ಜಿಲ್ಲೆಗೆ ಬಂದ ಐದು ತಿಂಗಳಲ್ಲೇ ಮೊದಲ ಮಹಿಳಾ ಎಸ್ಪಿ ವರ್ಗಾವಣೆ
ಶಿವಮೊಗ್ಗ, ಆಗಸ್ಟ್ 2: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದಂತೆ ರಾಜ್ಯ ಪೋಲೀಸ್ ಇಲಾಖೆ ಅಧಿಕಾರಿಗಳ ವರ್ಗಾವಣೆ ಪ್ರಾರಂಭವಾಗಿದೆ. ಜಿಲ್ಲೆಯ ಮೊದಲ ಮಹಿಳಾ ಎಸ್ಪಿ ಡಾ.ಅಶ್ವಿನಿ ಬಂದ ಐದೇ ತಿಂಗಳಲ್ಲಿ ವರ್ಗಾವಣೆಯಾಗಿದ್ದಾರೆ. ಅವರ ಜಾಗಕ್ಕೆ ನೂತನ ಎಸ್ಪಿಯಾಗಿ ಕೆ.ಎಂ.ಶಾಂತರಾಜು ಬರಲಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಕೇವಲ ಐದು ತಿಂಗಳ ಹಿಂದೆಯಷ್ಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆ ಕಾರಣಕ್ಕೇ ಡಾ.ಅಶ್ವಿನಿ ಎಲ್ಲರ ಗಮನ ಸೆಳೆದಿದ್ದರು.

ಬೆಂಗಳೂರಿನ ಗುಪ್ತಚರ ವಿಭಾಗದ ಡೆಪ್ಯುಟಿ ಕಮಿಷನರ್ ಆಗಿರುವ ಕೆ.ಎಂ.ಶಾಂತರಾಜು ಅವರನ್ನು ಶಿವಮೊಗ್ಗ ಎಸ್ಪಿಯಾಗಿ ವರ್ಗಾಯಿಸಲಾಗಿದೆ.













Click it and Unblock the Notifications