ಧಾರವಾಡ ಹಾಲು ಒಕ್ಕೂಟದಿಂದ ಇತಿಹಾಸ ನಿರ್ಮಾಣ

By: ನಮ್ಮ ಪ್ರತಿನಿಧಿ
Subscribe to Oneindia Kannada

ಶಿರಸಿ, ಅಕ್ಟೋಬರ್ 26: ಧಾರವಾಡ ಹಾಲು ಒಕ್ಕೂಟದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಹಾಲು ಶೇಖರಣೆ ಆಗುತ್ತಿದೆ. ಗುಣಮಟ್ಟದ ಜೊತೆ ರಾಜಿ ಮಾಡಿಕೊಳ್ಳದೇ ಪ್ರತಿ ದಿವಸ 2 ಲಕ್ಷ 48 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಹೆಗಡೆ ತಿಳಿಸಿದರು.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕಲಬರಕೆ ಇಲ್ಲದೇ 4 ಜಿಲ್ಲೆಗಳಿಂದ ಸುಮಾರು 931 ಹಾಲು ಉತ್ಪಾದಕರ ಸಂಘದಿಂದ 5 ಸಾವಿರಕ್ಕೂ ಅಧಿಕ ರೈತರನ್ನು ಹೊಂದಿ ಉತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸಲಾಗುತ್ತಿದೆ.

ಹುಬ್ಬಳ್ಳಿ, ಧಾರವಾಡ, ಗದಗ, ಉತ್ತರ ಕನ್ನಡ ಹೀಗೆ ವಿವಿಧ ಕಡೆಗಳಲ್ಲಿ ಹಾಲು ಸರಬರಾಜು ಮಾಡುತ್ತಿದ್ದು, ಉತ್ತಮ ಅಭಿಪ್ರಾಯವನ್ನು ಹೊಂದಿದೆ ಎಂದರು.

ಖಾಸಗಿ ಹಾಲು ಉತ್ಪಾದಕರ ಸ್ಪರ್ಧೆಯ ನಡುವೆಯೂ ಅತ್ಯಂತ ಉತ್ತಮ ವಹಿವಾಟನ್ನು ನಂದಿನಿ ಬ್ರಾಂಡ್ ನಡೆಸುತ್ತಿದೆ. ಮೊಸರು, ಹಾಲು, ತುಪ್ಪ ಹೀಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಸ್ಥೆಗೆ ಐಎಸ್ಒ ಪ್ರಮಾಣವನ್ನು ಪಡೆಯುವ ಕಾರ್ಯ ಮುಂದುವರೆದಿದ್ದು, ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸೆಟ್ ಕರ್ಡ್ಸ ಮಾಡುವ ಉದ್ದೇಶವಿದ್ದು, ಈಗಾಗಲೇ ಗಡಿಗೆ ಮೊಸರನ್ನು ಪೂರೈಕೆ ಮಾಡುತ್ತಿದ್ದೇವೆ ಎಂದರು.

ಕಾಲಕ್ಕೆ ತಕ್ಕಂತೆ ದರ ಬದಲಾವಣೆ : ಹಾಲಿನ ಬೇಡಿಕೆ ಮತ್ತು ಮಾರಾಟವನ್ನು ಅವಲಂಬಿಸಿ ಕಾಲಕ್ಕೆ ತಕ್ಕಂತೆ ದರ ಬದಲಾವಣೆ ಮಾಡಲಾಗುತ್ತದೆ. ಕಳೆದ ಜನವರಿಯಲ್ಲಿ 1.75 ಪೈಸೆ ಯಂತೆ ಪ್ರತಿ ಲೀಟರ್ ಗೆ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದ್ದನ್ನು ಈಗ ಹಿಂದಕ್ಕೆ ಪಡೆಯಲಾಗಿದೆ. ಅದನ್ನು ಮತ್ತೆ ಮುಂದಿನ ಜನವರಿಯಲ್ಲಿ ಪರಿಶೀಲನೆ ಮಾಡಲಾಗುವುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dharwad Milk Union Limited KMF creates history with huge collection of Milk per day. 2, 48, 000 Liters milk per day is collected from four districts(Hubli, Dharwad, Gadag and Uttar Kananda) consists of 931 milk producing association.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