ಶಿವಮೊಗ್ಗ: ಮಳೆಯಿಂದ ಮತ್ತೆ ಕುಸಿದ ರಂಜದಕಟ್ಟೆ ಸೇತುವೆ
ಶಿವಮೊಗ್ಗ, ಅಕ್ಟೋಬರ್ 15: ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೇ ಮಳೆಯಾಗುತ್ತಿದೆ. ಶಿವಮೊಗ್ಗದಲ್ಲೂ ಮಳೆಯಾಗುತ್ತಿದ್ದು, ಈಚೆಗಷ್ಟೆ ದುರಸ್ತಿ ಕಂಡಿದ್ದ ರಂಜದ ಕಟ್ಟೆ ಸೇತುವೆ ಮತ್ತೆ ಕುಸಿದಿದೆ.
ಕುಸಿದು ಬಿದ್ದಿದ್ದ ತೀರ್ಥಹಳ್ಳಿ -ಮಂಗಳೂರು ಸಂಪರ್ಕ ಬೆಸೆಯುವ ರಂಜದಕಟ್ಟೆ ಸೇತುವೆಯನ್ನು ಸೆಪ್ಟೆಂಬರ್ 29ರಂದು ದುರಸ್ತಿಗೊಳಿಸಿ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದೀಗ ಮತ್ತೆ ಸೇತುವೆ ಕುಸಿದಿದೆ.
ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸೇತುವೆಯ ಕೆಲವು ಭಾಗ ಕೊಚ್ಚಿ ಹೋಗಿದೆ. ಹೀಗಾಗಿ ಸಂಚಾರವನ್ನು ನಿಲ್ಲಿಸಲಾಗಿದೆ. ಆಂಬುಲೆನ್ಸ್ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗಗಳು
* ಉಡುಪಿ, ಆಗುಂಬೆ, ಸಾಗರ, ಶಿವಮೊಗ್ಗ ಹೋಗುವವರು ತೀರ್ಥಹಳ್ಳಿ ಮಾರ್ಗದಲ್ಲಿ ಕಲ್ಮನೆ, ಉಂಟೂರುಕಟ್ಟೆ ಕೈಮರ ನಂತರ ಸಿಗುವ ಬಿಳುಕೊಪ್ಪ ಇಲ್ಲಿ ಶಾಲಾ ಸಮೀಪ ಇರುವ ರಸ್ತೆಯಲ್ಲಿ ಸಾತ್ಗೋಡು (7 KM) ಸಂಚರಿಸಿ ಅಲ್ಲಿಂದ ಬಲಭಾಗದಿಂದ ಮುಕ್ತಿಹರಿಹರಪುರ, ಬೊಬ್ಬಿ ಮಾರ್ಗವಾಗಿ ತೀರ್ಥಹಳ್ಳಿ ಮಾರ್ಗ ಸಂಪರ್ಕಿಸಬಹುದು.
* ಆಗುಂಬೆ, ಕಮ್ಮರಡಿ, ರಾಮಕೃಷ್ಣಪುರ, ದೇವಂಗಿ, ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದು.
* ಆಗುಂಬೆ ಕೊಪ್ಪ, ಶಿವಮೊಗ್ಗ ಮಾರ್ಗವಾಗಿ ಸಂಚರಿಸಬಹುದು.
* ಉಡುಪಿ, ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಕವಲೇದುರ್ಗ, ಕೊಂಡ್ಲೂರು, ತೀರ್ಥಹಳ್ಳಿ ಸಂಪರ್ಕಿಸಬಹುದು.












Click it and Unblock the Notifications