ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ICC T20 World cup: ಕೊಹ್ಲಿ ಸೇರಿ ಇಬ್ಬರು ಭಾರತೀಯರಿಗೆ ಟೂರ್ನಿ ಶ್ರೇಷ್ಠ ತಂಡದಲ್ಲಿ ಸ್ಥಾನ

|
Google Oneindia Kannada News

ಮೆಲ್ಬೋರ್ನ್‌, ನವೆಂಬರ್ 14:2022ರ ಟಿ20 ವಿಶ್ವಕಪ್‌ ಭಾನುವಾರ ಅಂತ್ಯಗೊಂಡಿದ್ದು, ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಇಂಗ್ಲೆಂಡ್‌ ತಂಡ ಎರಡನೇ ಬಾರಿಗೆ ವಿಶ್ವಕಪ್‌ ಎತ್ತಿ ಹಿಡಿದಿತ್ತು. ಜಾಸ್‌ ಬಟ್ಲರ್‌ ನೇತೃತ್ವದ ತಂಡ ಪಾಕಿಸ್ತಾನವನ್ನು ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟಕ್ಕೇರಿತ್ತು.

ಇಂಗ್ಲೆಂಡ್ ನೀಡಿದ್ದ 138ರನ್‌ಗಳ ಗುರಿಯನ್ನು ಬೆನ್‌ಸ್ಟೋಕ್ಸ್‌ರ ಜವಾಬ್ದಾರಿ ಅರ್ಧಶತಕದ ನೆರವಿನಿಂದ ಯಶಸ್ವಿಯಾಗಿ ಚೇಸ್‌ ಮಾಡಿ ಟ್ರೋಪಿಗೆ ಮುತ್ತಿಟ್ಟಿತು. ವಿಶ್ವಕಪ್‌ ಮುಗಿದ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಟೂರ್ನ್‌ಮೆಂಟ್‌ನ ಆತ್ಯುತ್ತಮ ಇಲೆವೆನ್‌ ಘೋಷಿಸಿದ್ದು, ಇದರಲ್ಲಿ ಭಾರತದ ಇಬ್ಬರು ಆಟಗಾರರು ಅವಕಾಶ ಪಡೆದುಕೊಂಡಿದ್ದಾರೆ.

ಪಾಕ್ ಮಣಿಸಿ ಟಿ20 ಕಪ್ ಎತ್ತಿದ ಇಂಗ್ಲೆಂಡ್ ಹೊಗಳಿದ ನೆಟಿಜನ್ಸ್ಪಾಕ್ ಮಣಿಸಿ ಟಿ20 ಕಪ್ ಎತ್ತಿದ ಇಂಗ್ಲೆಂಡ್ ಹೊಗಳಿದ ನೆಟಿಜನ್ಸ್

ವಿಶ್ವಕಪ್‌ ಪಂದ್ಯಾವಳಿಯ ಅತ್ಯುತ್ತಮ ತಂಡದಲ್ಲಿ ಚಾಂಪಿಯನ್ ತಂಡದ 4, ಭಾರತ ಮತ್ತು ಪಾಕಿಸ್ತಾನ ತಂಡದಿಂದ ತಲಾ ಇಬ್ಬರು ಆಟಗಾರರು, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನ್ಯೂಜಿಲ್ಯಾಂಡ್ ತಂಡದಿಂದ ತಲಾ ಒಬ್ಬ ಆಟಗಾರ ಸ್ಥಾನ ಪಡೆದುಕೊಂಡಿದ್ದಾರೆ. 12ನೇ ಆಟಗಾರನ ಸ್ಥಾನವೂ ಭಾರತ ತಂಡದ ಪಾಲಾಗಿದೆ.

ವಿಶ್ವಕಪ್‌ ಶ್ರೇಷ್ಠ ತಂಡದಲ್ಲಿ ಭಾರತ ತಂಡದ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್‌ ಅವಕಾಶ ಪಡೆದಿದ್ದಾರೆ. ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ 6 ಪಂದ್ಯಗಳಿಂದ 296 ರನ್‌ಗಳಿಸುವ ಮೂಲಕ ಪಂದ್ಯಾವಳಿಯ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. 98.66ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ82 ಗರಿಷ್ಠ ಮೊತ್ತ ಸೇರಿದಂತೆ 4 ಅರ್ಧಶತಕ ಸಿಡಿಸಿದ್ದಾರೆ.

ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್‌ ಆಗಿರುವ ಸೂರ್ಯಕುಮಾರ್ ಯಾದವ್ 6 ಇನ್ನಿಂಗ್ಸ್‌ಗಳಿಂದ 239 ರನ್‌ಗಳಿಸಿದ್ದಾರೆ. 189ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಸೂರ್ಯ 3 ಅರ್ಧಶತಕಗಳನ್ನು ಸಿಡಿಸಿದ್ದರು.

ಬಟ್ಲರ್- ಅಲೆಕ್ಸ್‌ ಹೇಲ್ಸ್‌ ಆಯ್ಕೆ

ಬಟ್ಲರ್- ಅಲೆಕ್ಸ್‌ ಹೇಲ್ಸ್‌ ಆಯ್ಕೆ

ಚಾಂಪಿಯನ್ ಇಂಗ್ಲೆಂಡ್ ತಂಡದ ಓಪನರ್‌ಗಳಾದ ಜಾಸ್ ಬಟ್ಲರ್, ಅಲೆಕ್ಸ್ ಹೇಲ್ಸ್‌, ವೇಗಿಗಳಾದ ಸ್ಯಾಮ್‌ ಕರನ್‌ ಹಾಗೂ ಮಾರ್ಕ್‌ವುಡ್‌ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕರನ್‌ ಟೂರ್ನಿಯಲ್ಲಿ 13 ವಿಕೆಟ್‌ ಪಡೆಯುವ ಮೂಲಕ ಗರಿಷ್ಠ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ 12ಕ್ಕೆ 3 ವಿಕೆಟ್‌ ಪಡೆದಿದ್ದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಹಾಗೂ ಟೂರ್ನಿಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ವುಕ್‌ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ.

ಆರಂಭಿಕರಾಗಿ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡದ ನಾಯಕ ಜಾಸ್‌ ಬಟ್ಲರ್‌ 6 ಪಂದ್ಯಗಳಿಂದ 225, ಅಲೆಕ್ಸ್‌ ಇಷ್ಟೇ ಇನ್ನಿಂಗ್ಸ್‌ಗಳಿಂದ 212 ರನ್‌ಗಳಿಸಿದ್ದಾರೆ.

ಪಾಕ್ ತಂಡದ ಶದಾಬ್ ಖಾನ್, ಶಾಹೀನ್ ಆಫ್ರಿದಿ ಆಯ್ಕೆ

ಪಾಕ್ ತಂಡದ ಶದಾಬ್ ಖಾನ್, ಶಾಹೀನ್ ಆಫ್ರಿದಿ ಆಯ್ಕೆ

ರನ್ನರ್‌ ಅಪ್‌ ಪಾಕಿಸ್ತಾನ ತಂಡದಿಂದ ಶದಾಬ್‌ ಖಾನ್‌ ಹಾಗೂ ವೇಗಿ ಶಾಹೀನ್‌ ಶಾ ಅಫ್ರಿದಿ ಆಯ್ಕೆಯಾಗಿದ್ದಾರೆ. ಈ ಇಬ್ಬರು 6 ಪಂದ್ಯಗಳಿಂದ ತಲಾ 11 ವಿಕೆಟ್‌ ಪಡೆದುಕೊಂಡಿದ್ದರು. ನ್ಯೂಜಿಲ್ಯಾಂಡ್ ತಂಡದಿಂದ ಆಯ್ಕೆಯಾಗಿರುವ ಗ್ಲೇನ್ ಫಿಲಿಪ್ಸ್‌ 5 ಪಂದ್ಯಗಳಿಂದ 201, ಜಿಂಬಾಬ್ವೆ ತಂಡದಿಂದ ಅವಕಾಶ ಪಡೆದಿರುವ ಸಿಕಂದರ್ ರಾಜಾ 8 ಪಂದ್ಯಗಳಿಂದ 10 ವಿಕೆಟ್ ಹಾಗೂ 219 ರನ್ ಹಾಗೂ ದಕ್ಷಿಣ ಆಫ್ರಿಕಾ ತಂಡದಿಂದ ಆಯ್ಕೆಯಾಗಿರುವ ಆನ್ರಿಚ್ ನೋಕಿಯಾ 5 ಪಂದ್ಯಗಳಿಂದ 11 ವಿಕೆಟ್ ಪಡೆದು ವಿಶ್ವಕಪ್ ಅತ್ಯುತ್ತಮ ಇಲೆವೆನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಟಿ20 ವಿಶ್ವಕಪ್ ಅತ್ಯುತ್ತಮ ಇಲೆವೆನ್

