ಶಿವಮೊಗ್ಗ ಕೋರ್ಟ್ ಶಿರಸ್ತೇದಾರ್ ಮಗಳು ನದಿಯಲ್ಲಿ ಬಿದ್ದು ಸಾವು

ತೀರ್ಥಹಳ್ಳಿ, ಅಕ್ಟೋಬರ್ 21 : ತಾಲೂಕಿನ ಮಹಿಷಿ ನದಿಯಲ್ಲಿ ಶಿವಮೊಗ್ಗದ ಯುವತಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.

ಶಿವಮೊಗ್ಗ ನ್ಯಾಯಾಲಯದ ಶಿರಸ್ತೇದಾರ್ ಲಿಂಗರಾಜು ಅವರು ಕುಟುಂಬ ಸಮೇತ ಮಹಿಷಿ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಲಿಂಗರಾಜು ಅವರ ಮಗಳು ಗಾನ (22) ಕಾಲು ಜಾರಿ ನದಿಯಲ್ಲಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ವರೆಗೆ ಮೃತದೇಹ ಪತ್ತೆಯಾಗಿಲ್ಲ.

Drown

ಶವವನ್ನು ನೀರಿನಿಂದ ತೆಗೆಯಲು ಸ್ಥಳೀಯರು ಮತ್ತು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಮೃತಪಟ್ಟಿರುವ ಗಾನ ಅವರು ಲಿಂಗರಾಜು ಮತ್ತು ಉಷಾ ದಂಪಯ ಮಗಳು. ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+