ಹಸಿರುಮಕ್ಕಿಗೆ ಬಂತು ಲಾಂಚ್; ಸಂತಸಗೊಂಡ ಜನರು
ಶಿವಮೊಗ್ಗ, ಮೇ 01; ಸಾಗರ ತಾಲೂಕಿನಲ್ಲಿ ಶರಾವತಿ ಹಿನ್ನೀರು ಪ್ರದೇಶದ ಹಸಿರುಮಕ್ಕಿಗೆ ಬದಲಿ ಲಾಂಚ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 30ರ ಭಾನುವಾರ ಸಂಜೆ ಲಾಂಚ್ ವ್ಯವಸ್ಥೆ ಸ್ಥಗಿತಗೊಂಡ ಬಳಿಕ ಉಂಟಾಗಿದ್ದ ಸಮಸ್ಯೆ ಬಗೆಹರಿದಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆಯಾಗಿದ್ದು, ಜನರು ಸಂತಸಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಸಿರುಮಕ್ಕಿಗೆ ಸೋಮವಾರ ಬದಲಿ ಲಾಂಚ್ ವ್ಯವಸ್ಥೆ ಮಾಡಲಾಗಿದೆ. ಸಿಗಂದೂರಿನ ಲಾಂಚ್ ಅನ್ನು ಇಲ್ಲಿಗೆ ತಂದು ಸೋಮವಾರದಿಂದ ಓಡಿಸಲಾಗುತ್ತಿದೆ, ಇದರಿಂದ ಜನರಿಗೆ ಸಹಾಯಕವಾಗಿದೆ. ಸಾಗರ ಮತ್ತು ಹೊಸನಗರ ಸಂಪರ್ಕ ಕಲ್ಪಿಸುವ ಪ್ರಮುಖವಾದ ಲಾಂಚ್ ಮಾರ್ಗ ಇದಾಗಿದೆ.

ಭಾನುವಾರ ಹಸಿರುಮಕ್ಕಿ ಲಾಂಚ್ ಸಾಗುತ್ತಿದ್ದ ವೇಳೆ ಡೋರ್ ಕೇಬಲ್ ತುಂಡಾಗಿ ಸಂಚಾರ ಸ್ಥಗಿತವಾಗಿತ್ತು. ಲಾಂಚ್ ರಿಪೇರಿಯಾಗಿ ಮತ್ತೆ ಸಂಚರಿಸಲು ನಾಲ್ಕೈದು ದಿನ ಬೇಕು ಎಂದು ಅಂದಾಜಿಸಲಾಗಿತ್ತು. ಆದ್ದರಿಂದ ಗ್ರಾಮದ ಜನರು ಸಂಚಾರಕ್ಕೆ ಲಾಂಚ್ ಇಲ್ಲದೇ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿತ್ತು.
ಆದರೆ ಹಸಿರುಮಕ್ಕಿ ಪ್ರದೇಶಕ್ಕೆ ಭಾನುವಾರ ಸಂಜೆಯೇ ಸಿಗಂದೂರಿನ ಲಾಂಚ್ ತರಲಾಗಿತ್ತು. ಹೊಳೆಬಾಗಿಲಿನಲ್ಲಿ ಎರಡು ಲಾಂಚ್‌ಗಳಿತ್ತು. ಅದರಲ್ಲಿ ಒಂದನ್ನು ತಂದು ಸೋಮವಾರ ಹಸಿರುಮಕ್ಕಿಯಲ್ಲಿ ಲಾಂಚ್ ಸಂಚಾರ ಆರಂಭಿಸಲಾಗಿದೆ. ಜನರು ಸಹ ಸಂಚಾರ ನಡೆಸುತ್ತಿದ್ದಾರೆ.

