ಶಿವಮೊಗ್ಗ; ವಾಕಿಂಗ್ ಬಂದವರನ್ನು ಲಾಕ್ ಮಾಡಿ ಕ್ಲಾಸ್ ತೆಗೆದುಕೊಂಡ ಎಸ್ಪಿ, ಡಿಸಿ
ಶಿವಮೊಗ್ಗ, ಏಪ್ರಿಲ್ 23: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಇಂದು ಬೆಳಗ್ಗೆ ವಾಯುವಿಹಾರಕ್ಕೆ ಬಂದವರನ್ನು ಪೊಲೀಸರು ನೆಹರು ಸ್ಟೇಡಿಯಂನಲ್ಲಿ ಲಾಕ್ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡರು.
ಇಂದು ಬೆಳಿಗ್ಗೆ ವಾಕಿಂಗ್ ಬಂದವರಿಗೆ ಶಿವಮೊಗ್ಗ ನೆಹರು ಇನ್ ಡೋರ್ ಸ್ಟೇಡಿಯಂ ಆವರಣದಲ್ಲಿ ಡಿಸಿ ಶಿವಕುಮಾರ್ ಹಾಗೂ ಎಸ್.ಪಿ ಶಾಂತರಾಜು ಬುದ್ಧಿ ಹೇಳಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಲಾಕ್ ಮಾಡಿ ಅವರಿಂದ ವ್ಯಾಯಾಮ ಮಾಡಿಸಿದ್ದಾರೆ. ಸುಸ್ತಾಗುತ್ತಿದೆ ಎಂದರೂ ಬಿಡದೆ ಬೆವರಿಳಿಯುವಂತೆ ವ್ಯಾಯಾಮ ಮಾಡಿಸುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.

ಪ್ರಜ್ಞಾವಂತರು, ವಿದ್ಯಾವಂತರಾದ ನೀವೇ ಈ ರೀತಿ ಕಾನೂನು ಉಲ್ಲಂಘನೆ ಮಾಡಿದರೆ ಕಾನೂನು ಪಾಲಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ಯಾರೂ ಮನೆಯಿಂದ ಹೊರಬಾರದಂತೆ ತಿಳಿಸಿ, ಆರೋಗ್ಯ ಇಲಾಖೆ ಸಿಬ್ಬಂದಿ ವಾಕಿಂಗ್ ಬಂದವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿದರು.












Click it and Unblock the Notifications