11 ಜನ ಆರ್‌ಸಿಬಿ ಅಭಿಮಾನಿಗಳ ಸಾವು: ವಿರಾಟ್ ಕೊಹ್ಲಿ 1 ಸಾಲಿನ ಪೋಸ್ಟ್‌!

ಬೆಂಗಳೂರಿನಲ್ಲಿ ಬುಧವಾರ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದಾರೆ. ಈ ಘಟನೆಯು ಭಾರೀ ಆಘಾತವನ್ನೇ ಉಂಟು ಮಾಡಿದೆ. ಬೆಂಗಳೂರು ಹಾಗೂ ಕರ್ನಾಟಕಕ್ಕೆ ಈ ಘಟನೆಯು ಎಂದೂ ಮಾಸದ ಕಪ್ಪುಚುಕ್ಕಿಯಾಗಿ ಬದಲಾಗಿದ್ದರೆ. ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡವರ ಕಣ್ಣೀರು ಎಂತವರನ್ನೂ ಭಾವುಕರನ್ನಾಗಿಸುತ್ತದೆ. ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಆರ್‌ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು, ಒಂದು ಸಾಲಿನ ಪೋಸ್ಟ್‌ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿರಾಟ್ ಕೊಹ್ಲಿ ಬೆಂಗಳೂರು ದುರಂತದ ಬಗ್ಗೆ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಂತಹ ಬಹುದೊಡ್ಡ ದುರಂತಕ್ಕೆ ಇಂದು ಸಾಕ್ಷಿಯಾಗಿದೆ. ಈ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು. ವಿರಾಟ್ ಕೊಹ್ಲಿ ಅವರು ಸಹ ಪೋಸ್ಟ್‌ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರು ಒಂದು ಸಾಲಿನ ಪೋಸ್ಟ್‌ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

11 RCB fans Death Virat Kohli s 1 line post viral

ಆರ್‌ಸಿಬಿ ಪೋಸ್ಟ್‌ನಲ್ಲಿ ಏನಿದೆ ?

ಬೆಂಗಳೂರಿನಲ್ಲಿ ನಡೆದಿರುವ ಘಟನೆಯ ಬಗ್ಗೆ ಮಾಧ್ಯಮಗಳ ವರದಿಯ ಮೂಲಕ ಬೆಳಕಿಗೆ ಬಂದಿದ್ದು. ಈ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮವೇ ನಮಗೆ ಅತ್ಯಂತ ಮುಖ್ಯವಾಗಿದೆ. ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ಬದಲಾವಣೆ ಮಾಡಿದ್ದೇವೆ ಮತ್ತು ಕರ್ನಾಟಕ ಸರ್ಕಾರದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಆರ್‌ಸಿಬಿ ಅಭಿಮಾನಿಗಳನ್ನು ನಾವು ಒತ್ತಾಯಿಸುತ್ತೇವೆ ಎಂದು ಪೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಅನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ ಅವರು ಒಂದು ಸಾಲಿನ ಪೋಸ್ಟ್‌ ಮಾಡಿದ್ದಾರೆ.

ಆರ್‌ಸಿಬಿ ದುರಂತ ವಿರಾಟ್ ಕೊಹ್ಲಿ ಪೋಸ್ಟ್‌: ಇನ್ನು ಈ ದುರಂತದ ಬಗ್ಗೆ ವಿರಾಟ್ ಕೊಹ್ಲಿ ಅವರು, At a loss for words. Absolutely gutted 💔 ಈ ಘಟನೆಯ ಬಗ್ಗೆ ರಿಯಾಕ್ಟ್‌ ಮಾಡುವುದಕ್ಕೆ ಪದಗಳೇ ಬರುತ್ತಿಲ್ಲ. ಈ ದುರ್ಘಟನೆಯಿಂದ ನಾನು ಕುಗ್ಗಿ ಹೋಗಿದ್ದೇನೆ ವಿರಾಟ್ ಕೊಹ್ಲಿ ಅವರು ಪೋಸ್ಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+