ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಶಿವಮೊಗ್ಗ ಪೊಲೀಸರಿಂದ ಹೈಟೆಕ್ ತಂತ್ರಜ್ಞಾನ ಬಳಕೆ
ಶಿವಮೊಗ್ಗ, ಅಕ್ಟೋಬರ್ 28: ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ಮತ್ತು ಅಪರಾಧಿಗಳನ್ನು ಮಟ್ಟಹಾಕಲು ಶಿವಮೊಗ್ಗ ಪೊಲೀಸರು ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕ್ಷಣಮಾತ್ರದಲ್ಲಿ ಅಪರಾಧಿಗಳ ಕ್ರಿಮಿನಲ್ ಹಿಸ್ಟರಿ ಪೊಲೀಸರ ಕೈ ಸೇರುವಂಥ ನೂತನ ಪ್ರಯತ್ನ ಇದಾಗಿದೆ.
ಶಿವಮೊಗ್ಗ ಪೊಲೀಸರು ಅತ್ಯಾಧುನಿಕ ಮೊಬೈಲ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಂ (MCCTNS) ಬಳಕೆ ಆರಂಭಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅವರ ಬೆರಳಚ್ಚು ಪಡೆದು, ತಕ್ಷಣಕ್ಕೆ ಅವರ ಕ್ರಿಮಿನಲ್ ಹಿನ್ನೆಲೆಯಲ್ಲಿ ತಿಳಿಯಬಹುದಾಗಿದೆ. ಇದರಿಂದ ರಾತ್ರಿ ವೇಳೆ ಅಪರಾಧ ಚಟುವಟಿಕೆ ನಿಯಂತ್ರಣ ಸಾಧ್ಯವಾಗಲಿದೆ.

MCCTNS ಕಾರ್ಯ ವಿಧಾನ ಹೇಗೆ..?
ಕ್ರಿಮಿನಲ್ ಚಟುವಟಿಕೆ ಪತ್ತೆ ಹಚ್ಚಲು MCCTNS ಬಳಕೆ ಮಾಡಲಾಗಿದ್ದು, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ರಾತ್ರಿ ಗಸ್ತು ವೇಳೆ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದರೆ ಈತನಕ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಹಿನ್ನೆಲೆ ಕೇಳಿ, ಮನೆಗೆ ತೆರಳುವಂತೆ ಸೂಚಿಸುತ್ತಿದ್ದರು. ಆದರೆ ಇನ್ನುಮುಂದೆ ವಿಚಾರಣೆ ನಡೆಸುವುದರ ಜೊತೆಗೆ ಅನುಮಾನಾಸ್ಪದ ವ್ಯಕ್ತಿಯ ಬೆರಳಚ್ಚು ಪಡೆಯಲಿದ್ದಾರೆ. ಇದಕ್ಕಾಗಿಯೇ ಬೆರಳಚ್ಚು ಸ್ಕ್ಯಾನಿಂಗ್ ಡಿವೈಸ್ ಒದಗಿಸಲಾಗಿದೆ. ಅಲ್ಲದೆ ಮೊಬೈಲ್‌ಗೆ MCCTNS ಆ್ಯಪ್ ಅಳವಡಿಸಲಾಗಿದೆ.

ಕ್ಷಣಮಾತ್ರದಲ್ಲಿ ಪೊಲೀಸರ ಕೈಸೇರಲಿದೆ ಕ್ರಿಮಿನಲ್ ಹಿನ್ನಲೆ
ಬೆರಳು ಸ್ಕ್ಯಾನ್ ಮಾಡಿ, ಆ್ಯಪ್ ಮೂಲಕ ಸರ್ಚ್ ಮಾಡಿದರೆ ಸಾಕು.ಆ ವ್ಯಕ್ತಿಯ ಬಗ್ಗೆ ಕ್ರಿಮಿನಲ್ ಹಿನ್ನಲೆಗಳಿದ್ದರೆ ಕ್ಷಣಮಾತ್ರದಲ್ಲಿ ಪೊಲೀಸರ ಮೊಬೈಲ್ ಪರದೆ ಮೇಲೆ ಪ್ರತ್ಯಕ್ಷವಾಗಲಿದೆ. ಆಗ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಬಹುದು. ಅನುಮಾನಾಸ್ಪದವಾಗಿ ವರ್ತಿಸಿದರೆ ಪ್ರಕರಣವನ್ನು ದಾಖಲು ಮಾಡಬಹುದಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ MCCTNS ತಂತ್ರಜ್ಞಾನ ಬಳಕೆಗೆ ಬಂದಿದೆ. ಪ್ರತಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯ ಮೊಬೈಲ್‌ಗೆ MCCTNS ಆ್ಯಪ್ ಅಳವಡಿಸಲಾಗಿದೆ. ವಿಶೇಷವಾಗಿ ರಾತ್ರಿ ಗಸ್ತು ಸಿಬ್ಬಂದಿಯ ಮೊಬೈಲ್ ಗಳಿಗೆ ಈ ಆ್ಯಪ್ ಇನ್ ಸ್ಟಾಲ್ ಮಾಡಲಾಗಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡ ಒದಗಿಸಲಾಗಿದೆ.

