ನಮ್ಮ ನಾಡಿನ ವಿಶಿಷ್ಟ ನದಿ 'ಅಘನಾಶಿನಿ' ಸಾಕ್ಷ್ಯಚಿತ್ರ ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03:ಕಳೆದ ಐದು ವರುಷಗಳಿಂದ ಭಾರತ ಭೂದೃಶ್ಯಗಳ ಅನನ್ಯ ಛಾಯಾಗ್ರಹಣದಲ್ಲಿ ತೊಡಗಿಕೊಂಡಿರುವ ಲ್ಯಾಂಡ್ಸ್ಕೇಪ್ ವಿಝಾರ್ಡ್ಸ್ ತಂಡದಿಂದ ಹೊರಬರುತ್ತಿರುವ ಸಾಕ್ಷ್ಯ ಚಿತ್ರ "ಅಘನಾಶಿನಿ' ಇದೇ ಭಾನುವಾರ ತೆರೆಕಾಣಲಿದೆ.

ಪಶ್ಚಿಮ ಘಟ್ಟದ ನದಿಗಳಲ್ಲೇ ಬಹು ವಿಶೇಷವಾದದ್ದು ಅಘನಾಶಿನಿ. ಅಭಿವೃದ್ಧಿಯ ನೆಪದಲ್ಲಿ ನಡೆಯುವ ಎಲ್ಲ ಹಿಂಸೆಗಳಿಂದ ಅದೃಷ್ಟವಶಾತ್ ತಪ್ಪಿಸಿಕೊಂಡು ಸಾವಿರಾರು ವರುಷಗಳಿಂದ ತನ್ನದೇ ಹರಿವಿನಲ್ಲಿ ಸಾಗುತ್ತಿದೆ.

Documentary on a Unique River in India - Aghanashini

ತನ್ನತನ ಮತ್ತು ಪಾವಿತ್ರ್ಯತೆ ಕಾಪಾಡಿಕೊಂಡಿರುವ ಅಘನಾಶಿನಿ ಅನೇಕ ಕೌತುಕಮಯ ಸಂಗತಿಯನ್ನು ಒಳಗೊಂಡಿದೆ. ಅವುಗಳಲ್ಲಿ ಕೆಲವು ವಿಶ್ವದಲ್ಲೇ ಎಲ್ಲಿಯೂ ಕಾಣಸಿಗದಂತವು.

ಅಂತವುಗಳಲ್ಲಿ ಹಲವು ವಿಶೇಷ ಕಥೆಗಳನ್ನು ಆಯ್ದುಕೊಂಡು ನದಿಯ ನಿರೂಪಣೆಯಲ್ಲೇ ಚಿತ್ರ ಮೂಡಿಸಿರುವುದು ಈ ಸಾಕ್ಷ್ಯಚಿತ್ರದ ಹೆಗ್ಗಳಿಕೆ.

ಅಶ್ವಿನಿ ಕುಮಾರ ಭಟ್ ನಿರ್ದೇಶನದಲ್ಲಿ ರೂಪುಗೊಂಡಿರುವ 'ಅಘನಾಶಿನಿ' ಯು ರೋಹಿಣಿ ನಿಲೇಕಣಿ ಫಿಲಾನಥ್ರೋಪಿಸ್ ಸಹಭಾಗಿತ್ವದಲ್ಲಿ ಮತ್ತು ಕ್ರೌಡ್ ಫಂಡಿಂಗ್ ನಲ್ಲಿ ನಿರ್ಮಾಣ ಗೊಂಡಿದೆ.


ಶ್ರೀಮತಿ ರೋಹಿಣಿ ನಿಲೇಕಣಿ, ಪ್ರಸಿದ್ಧ ಪತ್ರಕರ್ತ ಮತ್ತು ಪರಿಸರ ಅಂಕಣಕಾರ ನಾಗೇಶ್ ಹೆಗಡೆ, ಐ. ಎಫ್. ಎಸ್. ವಿಜಯ್ ಮೋಹನ ರಾಜ್ ಇನ್ನಿತರ ಪ್ರಮುಖರ ಸಮ್ಮುಖದಲ್ಲಿ ಎಂ. ಜಿ. ರೋಡ್ ಬಳಿಯಿರುವ ಮದರ್ ಟೆಕ್ಲಾ ಸಭಾಂಗಣದಲ್ಲಿ ಆಗಸ್ಟ್ 6ರ ಸಂಜೆ 4 ರಿಂದ 7 ರವೆರೆಗೆ ಸಾಕ್ಷ್ಯಚಿತ್ರದ ಇಂಗ್ಲಿಷ್ ಆವೃತ್ತಿಯ ಬಿಡುಗಡೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
'Aghanashini', which is a unique river from the perspective that it still flows in the same course since thousands of years due to absence of any dams to change its flow. Documentary is set for release on August 06 at Mother Tekla auditorium, MG Road, Bengaluru.
Please Wait while comments are loading...