Aarit Kapil: ಚೆಸ್ ಗ್ರ್ಯಾಂಡ್‌ಮಾಸ್ಟರ್ ಸೋಲಿಸಿ ಹೊಸ ದಾಖಲೆ ಬರೆದ 9 ವರ್ಷದ ಆರಿತ್ ಕಪಿಲ್‌

ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಅವರನ್ನೇ ಸೋಲಿಸುವ ಮೂಲಕ 9 ವರ್ಷದ ಬಾಲಕ ಹೊಸ ದಾಖಲೆ ಬರೆದಿದ್ದಾನೆ. ದೆಹಲಿಯ 9 ವರ್ಷದ ಹುಡುಗ ಆರಿತ್ ಕಪಿಲ್ ಕೆಐಐಟಿ ಇಂಟರ್ ನ್ಯಾಷನಲ್‌ ಓಪನ್ ಟೂರ್ನಮೆಂಟ್‌ನ ಒಂಬತ್ತನೇ ಮತ್ತು ಅಂತಿಮ ಸುತ್ತಿನಲ್ಲಿ ಯುಎಸ್‌ನ ರಾಸೆಟ್ ಜಿಯಾಟ್‌ಡಿನೋವ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಈ ದಾಖಲೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಅತ್ಯಂತ ಕಿರಿಯ ಚೆಸ್ ಆಟಗಾರ ಎನಿಸಿಕೊಂಡರು.

ಆರಿತ್ ಕಪಿಲ್‌ಗೆ ಇನ್ನೂ 9 ವರ್ಷ 2 ತಿಂಗಳು ಮತ್ತು 18 ದಿನಗಳಾಗಿದ್ದು, ವಿಶ್ವ ಗ್ರ್ಯಾಂಡ್‌ಮಾಸ್ಟರ್ ಸೋಲಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಈ ಸಾಧನೆ ಮಾಡಿದ ವಿಶ್ವದ ಮೂರನೇ ಕಿರಿಯ ಆಟಗಾರನಾಗಿದ್ದಾರೆ.

9 Year old aarit kapil youngest indian chess grandmaster

ಚೆಸ್ ಗ್ರ್ಯಾಂಡ್‌ಮಾಸ್ಟರ್ ರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆ ಭಾರತೀಯ ಮೂಲದ ಸಿಂಗಾಪುರದ ಅಶ್ವಥ್ ಕೌಶಿಕ್ ಹೆಸರಿನಲ್ಲಿ. 2024ರ ಆರಂಭದಲ್ಲಿ ಅಶ್ವಥ್ 8 ವರ್ಷ 6 ತಿಂಗಳಿದ್ದಾಗ ಪೋಲೆಂಡ್‌ನ ಜಾಸೆಕ್‌ ವಿರುದ್ಧ ಗೆಲುವು ಸಾಧಿಸಿದ್ದು, ಈ ದಾಖಲೆ ಮಾಡಿದ್ದಾರೆ.

ರಾಸೆಟ್ ಜಿಯಾಟ್‌ಡಿನೋವ್ ಆಟದಲ್ಲಿ ಗೆಲ್ಲಲು ಭಾರಿ ಪ್ರಯತ್ನ ಮಾಡಿದರು. ಅನುಭವಿ ಗ್ರ್ಯಾಂಡ್‌ಮಾಸ್ಟರ್ ಆಗಿ ಎಲ್ಲಾ ಪಟ್ಟುಗಳನ್ನು ಹಾಕಿದರು. ಆರಿತ್ ವಿಶ್ವ ಗ್ರ್ಯಾಂಡ್‌ಮಾಸ್ಟರ್ ವಿರುದ್ಧ ಆಡುತ್ತಿದ್ದೇನೆ ಎನ್ನುವ ಒತ್ತಡವನ್ನು ಬದಿಗಿಟ್ಟು ಆಡಿದರು. ಆರಂಭದಲ್ಲಿ ಕೆಲವು ತಪ್ಪು ಮಾಡಿದರೂ ಬಳಿಕ ಅದನ್ನು ಸರಿ ಮಾಡಿಕೊಂಡು ಹೋರಾಟ ಕೊಟ್ಟರು.

63ನೇ ಚಲನೆಯಲ್ಲಿ ದೆಹಲಿಯ ಹುಡುಗ ವಿಶ್ವ ಗ್ರ್ಯಾಂಡ್‌ಮಾಸ್ಟರ್ ಸೋಲಿಸಿ ಆಘಾತ ನೀಡಿದರು. ಈ ಗೆಲುವಿನ ಮೂಲಕ ಆರಿತ್ ವಿಶ್ವ ಚೆಸ್‌ ಜಗತ್ತಿನ ಗಮನ ಸೆಳೆದಿದ್ದಾರೆ. ಮುಂದಿನ ಪಂದ್ಯಾವಳಿಗಳಲ್ಲಿ ಆರಿತ್ ಕಪಿಲ್ ಉತ್ತಮ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ದುರ್ಗಾಪುರದಲ್ಲಿ 13 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಡೆಯಲಿದ್ದು ಆರಿತ್‌ ಕಪಿನ್‌ ಸವಾಲಿಗೆ ಸಜ್ಜಾಗಿದ್ದಾರೆ.

ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಬೋರಿಸ್ ಸಾವ್ಚೆಂಕೊ ಕೆಐಐಟಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದರು. ಅಂತಿಮ ಸುತ್ತಿನಲ್ಲಿ ಭಾರತದ ಸಯಂತನ್ ದಾಸ್ ಅವರ ಜೊತೆ ಡ್ರಾ ಮಾಡಿಕೊಂಡರು. ಆದರೂ 8.5 ಅಂಕಗಳನ್ನು ಗಳಿಸುವ ಮೂಲಕ ಗೆಲುವು ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+