ವೈರಲ್ ವಿಡಿಯೋ; ಭದ್ರಾವತಿಯಲ್ಲಿ ಮತದಾನದ ದಿನ ಹಣ ಹಂಚಿಕೆ

ಶಿವಮೊಗ್ಗ, ಡಿಸೆಂಬರ್ 22: ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ನಡೆಯುವಾಗಲೇ ಅಭ್ಯರ್ಥಿಯೊಬ್ಬರು ಬಹಿರಂಗವಾಗ ಹಣ ಹಂಚಿಕೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ಈ ಘಟನೆ ವಿಡಿಯೋ ವೈರಲ್ ಆಗಿದೆ.

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಪಂಚಾಯಿತಿ ಚುನಾವಣೆಯಲ್ಲಿ ಕುಬೇರ ನಾಯಕ್ ಅಭ್ಯರ್ಥಿ. ಆಯೋಗ ಅವರಿಗೆ ಟ್ರಾಕ್ಟರ್ ಚಿನ್ಹೆಯನ್ನು ನೀಡಿದೆ. ಮತದಾನ ನಡೆಯುವಾಗಲೇ ಬಹಿರಂಗವಾಗಿ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ.

ಅಭ್ಯರ್ಥಿ ಮತದಾರರನ್ನು ಸೆಳೆಯಲು ಬಹಿರಂಗವಾಗಿಯೇ ಹಣ ಹಂಚಿಕೆ ಮಾಡುತ್ತಿದ್ದಾರೆ. ಹಣ ಹಂಚುತ್ತಿರುವ ವೀಡಿಯೋ ವೈರಲ್ ಆಗಿದೆ. ಮತದಾನ ಮಾಡಲು ಹೋಗುತ್ತಿರುವ ಮಹಿಳೆಗೆ ಕುಬೇರ ನಾಯಕ್ ಹಣ ಹಂಚಿಕೆ ಮಾಡಿದ್ದಾರೆ.

Money Distribution

ಗ್ರಾಮದ ಜನರು ಹೇಳುವ ಪ್ರಕಾರ ಪ್ರತಿ ಮತಕ್ಕೆ 200 ರಿಂದ 500 ರೂ. ಹಣವನ್ನು ಹಂಚಿಕೆ ಮಾಡಲಾಗುತ್ತಿದೆ. ಮತಗಟ್ಟೆಯ ಹತ್ತಿರದಲ್ಲಿಯೇ ಹಣ ಹಂಚಿಕೆ ಮಾಡುತ್ತಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಜನರು ಆರೋಪಿಸುತ್ತಿದ್ದಾರೆ.

ಮತದಾನದ ದಿನ ಹೀಗೆ ಬಹಿರಂಗವಾಗಿ ಹಣ ಹಂಚಿಕೆ ಮಾಡುತ್ತಿರುವುದು ಹಾಗೂ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗೆ ಧೋರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಇಲ್ಲಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+