ಶಿವಮೊಗ್ಗ-ಯಶವಂತಪುರ ಶತಾಬ್ದಿ ರೈಲಿಗೆ ಹೊಸ ನಿಲುಗಡೆ

ಶಿವಮೊಗ್ಗ, ಜನವರಿ 15 : ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸುವ ಜನಶತಾಬ್ದಿ ರೈಲಿಗೆ ಮತ್ತೊಂದು ನಿಲುಗಡೆಯನ್ನು ಕಲ್ಪಿಸಲಾಗಿದೆ. ವಾರದ ಆರು ದಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ.

ನೈಋತ್ಯ ರೈಲ್ವೆ ಶಿವಮೊಗ್ಗ-ಯಶವಂತಪುರ ರೈಲು (12089/12090) ಜನವರಿ 15ರಿಂದ ತರೀಕೆರೆಯಲ್ಲಿಒಂದು ನಿಮಿಷ ನಿಲುಗಡೆಗೊಳ್ಳಲಿದೆ ಎಂದು ಹೇಳಿದೆ. ಪ್ರಾಯೋಗಿಕವಾಗಿ ರೈಲನ್ನು ಜುಲೈ 14ರ ತನಕ ನಿಲ್ಲಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ-ಯಶವಂತಪುರ (12090) ರೈಲು ಬೆಳಗ್ಗೆ 6.04ಕ್ಕೆ ತರೀಕೆರೆ ನಿಲ್ದಾಣ ತಲುಪಿ 6.05ಕ್ಕೆ ಹೊರಡಲಿದೆ. ಯಶವಂತಪುರ-ಶಿವಮೊಗ್ಗ (12089) ರೈಲು ರಾತ್ರಿ 9.02ಕ್ಕೆ ತರೀಕೆರೆ ನಿಲ್ದಾಣ ತಲುಪಲಿದ್ದು, 9.03ಕ್ಕೆ ಹೊರಡಲಿದೆ ಎಂದು ಪ್ರಕಟಣೆ ಹೇಳಿದೆ.

Shivamoggg-Yeshwantpur Shatabdi Train To Stop At Tarikere

ರೈಲಿಗೆ ನಾಮಕರಣ : "ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಕೆಳದಿ ರಾಣಿ ಚನ್ನಮ್ಮಾಜಿ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗುತ್ತದೆ" ಎಂದು ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.

ಕೆಳದಿ ರಾಜವಂಶದ ಹೆಸರಾಂತ ರಾಣಿ ಚನ್ನಮ್ಮನ ಹೆಸರನ್ನು ರೈಲಿಗೆ ಇಡಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ರೈಲ್ವೆ ಇಲಾಖೆಯಿಂದ ಅಂತಿಮ ಒಪ್ಪಿಗೆ ಸಿಗುವುದು ಮಾತ್ರ ಬಾಕಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+