ಅಪರಾಧ ಪ್ರಮಾಣ ತಗ್ಗುವ ನಿರೀಕ್ಷೆ
ಜಿಲ್ಲೆಯಲ್ಲಿ ರಾತ್ರಿ ವೇಳೆ ಅಪರಾಧ ಚಟುವಟಿಕೆ ಹೆಚ್ಚು ನಡೆಯುತ್ತಿದೆ. ಇತ್ತೀಚೆಗೆ ಸೀಗೆಹಟ್ಟಿಯಲ್ಲಿ ಅವಾಚ್ಯವಾಗಿ ಕೂಗಿಕೊಂಡು ಬೈಕಿನಲ್ಲಿ ತೆರಳಿದ್ದು, ಬರ್ಮಪ್ಪ ನಗರದಲ್ಲಿ ಯುವಕನ ಮೇಲೆ ಇಟ್ಟಿಗೆ ಬೀಸಿದ್ದು, ವೆಂಕಟೇಶನಗರದಲ್ಲಿ ಯುವಕನ ಕೊಲೆ ಪ್ರಕರಣಗಳು ನಡೆದಿದ್ದು ರಾತ್ರಿ ವೇಳೆಯಲ್ಲಿ. ಹಾಗಾಗಿ ರಾತ್ರಿ ಗಸ್ತು ಸಂದರ್ಭ MCCTNS ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಅಪರಾಧ ಚಟುವಟಿಕೆಗೆ ತಗ್ಗುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಗಳಿವೆ.

ಬ್ರೀಫಿಂಗ್ ಸಿಸ್ಟಂ ಜಾರಿಗೊಳಿಸಿದ ಮಿಥುನ್ ಕುಮಾರ್
ಮಿಥುನ್ ಕುಮಾರ್ ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲಾಖೆಯಲ್ಲಿ ಹಲವು ಬದಲಾವಣೆ ತಂದಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಬ್ರೀಫಿಂಗ್ ಸಿಸ್ಟಂ ಜಾರಿಗೊಳಿಸಿದ್ದಾರೆ. ಇದು ಸಾರ್ವಜನಿಕ ಮೆಚ್ಚುಗೆ ಪಡೆದಿದೆ. ಈಗ ಮೊಬೈಲ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಸಿಸ್ಟಂ ಜಾರಿಗೊಳಿಸಲಾಗಿದೆ.
MCCTNS ತಂತ್ರಜ್ಞಾನ ಬಳಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್‌ಪಿ ಮಿಥುನ್ ಕುಮಾರ್, "ಅಪರಾಧ ತಡೆಗೆ ಮೊಬೈಲ್ ಟ್ರ್ಯಾಕಿಂಗ್ ಆ್ಯಪ್ ಅನುಷ್ಠಾನಗೊಳಿಸಲಾಗಿದೆ. ಅನುಮಾನಾಸ್ಪದವಾಗಿ ವರ್ತಿಸುವವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ ಆ್ಯಪ್ ಮೂಲಕ ತಕ್ಷಣಕ್ಕೆ ಪತ್ತೆ ಹಚ್ಚಬಹುದು. ಇದರಿಂದ ರಾತ್ರಿ ವೇಳೆ ನಡೆಯುವ ಹಲವು ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ಸಾಧ್ಯವಾಗಲಿದೆ" ಎಂದು ತಿಳಿಸಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications