ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ ಕೊಪ್ಪಳದ ಜಿಲ್ಲಾಧಿಕಾರಿ

ಕೊಪ್ಪಳ, ಅಕ್ಟೋಬರ್ 30: ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಕ್ರೀಡಾಪಟುಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Allow Sports Persons For Practice In District Grounds Directs Koppal DC

"ಜಿಲ್ಲೆಯ ಕ್ರೀಡಾಪಟುಗಳಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಅವರು ಅಷ್ಟೇ ಉತ್ತಮವಾಗಿ ಕ್ರೀಡಾಭ್ಯಾಸ ಮಾಡುವುದು ಅವಶ್ಯಕವಿರುತ್ತದೆ. ಆದ್ದರಿಂದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡಲು ಅವಕಾಶ ಕಲ್ಪಿಸಿಕೊಡಿ" ಎಂದು ಹೇಳಿದರು.

ಜಿಲ್ಲಾ ಕ್ರೀಡಾಂಗಣದ ಮಾಹಿತಿ; ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, "ಜಿಲ್ಲಾ ಕ್ರೀಡಾಂಗಣವು ಒಟ್ಟು 18 ಎಕರೆ ವಿಸ್ತೀರ್ಣ ಹೊಂದಿದ್ದು, ಪ್ರಸ್ತುತ ಇಲಾಖೆಯ ಅಧೀನದಲ್ಲಿರುತ್ತದೆ. 2010-11ನೇ ಸಾಲಿನಲ್ಲಿ ನಿರ್ಮಿತಿ ಕೇಂದ್ರ ಕೊಪ್ಪಳರವರಿಂದ 400ಮೀ ಅಥ್ಲೆಟಿಕ್ ಮಡ್ ಟ್ರಾಕ್ ನಿರ್ಮಾಣ ಮಾಡಲಾಗಿದೆ" ಎಂದರು.

"ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಕ್ರೀಡಾಭ್ಯಾಸಕ್ಕಾಗಿ ತಾತ್ಕಾಲಿಕವಾಗಿ ವಾಲಿಬಾಲ್, ಬಾಸ್ಕೆಟ್ ಬಾಲ್, ಪ್ರೇಕ್ಷಕರ ಸಿಟ್ಟಿಂಗ್ ಗ್ಯಾಲರಿ, ಒಳಾಂಗಣ ಕ್ರೀಡಾಂಗಣ, ವ್ಯಾಯಾಮ ಶಾಲೆಯ ಅಂಕಣಗಳನ್ನು ಮಾಡಬೇಕು. ವಿದ್ಯುತ್ ದೀಪ ಅಳವಡಿಕೆ, ಇನ್ನಿತರ ಕಾಮಗಾರಿಗಳ ನಿರ್ಮಾಣದ ಬಗ್ಗೆ ಗಮನಹರಿಸಬೇಕು" ಎಂದು ಸೂಚಿಸಿದರು.

"ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳಿದ್ದು, ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾಗುತ್ತಾರೆ. ಅವರಿಗೆ ಸೂಕ್ತ ಕ್ರೀಡಾಭ್ಯಾಸಕ್ಕಾಗಿ ಅಗತ್ಯ ಅವಕಾಶ ಕಲ್ಪಿಸಿಕೊಡಬೇಕು" ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

"ಕ್ರೀಡಾ ವಸತಿ ನಿಲಯದ ಬಾಲಕ, ಬಾಲಕಿಯರು ಸಹ ವಿವಿಧ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸುತ್ತಿದ್ದಾರೆ. ಆದ್ದರಿಂದ ಅಂಕಣಗಳನ್ನು ಸುಸಜ್ಜಿತವಾಗಿ ಫ್ಲಡ್‌ಲೈಟ್, ಸಿಂಥೆಟಿಕ್ ಅಂಕಣ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಜಿಲ್ಲಾ ಕ್ರೀಡಾಂಗಣ ಸಮಿತಿಯಿಂದ ವಿವಿಧ ಕ್ರೀಡೆಗಳಿಗೆ ಒಬ್ಬ ಕ್ರೀಡಾಪಟು ತರಬೇತುದಾರರನ್ನು ನೇಮಕಗೊಳಿಸಬೇಕು" ಎಂದರು.