ಸಂಚಾರ ನಡೆಸಲಿರುವ ಲಾಂಚ್; ಡೋರ್ ಕೇಬಲ್ ತುಂಡಾಗಿರುವ ಹಸಿರುಮಕ್ಕಿ ಲಾಂಚ್ ದುರಸ್ತಿ ಆಗುವ ತನಕ ಈ ಪರ್ಯಾಯ ಲಾಂಚ್ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಮಾಹಿತಿ ನೀಡಲಾಗಿದೆ. ಇದರಿಂದಾಗಿ ಗ್ರಾಮಗಳಿಗೆ ಹೋಗಲು ಲಾಂಚ್ ಅವಲಂಬಿಸಿರುವ ಜನರಿಗೆ ಸಹ ಸಹಾಯಕವಾಗಿದೆ.
ಭಾನುವಾರ ಹಸಿರುಮಕ್ಕಿ ಲಾಂಚ್ ಕೆಬಿ ಸರ್ಕಲ್ ಕಡೆಯಿಂದ ಸಾಗರ ಕಡೆ ಹೋಗುವಾಗ ಡೋರ್ ಕೇಬಲ್ ಕಟ್ ಆಗಿತ್ತು. ಆಗ ಡೋರ್ ಮೇಲೆ ನಿಲ್ಲಿಸಿದ್ದ ಮೂರು ಬೈಕ್ ನೀರಿಗೆ ಬಿದ್ದಿತ್ತು. ಲಾಂಚ್ ಸಿಬ್ಬಂದಿಯೊಬ್ಬರು ಸಹ ನೀರಿಗೆ ಬಿದ್ದಿದ್ದರು. ಬಳಿಕ ಅವರು ಈಜಿ ದಡ ಸೇರಿದ್ದರು. ಯಾವುದೇ ಅಪಾಯ ಉಂಟಾಗಿರಲಿಲ್ಲ.
ಲಾಂಚ್ ಸಂಚಾರ ನಡೆಸುವಾಗ ಡೋರ್ ಅತಿ ಮುಖ್ಯವಾಗಿದೆ. ಲಾಂಚ್‌ಗೆ ಜನರು ಹತ್ತಲು, ವಾಹನ ಹತ್ತಿಸಲು ದಡದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಆದರೆ ಹಸಿರುಮಕ್ಕಿ ಲಾಂಚ್‌ನ ಡೋರ್ ಕೇಬಲ್ ಕಟ್ಟಾದ ಕಾರಣ ಲಾಂಚ್ ಸೇವೆ ಸ್ಥಗಿತಗೊಂಡಿತ್ತು.
ಬೇಸಿಗೆಯಲ್ಲಿ ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಇಳಿಕೆಯಾದರೆ ಲಾಂಚ್ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. 2019ರಲ್ಲಿ ಸಾಗರ ಮತ್ತು ಹೊಸನಗರ ತಾಲೂಕು ಸಂಪರ್ಕಕ್ಕೆ ಕೊಂಡಿಯಾದ ಹಸಿರುಮಕ್ಕಿ ಲಾಂಚ್ ಅನ್ನು ನೀರಿನ ಕೊರತೆ ಕಾರಣ ಬೇಸಿಗೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ನೀರು ಕಡಿಮೆಯಾಗಿ ಕೆಸರು ಹೆಚ್ಚಾದರೆ ಲಾಂಚ್ ಸಂಚಾರ ಸ್ಥಗಿತವಾಗುತ್ತದೆ. ಲಾಂಚ್ ಸಂಚಾರ ಸ್ಥಗಿತಗೊಂಡರೆ ಜನರು ಸುಮಾರು 30ಕ್ಕೂ ಹೆಚ್ಚು ಕಿ. ಮೀ. ಸುತ್ತಿಕೊಂಡು ಸಂಚಾರ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಸಾಗರದ ಹುಲಿದೇವರ ಬನದ ಬಳಿಯ ಹಿನ್ನೀರಿನಿಂದ ಹೊಸನಗರ ತಾಲೂಕಿನ ಕೆ. ಬಿ. ಕ್ರಾಸ್ ಬಳಿಯ ದಡಕ್ಕೆ ಸಂಪರ್ಕಿಸುವ ಹಸಿರುಮಕ್ಕಿ ಲಾಂಚ್ 2020ರಲ್ಲಿ ಒಮ್ಮೆ ಶರಾವತಿ ಹಿನ್ನೀರಿನಲ್ಲಿ ಸಿಲುಕಿಕೊಂಡಿತ್ತು. ಆಗ ಸುಮಾರು 50ಕ್ಕೂ ಹೆಚ್ಚು ಜನರು ಲಾಂಚ್‌ನಲ್ಲಿದ್ದರು. ಭಾರೀ ಮಳೆ, ಗಾಳಿಯ ನಡುವೆ ಸುಮಾರು 2 ಗಂಟೆಗಳ ಕಾಲ ಸಿಲಕಿದ್ದ ಜನರನ್ನು ಬಳಿಕ ತೆಪ್ಪದ ಸಹಾಯದಿಂದ ರಕ್ಷಣೆ ಮಾಡಲಾಗಿತ್ತು.












Click it and Unblock the Notifications