ಅತ್ಯಾಚಾರ ಆರೋಪ : ವೆಂಕಟೇಶಮೂರ್ತಿ ಪೊಲೀಸರ ವಶಕ್ಕೆ
ಶಿವಮೊಗ್ಗ, ಸೆಪ್ಟೆಂಬರ್ 12 : ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ವೆಂಕಟೇಶಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ಯಾಚಾರ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಚಂದ್ರಾವತಿ ಅವರ ಪತಿ ವೆಂಕಟೇಶಮೂರ್ತಿ ಅವರ ವಿರುದ್ಧ ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ದರಿಂದ, ವೆಂಕಟೇಶಮೂರ್ತಿ ಅವರನ್ನು ವಶಕ್ಕೆ ಪಡೆಯಲಾಗಿದೆ.[ವೆಂಕಟೇಶಮೂರ್ತಿ ದಂಪತಿ ಮನೆ ಮೇಲೆ ದಾಳಿ]

ಕೆಲಸ ಕೊಡಿಸುವುದಾಗಿ ವೆಂಕಟೇಶಮೂರ್ತಿ ಅವರು ಬೆಂಗಳೂರಿನಿಂದ ಮಹಿಳೆಯನ್ನು ಕರೆತಂದಿದ್ದರು. ಭಾನುವಾರ ಸಂಜೆ ಆಕೆಯನ್ನು ಎಪಿಎಂಸಿ ಬಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂಬುದು ಆರೋಪವಾಗಿದೆ.[ಅನಾರೋಗ್ಯದ ನಿಮಿತ್ತ ವಿಚಾರಣೆಗೆ ಹಾಲಪ್ಪ ಚಕ್ಕರ್]
ಮಹಿಳೆ ನೀಡಿದ ದೂರಿನ ಅನ್ವಯ ವೆಂಕಟೇಶಮೂರ್ತಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications