ಶಿವಮೊಗ್ಗದಲ್ಲಿ ಮಾರ್ಕೆಟ್ ಲೋಕಿ ಮೇಲೆ ಪೊಲೀಸರಿಂದ ಶೂಟೌಟ್
ಶಿವಮೊಗ್ಗ, ಫೆಬ್ರವರಿ 13: ಶಿವಮೊಗ್ಗದಲ್ಲಿ ಮತ್ತೆ ಗುಂಡಿನ ಸದ್ದು ಪ್ರತಿಧ್ವನಿಸಿದ್ದು, ಮಾರ್ಕೆಟ್ ಗಿರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕುಖ್ಯಾತ ರೌಡಿ ಶೀಟರ್ ಮಾರ್ಕೆಟ್ ಲೋಕಿ ಮೇಲೆ ಪೊಲೀಸರು ಶೂಟೌಟ್ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಕುಖ್ಯಾತ ರೌಡಿ ಹಂದಿ ಅಣ್ಣಿಯ ತಮ್ಮ ಗಿರಿ ಶಿವಮೊಗ್ಗ ಗೋಪಾಳದ ಸಿದ್ದೇಶ್ವರ ಸರ್ಕಲ್ ಬಳಿ ನಿಂತಿದ್ದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಮನಸೋಇಚ್ಛೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು.
ಗಿರಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಲೋಕಿಯು ತಲೆಮರೆಸಿಕೊಂಡಿದ್ದನು. ಲೋಕಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಹೊರರಾಜ್ಯದಲ್ಲಿ ಆತ ಇರುವುದು ಗೊತ್ತಾಗಿ ಅಲ್ಲಿ ಅವನನ್ನು ಬಂಧಿಸಲಾಗಿತ್ತು. ಅಬ್ಬಲಗೆರೆ ಬಳಿ ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಲಾಗಿತ್ತು.

ಆದರೆ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪರಾರಿಯಾಗಲು ಯತ್ನಿಸಿದ ಈ ಸಂದರ್ಭದಲ್ಲಿ ಡಿವೈಎಸ್ಪಿ ಉಮಾಶಂಕರ್ ನಾಯ್ಕ್, ಲೋಕಿಯ ಎಡಗಾಲಿಗೆ ಫೈರಿಂಗ್ ನಡೆಸಿದ್ದಾರೆ. ಲೋಕಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವೇಳೆ ಪೊಲೀಸರು ಹಾರಿಸಿದ ಗುಂಡು ಲೋಕಿಯ ಎಡಗಾಲಿಗೆ ತಗುಲಿ ಅಲ್ಲಿಯೇ ಬಿದ್ದಿದ್ದಾನೆ. ತತಕ್ಷಣವೇ ಆತನನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.












Click it and Unblock the Notifications