರುದ್ಧ ಪಂದ್ಯ ಮುಕ್ತಾಯವಾದ ನಂತರ ಟ್ವೀಟ್ ಮಾಡಿರುವ ಹಾರ್ದಿಕ ಪಾಂಡ್ಯ ತಾವು ಗಾಯಗೊಂಡ ದಿನವನ್ನು ನೆನಪಿಸಿಕೊಂಡಿದ್ದಾರೆ. 2018ರಲ್ಲಿ ತಾವು ಗಾಯಗೊಂಡ ಚಿತ್ರದ ಜೊತೆ ಭಾನುವಾರ ನಡೆದ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ ನಂತರದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಅನ್ನು ಹಂಚಿಕೊಂಡ ಪಾಂಡ್ಯ, "ಹಿನ್ನಡೆಗಿಂತ ಪುನರಾಗಮನವು ದೊಡ್ಡದಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಮಾಡಿದ ಟ್ವೀಟ್ ಈಗ ಭಾರಿ ವೈರಲ್ ಆಗಿದ್ದು ಪಾಂಡ್ಯ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 ಬೌಲಿಂಗ್‌ನಲ್ಲೂ ಮಿಂಚಿದ ಪಾಂಡ್ಯ

ಬೌಲಿಂಗ್‌ನಲ್ಲೂ ಮಿಂಚಿದ ಪಾಂಡ್ಯ

ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾರ ನಿರ್ಧಾರವನ್ನು ಭಾರತದ ಬೌಲರ್ ಗಳು ಸಮರ್ಥನೆ ಮಾಡಿಕೊಳ್ಳುವಂತೆ ಪ್ರದರ್ಶನ ನೀಡಿದರು. ಪಾಕಿಸ್ತಾನದ ಪ್ರಮುಖ ಬ್ಯಾಟರ್ ಬಾಬರ್ ಅಜಂ 10 ರನ್ ಗಳಿಸುವಷ್ಟರಲ್ಲಿ, ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಹಿನ್ನಡೆ ಅನುಭವಿಸಿತು.


ನಂತರ ಮಧ್ಯಮ ಓವರ್ ಗಳಲ್ಲಿ ಹಾರ್ದಿಕ್ ಪಾಂಡ್ಯ, 4 ಓವರ್ ಗಳಲ್ಲಿ ಕೇವಲ 25 ರನ್ ನೀಡಿ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದು ಪಾಕಿಸ್ತಾನದ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

 ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಪಾಕಿಸ್ತಾನ

ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಪಾಕಿಸ್ತಾನ

ಭಾರತದ ಬೌಲರ್ ಗಳ ಸಂಘಟಿತ ದಾಳಿಗೆ ಪಾಕಿಸ್ತಾನದ ಬ್ಯಾಟರ್ ಗಳು ತತ್ತರಿಸಿದರು, ಯಾವೊಬ್ಬ ಬ್ಯಾಟರ್ ಕೂಡ ಭಾರತದ ಬೌಲರ್ ಅನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಉತ್ತಮವಾಗಿ ಬೌಲಿಂಗ್ ಮಾಡಿದರು, 4 ಓವರ್ ಗಳಲ್ಲಿ 26 ರನ್ ನೀಡಿ 4 ಪ್ರಮುಖ ವಿಕೆಟ್‌ ಪಡೆದರು.

ಮತ್ತೊಬ್ಬ ಯುವ ವೇಗದ ಬೌಲರ್, ಅರ್ಷದೀಪ್ ಸಿಂಗ್ 3.5 ಓವರ್ ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು. ಆವೇಶ್ ಖಾನ್ 2 ಓವರ್ ಗಳಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದರು. ಭಾರತದ ಬೌಲರ್ ದಾಳಿಗೆ ತತ್ತರಿಸಿ ಪಾಕಿಸ್ತಾನ ಅಂತಿಮವಾಗಿ 19.5 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು.

 ಭಾರತಕ್ಕೆ ಗೆಲುವು ತಂದುಕೊಟ್ಟ ಪಾಂಡ್ಯ

ಭಾರತಕ್ಕೆ ಗೆಲುವು ತಂದುಕೊಟ್ಟ ಪಾಂಡ್ಯ

ಸುಲಭದ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು, ಗಾಯದ ಸಮಸ್ಯೆಯಿಂದ ಹೊರಬಂದ ಕೆ.ಎಲ್.ರಾಹುಲ್ ತಮ್ಮ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ ಆಘಾತ ನೀಡಿದರು.

ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದಲೇ ಇನ್ನಿಂಗ್ಸ್ ಆರಂಭಿಸಿದರು. ನಾಯಕ ರೋಹಿತ್ ಶರ್ಮಾ 12 ರನ್ ಗಳಿಸಿದ್ದಾಗ ಔಟ್ ಆದರೆ, 35 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಕೂಡ ತಮ್ಮ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ 29 ಎಸೆತಗಳಲ್ಲಿ 35 ರನ್ ಗಳಿಸಿ ಅಂತಿಮ ಓವರ್ ನ ಮೊದಲ ಎಸೆತದಲ್ಲಿ ಔಟಾದರು. 17 ಎಸೆತಗಳಲ್ಲಿ 4 ಬೌಂಡರಿ ಒಂದು ಸಿಕ್ಸರ್ ಮೂಲಕ 33 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಇನ್ನೂ ಎರಡು ಎಸೆತ ಬಾಕಿ ಇರುವಂತೆ ಗೆಲುವು ತಂದುಕೊಟ್ಟರು.

English summary
28-year-old all-rounder Hardik Pandya finds himself in the middle of all praises and celebrations after his explosive batting knock helped India to begin their Asia Cup campaign on a high. Pandya took to his social media and shared a collage of pictures, one from last night’s India vs Pakistan match, and another from the Asia Cup 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X