"ಪ್ರಸ್ತುತವಿರುವ ಸಿಟ್ಟಿಂಗ್ ಗ್ಯಾಲರಿಗಳಿಗೆ ಮೇಲ್ಛಾವಣಿ ಅವಶ್ಯಕತೆ ಇದ್ದು, ಸಿಟ್ಟಿಂಗ್ ಗ್ಯಾಲರಿ ಖಾಲಿ ಸ್ಥಳವನ್ನು ದಾಸ್ತಾನು, ತರಬೇತಿ ಶಿಬಿರಗಳಿಗೆ ತಂಗಲು ವ್ಯವಸ್ಥೆ, ವಿವಿಧ ಸಂಸ್ಥೆಗಳಿಂದ ನಡೆಸುವ ತರಬೇತಿ ಶಿಬಿರಗಳ ಬಳಕೆಗೆ ಒದಗಿಸಿ ಆರ್ಥಿಕ ಸಂಪನ್ಮೂಲವಾಗಿ ಬಳಸಿಕೊಳ್ಳಬೇಕು. ಒಳಾಂಗಣ ಕ್ರೀಡಾಂಗಣದಲ್ಲಿ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಉಪಯೋಗಿಸಲು ಅನುವು ಮಾಡಿಕೊಡಬೇಕು" ಎಂದು ತಿಳಿಸಿದರು.

"ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳ ಅನುಕೂಲಕ್ಕಾಗಿ ವ್ಯಾಯಾಮ ಶಾಲೆ ನಿರ್ವಹಣೆಗಾಗಿ ಜಿಲ್ಲಾ ಕ್ರೀಡಾಂಗಣ ಸಮಿತಿ ವತಿಯಿಂದ ಒಬ್ಬ ಜಿಮ್ ಇನ್‌ಸ್ಟ್ರಕ್ಟರ್ ಸೇವೆಯನ್ನು ಪಡೆಯಬೇಕು. ಈಜುಕೊಳದ ಮೇಲ್ಛಾವಣಿ, ಎಲೆಕ್ಟ್ರಿಕಲ್ ದುರಸ್ಥಿ ಅವಶ್ಯವಿದ್ದು, ಈಜುಕೊಳದ ನೀರು ಪ್ಲೋರೈಡ್‌ನಿಂದ ಕೂಡಿದ್ದು, ಅದರ ಬದಲಾಗಿ ಕೊಪ್ಪಳ ನಗರಸಭೆ ವತಿಯಿಂದ ಸಿಹಿನೀರಿನ ವ್ಯವಸ್ಥೆ ಮಾಡಬೇಕು. ಕ್ರೀಡಾಂಗಣದ ಮೊದಲನೇ ಮಹಡಿಯಲ್ಲಿ ಸಭಾಂಗಣ, ಪ್ರಥಮ ಚಿಕಿತ್ಸೆ ಕೊಠಡಿ, ದಾಸ್ತಾನು ಕೊಠಡಿ, ಬಾಲಕ ಬಾಲಕಿಯರ ಶೌಚಾಲಯ, ಚೆಸ್ ರೂಮ್ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ವಿವಿಧ ತಾಲೂಕು ಕ್ರೀಡಾಂಗಣದಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಅಂದಾಜು ವೆಚ್ಚ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಕ್ರಮ ವಹಿಸಬೇಕು" ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಜುಕೊಳ ಬಳಕೆಗೆ ಲಭ್ಯ; ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಈಜುಕೊಳದ ಸಣ್ಣಪುಟ್ಟ ದುರಸ್ಥಿ ಇದ್ದುದರಿಂದ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಿಗೆ ಬಳಕೆಗೆ ಅವಕಾಶವಿರಲಿಲ್ಲ. ಪ್ರಸ್ತುತ ಈಜುಕೊಳದ ದುರಸ್ಥಿ ಕಾರ್ಯ ಕೈಗೊಂಡು ಸಾರ್ವಜನಿಕ ಸದ್ಬಳಕೆಗೆ ಸಿದ್ದಗೊಂಡಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸಾರ್ವಜನಿಕರಿಗೆ ಸದಸ್ಯತ್ವ ಶುಲ್ಕ ರೂ. 2000 ಗಳು ಹಾಗೂ ಪ್ರತಿ ಮಾಸಿಕ ಶುಲ್ಕ ರೂ. 1500 ಗಳು ಹಾಗೂ 11 ವರ್ಷ ಒಳಗಿನವರಿಗೆ ಸದಸ್ಯತ್ವ ಶುಲ್ಕ ರೂ.1000 ಗಳು ಹಾಗೂ ಪ್ರತಿ ಮಾಸಿಕ ರೂ.750 ಗಳಂತೆ ಇದ್ದು, ನಿಗದಿತ ಶುಲ್ಕ ಪಾವತಿಸಿ ಈಜುಕೊಳ ಬಳಸಿಕೊಳ್ಳಬಹುದು ಹಾಗೂ ಪ್ರತಿ ಗಂಟೆಗೆ ರೂ. 100 ರಂತೆ ಶುಲ್ಕ ರಶೀದಿಯನ್ನು ಪಡೆದು ಈಜುಕೊಳವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+