ಮತ್ತೊಂದು ಟಿ20 ಲೀಗ್‌ನಲ್ಲಿ ತಂಡದ ಮಾಲೀಕರಾದ ಶಾರುಖ್ ಖಾನ್
ಮುಂಬೈ, ಜೂನ್ 19: ಇಂಡಿಯನ್ ಪ್ರೀಮಿಯರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿರುವ ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಟಿ20 ಲೀಗ್‌ನ ಮಹಿಳಾ ತಂಡದ ಮಾಲೀಕರಾಗಿದ್ದಾರೆ.
ಬಾಲಿವುಡ್ ಬಾದ್ ಶಾ ಈಗಾಗಲೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ತಂಡಗಳ ಮಾಲೀಕರಾಗಿದ್ದಾರೆ. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗಲಿರುವ ವುಮೆನ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ತಂಡವೊಂದನ್ನು ಖರೀದಿಸಿದ್ದಾರೆ.
ಆಗಸ್ಟ್ 30 ರಂದು ಮೊದಲ ಆವೃತ್ತಿಯ ಮಹಿಳಾ ಸಿಎಪಿಎಲ್ ಆರಂಭವಾಗಲಿದೆ. ಟ್ರಿಂಬಾಗೋ ನೈಟ್ ರೈಡರ್ಸ್ ತಂಡವನ್ನು ಈಗಾಗಲೆ ಘೋಷಣೆ ಮಾಡಲಾಗಿದ್ದು, ವೆಸ್ಟ್ ಇಂಡೀಸ್ ಮಹಿಳಾ ತಂಡದ ಸ್ಫೋಟಕ ಬ್ಯಾಟರ್ ಡಿಯಾಂಡ್ರ ಡಾಟಿನ್ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಅನೀಶಾ ಮೊಹಮ್ಮದ್ ಉಪನಾಯಕಿಯಾಗಿದ್ದಾರೆ.
This is such a happy moment for all of us at @KKRiders @ADKRiders & of course the lovely set of people at @TKRiders Hope I can make it there to see this live!! https://t.co/IC9Gr96h92
— Shah Rukh Khan (@iamsrk) June 17, 2022

ಈ ಕುರಿತು ನಟ ಶಾರುಖ್ ಖಾನ್ ಟ್ವೀಟ್ ಮಾಡಿದ್ದು, ಇದು ಕೆಕೆಆರ್ ಮತ್ತು ಎಬುಧಾಬಿ ನೈಟ್ ರೈಡರ್ಸ್‌ನಲ್ಲಿ ಹಾಗೂ ಟಿಕೆಆರ್ ಗೆ ಸಂತೋಷದ ಕ್ಷಣವಾಗಿದೆ. ಮಹಿಳಾ ತಂಡ ಆಡುವುದನ್ನು ಲೈವ್‌ನಲ್ಲಿ ನೋಡಲು ನಾನು ಅಲ್ಲಿಗೆ ಹೋಗಬಹುದೆಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶಾರುಖ್ ಒಡೆತನದ ಟಿಕೆಆರ್ ತಂಡದ ಜೊತೆಗೆ ಬಾರ್ಬಡೊಸ್ ರಾಯಲ್ಸ್ ಮತ್ತು ಗಯಾನ ಅಮೇಜಾನ್ ವಾರಿಯರ್ಸ್ ಲೀಗ್‌ನಲ್ಲಿ ಆಡುವುದನ್ನು ಖಚಿತಪಡಿಸಿವೆ.
ಐಪಿಎಲ್‌ನಲ್ಲಿ ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅತ್ಯುತ್ತಮ ತಂಡವನ್ನು ಖರೀದಿಸುವಲ್ಲಿ ವಿಫಲರಾಗಿ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಯಿತು. ಹರಾಜಿನಲ್ಲಿ ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಮತ್ತು ಸುಜಾನ ಖಾನ್ ಹಾಗೂ ಜೂಹಿ ಚಾವ್ಲಾ ಮಗಳು ಜಾನವಿ ಮೆಹ್ತಾ ಭಾಗವಹಿಸಿದ್ದರು.












Click it and Unblock the Notifications