ನಾಗಾ ಸಾಧುಗಳು ಶಿವಮೊಗ್ಗಕ್ಕೆ, ಅದ್ದೂರಿ ಸ್ವಾಗತ
ಶಿವಮೊಗ್ಗ, ಜನವರಿ 20: ನಗರದಲ್ಲಿ ನಾಳೆ (ಜನವರಿ 20) ಧರ್ಮಜಾಗರಣ ಸಮನ್ವಯ ಸಮಿತಿ ನಡೆಸಲಿರುವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಗ ಸಾಧುಗಳು ನಗರಕ್ಕೆ ಈಗ ಆಗಮಿಸಿದ್ದಾರೆ.
ಮೊದಲ ಬಾರಿಗೆ ಉತ್ತರ ಭಾರತದಿಂದ ಶಿವಮೊಗ್ಗಕ್ಕೆ ಆಗಮಿಸಿದ ಇಬ್ಬರು ನಾಗಸಾದುಗಳನ್ನು ಇಂದು ಬೆಳಿಗ್ಗೆ 9ಕ್ಕೆ ಸಹ್ಯಾದ್ರಿ ಕಾಲೇಜು ಸರ್ಕಲ್ ನಲ್ಲಿ ಸಮಿತಿ ಸದಸ್ಯರು ಸ್ವಾಗತಿಸಿ ಬರಮಾಡಿಕೊಂಡರು.
ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಸಮಿತಿ ಸದಸ್ಯರು ಇಬ್ಬರು ನಾಗ ಸಾಧುಗಳನ್ನು ಬೈಕ್ Rally ಮೂಲಕ ಮೆರವಣಿಗೆ ಮಾಡಿಕೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರು.

ನಾಳೆ ನಗರದ ಆದಿಚುಂಚನಗಿರಿ ಮಠದ ಮೈದಾನದಲ್ಲಿ ಧರ್ಮ ಜಾಗರಣ ಸಮನ್ವಯ ಸಮಿತಿ ಹಮ್ಮಿಕೊಂಡಿರುವ ಲೋಕ ಕಲ್ಯಾಣಾರ್ಥಕ್ಕಾಗಿ ಮಹ ಮೃತ್ಯುಂಜಯ ಹೋಮ ಸಾಮಾಜಿಕ ಸಾಮರಸ್ಯಕ್ಕಾಗಿ ಸತ್ಯನಾರಾಯಣ ಪೂಜೆಯಲ್ಲಿ ಮಹಾಂತ ಪವನ್ ಭಾರತೀ ಮಹರಾಜ್ ಹಾಗೂ ತ್ರೈಂಬಕೇಶ್ವರದಿಂದ ಮಹಾಂತ ತಾನಪತಿ ರಾಮ್ ಭಾರತೀ ಮಹರಾಜ್ ನಾಗಾ ಸಾಧುಗಳು ಭಾಗವಹಿಸಲಿದ್ದಾರೆ.













Click it and Unblock the Notifications