ಶಂಕರಮೂರ್ತಿ ಅವರ ಅನುಪಸ್ಥಿತಿ ಪರಿಷತ್ತಿಗೆ ಭಾರೀ ನಷ್ಟ
ಶಿವಮೊಗ್ಗ, ಜೂನ್ 21 : 'ಡಿ.ಎಚ್.ಶಂಕರಮೂರ್ತಿ ಅವರ ಅನುಪಸ್ಥಿತಿ ವಿಧಾನ ಪರಿಷತ್ತಿನಲ್ಲಿ ಎದ್ದು ಕಾಣಲಿದೆ' ಎಂದು ಪರಿಷತ್ ಸದಸ್ಯ ಮತ್ತು ಬಿಜೆಪಿ ನಾಯಕ ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, 'ಹಿರಿಯ ರಾಜಕಾರಣಿ ಡಿ.ಹೆಚ್.ಶಂಕರಮೂರ್ತಿ ಅವರ ಸದಸ್ಯತ್ವದ ಅವಧಿ ಜೂ.21ಕ್ಕೆ ಮುಕ್ತಾಯವಾಗುತ್ತಿದೆ. 30 ವರ್ಷ ಕಲಾಪದಲ್ಲಿ ಭಾಗಿಯಾಗಿದ್ದ ಅವರ ಅನುಪಸ್ಥಿತಿ ಪರಿಷತ್ತಿನಲ್ಲಿ ಎದ್ದು ಕಾಣಲಿದೆ' ಎಂದರು.
'ಡಿ.ಹೆಚ್.ಶಂಕರಮೂರ್ತಿ ಅವರು ನೀಡಿದ ಅವಕಾಶದಿಂದ ಪರಿಷತ್ ಸದಸ್ಯನಾಗಿ ಚುನಾಯಿತನಾಗಿದ್ದೇನೆ. ಆದರೆ, ಅವರ ಪಾಂಡಿತ್ಯ, ವ್ಯಕ್ತಿತ್ವ, ಅನುಭವ ನಿಜಕ್ಕೂ ಅಸಾಧ್ಯ. ಕಲಾಪಕ್ಕೆ ಅವರ ಅನುಪಸ್ಥಿತಿ ದೊಡ್ಡ ನಷ್ಟ' ಎಂದು ತಿಳಿಸಿದರು.

'ವಿಧಾನ ಪರಿಷತ್ ಸದಸ್ಯರಾಗಿ ಜೂ.25ರಂದು ಪ್ರಮಾಣವಚನ ಸ್ವೀಕರಿಸುತ್ತೇನೆ. ಜುಲೈ ತಿಂಗಳ ಮೊದಲ ವಾರದಲ್ಲಿ ಅಲ್ಪಾವಧಿ ಅಧಿವೇಶನ ನಡೆಯಬಹುದು. ಅಧಿವೇಶನದಲ್ಲಿ 2 ರಿಂದ 3 ದಿನ ಚರ್ಚೆಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ರಾಜ್ಯದ ಜನತೆಯ ಸಮಸ್ಯೆ ಕುರಿತು ಗಮನ ಸೆಳೆಯು ಪ್ರಯತ್ನ ಮಾಡುತ್ತೇನೆ' ಎಂದರು.
'ಕನಿಷ್ಠ 80 ದಿನ ಅಧಿವೇಶನ ನಡೆಯಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇವಲ 40 ರಿಂದ 50 ದಿನ ನಡೆಯುತ್ತಿದೆ. ಹೀಗಾಗಿ 6 ಕೋಟಿ ಜನರ ಸಮಸ್ಯೆ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದು ಕಷ್ಟಸಾಧ್ಯ' ಎಂದು ಹೇಳಿದರು.












Click it and Unblock the Notifications