ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

ಬೆಂಗಳೂರು, ಅ.28: ಟಿ-20 ವಿಶ್ವಕಪ್‌ನಲ್ಲಿ ವಿವಿಧ ತಂಡಗಳ ಮೇಲೆ ಆ್ಯಪ್‌ಗಳ ಮೂಲಕ ಜನಸಾಮಾನ್ಯರನ್ನು ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಾಕಿಸ್ತಾನ- ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ- ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್- ಬಾಂಗ್ಲಾದೇಶಗಳ ಮಧ್ಯೆ ನಡೆದ ಟಿ-20 ವಿಶ್ವಕಪ್‌ನಲ್ಲಿ ಪಂದ್ಯಗಳಿಗೆ ಆನ್‌ಲೈನ್‌ ಮೂಲಕ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಸೋತವರಿಂದ ಹಣ ಪಡೆದು, ಅದನ್ನು ಗೆದ್ದವರಿಗೆ ಕೊಡುತ್ತಿದ್ದರು. ಇಂತಹ ಕೆಲಸದಲ್ಲಿ ತೊಡಗಿದ್ದ ಮೂವರನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ನಿವಾಸಿಗಳಾದ ಓಂ ಪ್ರಕಾಶ್, ಸತ್ಪಾಲ್ ಸಿಂಗ್ ಹಾಗೂ ಗೇವರ್ ಚಂದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 3.50 ಲಕ್ಷ ನಗದು ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

3 Arrested for Involving in Online Cricket Betting in Bengaluru

ಇದರಲ್ಲಿ ಓಂ ಪ್ರಕಾಶ್ sky exchange.com, ಸತ್ಪಾಲ್ ಸಿಂಗ್ jet exchange9.com ಹಾಗೂ ಗೇವರ್ ಚಂದ್ lords exchange.com ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

ಆನ್‌ಲೈನ್ ಆ್ಯಪ್ ಹಾಗೂ ವೆಬ್‌ಸೈಟ್‌ಗಳ ಮೂಲಕ ಬೆಟ್ಟಿಂಗ್ ರೇಷ್ಯೂಗಳನ್ನು ನೋಡಿಕೊಂಡು ಮೊಬೈಲ್ ಫೋನ್, ವಾಟ್ಸ್‌ಆ್ಯಪ್ ಮೂಲಕ ಜನರನ್ನು ಸಂಪರ್ಕಿಸಿ ಅವರ ಇಷ್ಟದ ತಂಡಗಳ ಮೇಲೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಪಂದ್ಯ ಮುಗಿದ ಬಳಿಕ ಸೋತವರಿಂದ ಪಡೆದ ಹಣದಲ್ಲಿ ಒಂದಷ್ಟು ಪಾಲು ತಮ್ಮ ಕಮಿಷನ್ ಇಟ್ಟುಕೊಂಡು ಗೆದ್ದವರಿಗೆ ನೀಡುತ್ತಿದ್ದರು.

ಸಿಸಿಬಿ ವಿಶೇಷ ವಿಚಾರದಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದು, ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ದೂರುಗಳನ್ನು ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+