ಶಿವಮೊಗ್ಗ: ಒಂದು ಕೋಟಿ ರೂ. ಮೌಲ್ಯದ ಅಡಕೆ ತುಂಬಿದ್ದ ಲಾರಿ ನಾಪತ್ತೆ
ಶಿವಮೊಗ್ಗ, ಜೂ. 4: ಶಿವಮೊಗ್ಗದಿಂದ ಗುಜರಾತ್‌ನ ಅಹಮದಾಬಾದ್‌ಗೆ 1.26 ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಮಲೆನಾಡು ಅಡಕೆ ಮಾರಾಟಗಾರರ ಸಹಕಾರ ಸಂಘಕ್ಕೆ (ಮ್ಯಾಮ್ಕೋಸ್) ಸಂಬಂಧಿಸಿದ ಅಡಕೆ ಸಾಗಣೆ ಲಾರಿ ನಾಪತ್ತೆಯಾಗಿದೆ. ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಅಹಮದಾಬಾದ್‌ಗೆ ಅಡಕೆ ಕಳುಹಿಸಲಾಗಿತ್ತು.

350 ಚೀಲದಲ್ಲಿ 245 ಕ್ವಿಂಟಾಲ್ ಅಡಕೆಯನ್ನು ಲಾರಿಯಲ್ಲಿ ಕಳುಹಿಸಲಾಗಿದೆ. ಮೇ 25ರಂದು ಲಾರಿ ಶಿವಮೊಗ್ಗದಿಂದ ತೆರಳಿದೆ. ಮೇ 30ರ ಒಳಗೆ ಅದು ಅಹಮದಾಬಾದ್ ತಲುಪಬೇಕಿತ್ತು. ಆದರೆ ಈತನಕ ಲಾರಿ ಅಲ್ಲಿಗೆ ತಲುಪಿಲ್ಲ. ಅಲ್ಲದೆ ಚಾಲಕ ಟಿಪ್ಪು ನಗರದ ಮಹಮ್ಮದ್ ಗೌಸ್ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Recommended Video
ಲಾರಿಯಲ್ಲಿದ್ದ ಅಡಕೆ ಮೌಲ್ಯ 1.26 ಕೋಟಿ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಡಕೆ ಮತ್ತು ಲಾರಿಯನ್ನು ಹುಡುಕಿಕೊಡುವಂತೆ ಉದ್ಯಮಿ ದೋಲಾರಾಮ್ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications