ಶಿಕಾರಿಪುರದ ಮದಗದ ಕೆರೆ ಭರ್ತಿ, ರೈತರಲ್ಲಿ ಸಂತಸ

ಶಿವಮೊಗ್ಗ, ಜುಲೈ 25 : ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮದಗದ ಕೆರೆ ಕೋಡಿ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಮದಗದ ಕೆಂಚಮ್ಮ ಕೆರೆ (ಮದಗದ ಕೆರೆ) ಸಹ ಭರ್ತಿಯಾಗಿದ್ದು, ಜನರಲ್ಲಿ ಸಂತಸ ಮೂಡಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹಾವೇರಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ಮದಗದ ಕೆರೆ ಇದೆ. ಈ ಕೆರೆಗೆ ಪೂಜೆ ಸಲ್ಲಿಸುವ ಮೂಲಕ ಶಿಕಾರಿಪುರ, ಹಾವೇರಿಯ ಜನರು ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಜನಪದಲ್ಲಿಯೂ ಈ ಕೆರೆಯ ಉಲ್ಲೇಖವಿದೆ.

1650 ಎಕರೆ ವಿಸ್ತೀರ್ಣಕ್ಕೆ ನೀರು ಒದಗಿಸುವ ಮದಗದ ಕೆರೆ ಭಾರೀ ಮಳೆಯಿಂದಾಗಿ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ಎರಡೂ ಜಿಲ್ಲೆಯ ಗಡಿಭಾಗದ ಜನರು ಇದರಿಂದ ಸಂತಸಗೊಂಡಿದ್ದಾರೆ.

Villagers happy after Madagada Kere overflows

ಜನಪದದಲ್ಲಿಯೂ ಈ ಕೆರೆಯ ಉಲ್ಲೇಖವಿದೆ. ಮದಗದ ಕೆರೆ ವಿಷಯ ಪ್ರಸ್ತಾಪಿಸುವಾಗ ಎಂದಾಗ ಮದಗದ ಕೆಂಚಮ್ಮ ಅವರ ಹೆಸರು ಕೇಳಿಬರುತ್ತದೆ. ಕೆಂಚಮ್ಮ ಜನಪದರ ಬಾಯಿಯಲ್ಲಿ ನೆಲೆ ನಿಂತಿರುವ ಬಲಿದಾನಿ ಮಹಿಳೆ.

ಕೆಂಚಮ್ಮ ಮದಗದ ಮಲ್ಲನ ಗೌಡ ಅವರ ಸೊಸೆ. ಕೆಂಚಮ್ಮ ತನ್ನ ಜೀವವನ್ನು ತ್ಯಾಗ ಮಾಡಿ ಕೆರೆಗೆ ನೀರು ದೊರಕುವಂತೆ ಮಾಡಿದಳು ಎಂಬುದು ಇತಿಹಾಸ. ಆದ್ದರಿಂದ, ಮಗದಗ ಕೆರೆ ತುಂಬಿದಾಗ ಕೆಂಚಮ್ಮನನ್ನು ಜನರು ನೆನೆಪಿಸಿಕೊಳ್ಳುತ್ತಾರೆ.

Villagers happy after Madagada Kere overflows

ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಜನರು ಈ ಕೆರೆಗೆ ಆಗಮಿಸುತ್ತಾರೆ. ಕೆರೆಯಲ್ಲಿ ಸ್ನಾನ ಮಾಡಿ, ಕೆರೆಗೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ನಂತರ ಕೆರೆ ದಡದಲ್ಲಿರುವ ಕೆಂಚಮ್ಮ ದೇವಾಲಯಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶಿಕಾರಿಪುರ ಮಾತ್ರವಲ್ಲದೇ ಪಕ್ಕದ ಹಾವೇರಿ ಜಿಲ್ಲೆಯ ಮಾಸೂರು. ಹಿರೇಕೆರೂರು, ರಟ್ಟೇಹಳ್ಳಿ, ರಾಣೆಬೆನ್ನೂರಿನಿಂದಲೂ ಜನರು ಆಗಮಿಸಿ ಕೆರೆ ಮತ್ತು ಕೆಂಚಮ್ಮ ದೇವಿಗೆ ವಿಶೇಪ ಪೂಜೆ ಸಲ್ಲಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+