ಉತ್ತರಕನ್ನಡದಲ್ಲಿ ಇಬ್ಬರನ್ನು ಬಲಿ ಪಡೆದ ಮಂಗನ ಕಾಯಿಲೆ
ಸಿದ್ದಾಪುರ, ಜನವರಿ, 22: ಉತ್ತರ ಕನ್ನಡದಲ್ಲಿ ಮಂಗನಕಾಯಿಲೆ ಮತ್ತೆರೆಡು ಬಲಿ ಪಡೆದಿದೆ. ತಾಲೂಕಿನ ವಂದಾನೆ ಸಮೀಪದ ಬಾಳಗೋಡು ಗ್ರಾಮದಲ್ಲಿ ಸೋಮವಾರ ಒಂದೇ ದಿನ ಇಬ್ಬರು ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದಾರೆ.
ಸೂರ್ಯಕಾಂತ ಗಣಪತಿ ಹೆಗಡೆ(3), ಸಾವಿತ್ರಿ ಹಸ್ಲರ್ ಮೃತರು. ಸೂರ್ಯಕಾಂತ ಹೆಗಡೆ ಅವರಿಗೆ ಕೆಲವು ದಿನಗಳಿಂದ ಜ್ವರ, ಮೈಕೈ ನೋವು ಕಾಣಿಸಿಕೊಂಡಿತ್ತು, ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಾವಿತ್ರಿ ಹಸ್ಲರ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

ಅದೇ ಗ್ರಾಮದ ಗಣಪ ಎನ್ನುವವರಿಗೂ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಳಗೋಡು ಸಮೀಪ ಮಂಗಳಗಳು ಸಾವನ್ನಪ್ಪಿದ್ದು ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.












Click it and Unblock the Notifications