RCB: ಆರ್‌ಸಿಬಿಗೆ ಅನ್ಯಾಯವಾಗುತ್ತಿದೆ; ಎಬಿ ಡಿವಿಲಿಯರ್ಸ್ ಆಕ್ರೋಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ 2025ರ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ 50 ರನ್‌ಗಳ ಅಮೋಘ ಗೆಲುವು ಸಾಧಿಸಿದೆ. ಸಿಎಸ್‌ಕೆ ವಿರುದ್ಧದ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ್ದು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಆರ್ ಸಿಬಿ ಮಾಜಿ ಆಟಗಾರ ಇದೀಗ ಐಪಿಎಲ್ ವೇಳಾಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಐಪಿಎಲ್ ವೇಳಾಪಟ್ಟಿ ಆರ್‌ಸಿಬಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ತಂಡಗಳಿಗಿಂತ ಆರ್ ಸಿಬಿ ಈ ಬಾರಿ ಹೆಚ್ಚು ದೂರ ಪ್ರಯಾಣ ಮಾಡಬೇಕಾಗಿದ್ದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

Ab de villiers criticises rcb ipl 2025 schedule

ಎಬಿ ಡಿವಿಲಿಯರ್ಸ್ ಕೋಪಕ್ಕೆ ಕಾರಣವೇನು?

ಆರ್ ಸಿಬಿ ಆಟಗಾರರು ಐಪಿಎಲ್ ಪಂದ್ಯಗಳನ್ನಾಡಲು ಎಷ್ಟು ದೂರು ಪ್ರಯಾಣ ಮಾಡಬೇಕು ಎನ್ನುವ ವಿಚಾರದ ಬಗ್ಗೆ ಗಮನ ಸೆಳೆದರು. ಈ ಬಾರಿ ಐಪಿಎಲ್‌ನಲ್ಲಿ ಆರ್ ಸಿಬಿ 14 ಲೀಗ್ ಪಂದ್ಯಗಳನ್ನು ಆಡಲು ಬರೋಬ್ಬರಿ 17,084 ಕಿಮೀ ಪ್ರಯಾಣಿಸಬೇಕಾಗಿದೆ. ಎಲ್ಲಾ ತಂಡಗಳಿಗಿಂತ ಇದು ಹೆಚ್ಚಿನ ಅಂತರವಾಗಿದ್ದು ಆಟಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದರು.

ಪಂದ್ಯಾವಳಿಯ ಆರಂಭ ಸುಲಭವಾಗಿರುವುದಿಲ್ಲ, ಆದರೆ ಆರ್ ಸಿಬಿ ಈ ಬಾರಿ ಉತ್ತಮವಾಗಿ ಆರಂಭ ಮಾಡಿದೆ. ನೋಡಿ ಮೊದಲ ಎರಡು ಪಂದ್ಯಗಳಿಗೆ ಅವರು ಕೋಲ್ಕತಾ, ಚೆನ್ನೈಗೆ ಪ್ರಯಾಣ ಮಾಡಿದ್ದಾರೆ. ಈಗ ಮೂರನೇ ಪಂದ್ಯಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಬಳಿಕ ತಮ್ಮ ನಾಲ್ಕನೇ ಪಂದ್ಯಕ್ಕಾಗಿ ಮುಂಬೈಗೆ ಪ್ರಯಾಣ ಮಾಡುತ್ತಾರೆ, ಐದನೇ ಪಂದ್ಯ ಮತ್ತೆ ಬೆಂಗಳೂರಿನಲ್ಲಿ ಆರನೇ ಪಂದ್ಯ ಜೈಪುರದಲ್ಲಿ ನಡೆಯಲಿದೆ. ಆರ್ ಸಿಬಿ ಆಟಗಾರರು ಪಂದ್ಯಕ್ಕೆ ಸಿದ್ಧವಾಗುವ ಜೊತೆ ಇಷ್ಟೊಂದು ದೂರ ಪ್ರಯಾಣ ಮಾಡಬೇಕಿದೆ ಎಂದರು.

ಆರ್‌ಸಿಬಿ ಆಟಕ್ಕೆ ಎಬಿಡಿ ಮೆಚ್ಚುಗೆ

ಆರ್ ಸಿಬಿ ಈ ಬಾರಿ ಆರಂಭದಲ್ಲೇ ಎರಡು ಬಲಿಷ್ಠ ತಂಡಗಳನ್ನು ಎದುರಿಸಿದೆ. ಕೆಕೆಆರ್ ಮತ್ತು ಸಿಎಸ್‌ಕೆ ವಿರುದ್ಧ ಆರ್ ಸಿಬಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಆರ್ ಸಿಬಿ ಆಟವನ್ನು ಎಬಿ ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ. ಆದರೂ ಅವರು ಮುಂದಿನ ಪಂದ್ಯಗಳು ಕಠಿಣವಾಗಿರುತ್ತವೆ, ತವರಿಗೆ ಹೊರಗೆ ಬರೀ ಪ್ರಯಾಣ ಮಾಡಬೇಕಾಗಿದ್ದು, ಸಿದ್ಧತೆಯ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ.

ಆದರೂ ಹೆಚ್ಚಿನ ಪ್ರಯಾಣದಿಂದ ತಂಡದಲ್ಲಿಒಗ್ಗಟ್ಟು ಕೂಡ ಹೆಚ್ಚಬಹುದು ಎಂದಿದ್ದಾರೆ. ನೀವು ಆಗಾಗ್ಗೆ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಆಟಗಾರರ ನಡುವೆ ಬಾಂಧವ್ಯ ಬೆಳೆಯುತ್ತದೆ. ಒಂದೇ ಬಾರಿ ತವರಿನಲ್ಲಿ ನಾಲ್ಕು ಪಂದ್ಯಗಳಿದ್ದರೆ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುವ ಸಾಧ್ಯತೆ ಕೂಡ ಇದ್ದು ಆಟಗ ಮೇಲಿನ ಗಮನ ಕಡಿಮೆಯಾಗಬಹುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+