ಶಿವಮೊಗ್ಗ ಬಂದ್ ಗೆ ಹಿಂದುಪರ ಸಂಘಟನೆಗಳ ಕರೆ
ಶಿವಮೊಗ್ಗ, ಫೆ. 20: ಶಿವಮೊಗ್ಗ ಗಲಭೆ ನಂತರ ಹತ್ಯೆಗೀಡಾಗಿದ್ದ ವಿಶ್ವನಾಥ್ ಅಂತ್ಯಸಂಸ್ಕಾರದ ಮೆರವಣಿಗೆ ವೇಳೆ ಮತ್ತೆ ಕಲ್ಲು ತೂರಾಟ ನಡೆದಿದೆ. ನಗರದಲ್ಲಿ ನಿಷೇಧಾಜ್ಞೆಯನ್ನು ಫೆಬ್ರವರಿ 25ರವರೆಗೆ ವಿಸ್ತರಿಸಲಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಫೆಬ್ರವರಿ 21 ರಂದು ಶಿವಮೊಗ್ಗ ಬಂದ್ ಗೆ ಹಿಂದು ಪರ ಸಂಘಟನೆಗಳು ಕರೆ ನೀಡಿವೆ. ವಿಶ್ವನಾಥ್ ಶವ ಮೆರವಣಿಗೆ ವೇಳೆ ಕಿಡಿಗೇಡಿಗಳು ಜಿಲ್ಲಾ ಕಾಂಗ್ರೆಸ್ ಕಚೇರಿ ಮೇಲೆ ಕಲ್ಲು ತೂರಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.[ಚಿತ್ರಗಳಲ್ಲಿ: ಶಿವಮೊಗ್ಗದಲ್ಲಿ ಗುರುವಾರ ನಡೆದಿದ್ದೇನು?]

ಜೈಲ್ ವೃತ್ತದ ಸಮೀಪ ಶವದ ಮೆರವಣಿಗೆ ಸಾಗುತ್ತಿದ್ದಾಗ ಮತ್ತೆ ಘರ್ಷಣೆ ಉಂಟಾಗಿದೆ. ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಫೆಬ್ರವರಿ 19 ರಂದು ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗುಂಪು ಘರ್ಷಣೆ ಆರಂಭವಾಗಿತ್ತು. ಅದೇ ದಿನ ಸಂಜೆ ಗಾಜನೂರು ಬಳಿ ವಿಶ್ವನಾಥ್ ಎಂಬುವೆ ಮೇಲೆ ಹಲ್ಲೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿಶ್ವನಾಥ್ ಸಾವನ್ನಪ್ಪಿದ್ದರು.
ವಿಶ್ವನಾಥ್ ಶವ ಮೆರವಣಿಗೆಯಲ್ಲಿ ಅಸಂಖ್ಯ ಹಿಂದುಪರ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು. ಹಿಂದು ರುದ್ರಭೂಮಿಯಲ್ಲಿ ಶವ ಸಂಸ್ಕಾರ ಹಮ್ಮಿಕೊಳ್ಳಲಾಗಿತ್ತು.
ಶುಕ್ರವಾರ ನಗರಲ್ಲಿ ಅಘೋಷಿತ ಬಂದ್ ವಾತಾವರಣವಿತ್ತು. ಜನ ಸಂಚಾರ ತೀವ್ರ ವಿರಳವಾಗಿತ್ತು. ಅಂತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಪೊಲೀಸರು ನಗರದೆಲ್ಲೆಡೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು.












Click it and Unblock the Notifications