ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ

Posted By: ಶಿರಸಿ ಪ್ರತಿನಿಧಿ
Subscribe to Oneindia Kannada

ಶಿರಸಿ, ಜನವರಿ 14: ಸುದ್ದಿ ಟಿವಿಯ ಉತ್ತರಕನ್ನಡ ಜಿಲ್ಲಾ ವರದಿಗಾರನಾಗಿ ಶಿರಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೌನೇಶ ಪೋತರಾಜ (28) ತನ್ನ ಸ್ವಂತ ಊರಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಮರಕ್ಕೆ ಢಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಶನಿವಾರ ಶಿರಸಿಯಲ್ಲಿ ನಡೆದ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಈ ವಿಷಯದ ಕುರಿತು ನಡೆದ ರಾಜ್ಯ ಸಮಾವೇಶದ ವರದಿಯನ್ನು ಮಾಡಿ ಬಳಿಕ ರಾತ್ರಿ ವೇಳೆ ತನ್ನ ಊರಾದ ಹಾವೇರಿಯ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದರು.

TV reporter Mounesh Potharaj dies in an accident

ರಾತ್ರಿ ವೇಳೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.ತಿರುವಿನಿಂದ ಕೂಡಿದ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ರಸ್ತೆ ಕಾಣದಾಗಿ ಈ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದೆ.

ಪತ್ರಕರ್ತ ಡಾ. ವೀರೇಶ್ ಹಿರೇಮಠ ಅಪಘಾತದಲ್ಲಿ ದುರ್ಮರಣ

ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

TV reporter Mounesh Potharaj dies in an accident

ಮೌನೇಶ್, ತಮ್ಮ ಉತ್ತಮ ವರದಿಗಾರಿಕೆಯ ಜತೆಗೆ ಪ್ರಗತಿಪರ ಚಿಂತಕರಾಗಿ, ಸಾಹಿತಿಯಾಗಿಯೂ ಅತೀ ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಭಾನ್ವಿತರಾಗಿ ಹೊರಹೊಮ್ಮಿದ್ದರು. ಸಿನಿಮಾಗಳಿಗೆ ಸಾಹಿತ್ಯಗಳನ್ನು ಕೂಡ ಅವರು ಬರೆಯುತ್ತಿದ್ದರು.

ಮೌನೇಶ್ ಅವರ ದುರಂತ ಸಾವಿಗೆ ಕಂಬನಿ ಮಿಡಿದು, ಅನೇಕ ಸ್ನೇಹಿತರು ಫೇಸ್ ಬುಕ್ ನಲ್ಲಿ ತಮ್ಮ ದುಃಖ ತೋಡಿಕೊಂಡಿದ್ದಾರೆ. ದಯಾನಂದ ಟಿ.ಕೆ ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ:

ಇತ್ತೀಚಿಗಷ್ಟೆ ಫಸ್ಟ್ ನ್ಯೂಸ್ ಗೆ ಬೆಳಗಾವಿ ಜಿಲ್ಲಾ ವರದಿಗಾರನಾಗಿ ಆಯ್ಕೆಯಾಗಿರುವುದಾಗಿ ಕೂಡ ಇತರ ವರದಿಗಾರರೊಂದಿಗೆ ಹಂಚಿಕೊಂಡಿದ್ದರು. ಎಲ್ಲರೊಂದಿಗೆ ಸ್ನೇಹಿಯಾಗಿದ್ದ ಅವರ ಅಗಲಿಕೆಗೆ ಮಿತ್ರ ವೃಂದ ಕಂಬನಿ ಮಿಡಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Channel Suddi TV reporter Mounesh Potharaj dies in an accident in the wee hours today(Jan 14) near Sirsi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