BREAKING: ಆಗುಂಬೆ ಘಾಟಿಯಲ್ಲಿ 10 ದಿನ ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ಯಾವುದು?
ಶಿವಮೊಗ್ಗ, ಮಾ. 3: ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ಥಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 5ರಿಂದ ಮಾರ್ಚ್ 15ರವರೆಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಲಘು ವಾಹನಗಳು ಮತ್ತು ಭಾರಿ ವಾಹನಗಳಿಗೆ ಪ್ರತ್ಯೇಕ ಮಾರ್ಗವನ್ನು ಸೂಚಿಸಲಾಗಿದೆ.
ಯಾವುದು ಪರ್ಯಾಯ ಮಾರ್ಗ?
ಪ್ರಸ್ತುತ ಮಾರ್ಗ : ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಉಡುಪಿ, ಮಂಗಳೂರು

ಪರ್ಯಾಯ ಮಾರ್ಗ:
ಲಘು ವಾಹನಗಳಿಗೆ - ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಾ ಘಾಟ್, ಕಾರ್ಕಳ, ಉಡುಪಿ
ಭಾರಿ ವಾಹನಗಳು - ಶಿವಮೊಗ್ಗ, ಆಯನೂರು, ಆನಂದಪುರ, ಸಾಗರ, ಹೊನ್ನಾವರ ಮೂಲಕ ಚಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications