• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭದ್ರಾವತಿ: ಅಪ್ಪಾಜಿ ಗೌಡರ ಅಂತಿಮ ದರ್ಶನ ಪಡೆದ ಶಾಸಕ ಬಿ.ಕೆ ಸಂಗಮೇಶ್ವರ್

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 3: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ಅಂತಿಮ ದರ್ಶನವನ್ನು ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಡೆದರು. ಮಾಜಿ ಶಾಸಕರ ಪಾರ್ಥಿವ ಶರೀರಕ್ಕೆ ಹೂಗುಚ್ಛ ಸಮರ್ಪಿಸಿ ನಮಸ್ಕರಿಸಿದರು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ ಅಪ್ಪಾಜಿ ಗೌಡರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಕೋರಿದ್ದಾರೆ.

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಕೋವಿಡ್‌ಗೆ ಬಲಿ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ರಾಜಕೀಯವಾಗಿ ನಾನು ಮತ್ತು ಅಪ್ಪಾಜಿ ಬೇರೆ ಬೇರೆ ಆಗಿದ್ದರೂ, ವೈಯಕ್ತಿಕ ಬದುಕಿನಲ್ಲಿ ನಾವೆಲ್ಲಾ ಆತ್ಮೀಯರಾಗಿದ್ದೆವು ಎಂದು ತಿಳಿಸಿದರು.

ಎರಡು-ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪಾಜಿಗೌಡರು ಕೋವಿಡ್-19 ಗೆ ತುತ್ತಾಗಿರುವುದು ಬೇಸರ ತರಿಸಿತ್ತು, ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆಶಿಸಿದ್ದಾರೆ

English summary
MLA BK Sangamesh Received Last Rites of Former MLA Appajigowda's Body, who died of coronavirus Infection In Bhadravathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X