ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ : ಯಡಿಯೂರಪ್ಪ
ಪ್ರಶ್ನೆ : ಬಿಜೆಪಿ, ಕೆಜೆಪಿ ಎಂದು ಯಡಿಯೂರಪ್ಪ ಶಕ್ತಿ ಕಡಿಮೆ ಆಗಿದೆಯೇ?
ಯಡಿಯೂರಪ್ಪ : ನೋಡಿ, ಹಳೆ ವಿಚಾರವನ್ನು ಪುನಃ ಕೆದಕಬೇಡಿ. ಕೆಲವು ನಿಮಿಷಗಳ ಬಳಿಕ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಘೋಷಿಸಿದೆ. ಹಿಂದಿನ ವಿಚಾರಗಳ ಕುರಿತು ಚರ್ಚೆ ಬೇಡ.
ಪ್ರಶ್ನೆ : ಸಂಸದರಾದ ಮೇಲೆ ನಿಮ್ಮ ಮೊದಲ ಆದ್ಯತೆ ಏನು?
ಯಡಿಯೂರಪ್ಪ : ಮೊದಲು ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಿಸಲು ಪ್ರಯತ್ನ ನಡೆಸುತ್ತೇನೆ. ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗಬೇಕು. ಕೈಗಾರಿಕೆಗಳು ಜಿಲ್ಲೆಗೆ ಬರಬೇಕು. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಾಕಿ ಇದೆ.

ಪ್ರಶ್ನೆ : 10 ತಿಂಗಳ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಏನು ಹೇಳುತ್ತೀರಿ?
ಯಡಿಯೂರಪ್ಪ : ಸಿದ್ದರಾಮಯ್ಯ ಸಾಧನೆ ಶೂನ್ಯ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಸ್ತೆಯ ಗುಂಡಿಗಳನ್ನು ಮುಚ್ಚಲು ಸರ್ಕಾರ ವಿಫಲವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಅದರ ತನಿಖೆ ಪೂರ್ತಿ ಮಾಡಿ ನ್ಯಾಯ ಕೊಡಿಸಿಲ್ಲ. ಒಟ್ಟಾರೆ ಸರ್ಕಾರವಿದೆ ಎಂದು ಅನ್ನಿಸುತ್ತಿಲ್ಲ.












Click it and Unblock the Notifications