ಟಿ20 ವಿಶ್ವಕಪ್ ಅತ್ಯುತ್ತಮ ಇಲೆವೆನ್

ಅಲೆಕ್ಸ್ ಹೇಲ್ಸ್, ಜಾಸ್ ಬಟ್ಲರ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಾಜಾ, ಶದಾಬ್ ಖಾನ್, ಸ್ಯಾಮ್ ಕರನ್, ಆನ್ರಿಚ್ ನೋಕಿಯಾ, ಮಾರ್ಕ್ ವುಡ್, ಶಾಹೀನ್ ಶಾ ಆಫ್ರಿದಿ. (12ನೇ ಆಟಗಾರ - ಹಾರ್ದಿಕ್ ಪಾಂಡ್ಯ

ತಂಡದ ಆಯ್ಕೆ ಪ್ಯಾನಲ್‌ನಲ್ಲಿ ಇದ್ದವರು

ತಂಡದ ಆಯ್ಕೆ ಪ್ಯಾನಲ್‌ನಲ್ಲಿ ಇದ್ದವರು

ಟೂರ್ನಮೆಂಟ್ ಅತ್ಯುತ್ತಮ ವಿಶ್ವಕಪ್‌ ಸಂಯೋಜಿತ ತಂಡವನ್ನು ಪ್ರತಿ ಬಾರಿ ವಿಶ್ವಕಪ್ ನಡೆದಾಗ ಈ ರೀತಿ ಮೌಲ್ಯಯುತ ತಂಡವನ್ನು ಐಸಿಸಿ ಆಯ್ಕೆ ಮಾಡುತ್ತದೆ. ಕಾಮೆಂಟೇಟರ್‌ಗಳು, ಮಾಜಿ ಅಂತರಾಷ್ಟ್ರೀಯ ಆಟಗಾರರು ಮತ್ತು ಪತ್ರಕರ್ತರು ಆಯ್ಕೆ ಮಾಡಿದ್ದಾರೆ. ಕಾಮೆಂಟೇಟರ್‌ಗಳಾದ ಇಯಾನ್ ಬಿಷಪ್ ಹಾಗೂ ಮೆಲ್ ಜೋನ್ಸ್ ಶಿವನಾರಾಯಣ್ ಚಂದ್ರಪಾಲ್ (ಐಸಿಸಿ ಹಾಲ್ ಆಫ್ ಫೇಮರ್), ಪಾರ್ಥ ಭಾದುರಿ (ಟೈಮ್ಸ್ ಆಫ್ ಇಂಡಿಯಾ ಪತ್ರಕರ್ತ), ವಾಸಿಂ ಖಾನ್ (ಐಸಿಸಿ ಕ್ರಿಕೆಟ್ ಜನರಲ್ ಮ್ಯಾನೇಜರ್) ಒಳಗೊಂಡಿರುವ ಆಯ್ಕೆ ಸಮಿತಿಯು ಈ ತಂಡವನ್ನು ಆಯ್ಕೆ ಮಾಡಿದೆ.

English summary
Virat Kohli and Suryakumar were Yadav included ICC's T20 World Cup Team of the Tournament which comprises players from six different countries, including champion England and Pakistan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X