ಶಿವಮೊಗ್ಗ; ಮತಗಟ್ಟೆಗೆ ಬಂದು ಮತ ಹಾಕಿದ 101 ವರ್ಷದ ವೃದ್ಧೆ

ಶಿವಮೊಗ್ಗ, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಪ್ರಗತಿಯಲ್ಲಿದೆ. ಬೆಳಗ್ಗೆಯಿಂದ ಉತ್ಸಾಹದಿಂದಲೇ ಜನರು ಮತದಾನ ಮಾಡುತ್ತಿದ್ದಾರೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ 101 ವರ್ಷದ ವೃದ್ಧೆಯೊಬ್ಬರು ಮತಗಟ್ಟೆಗೆ ಬಂದು ಮತದಾನ ಮಾಡಿ ಮಾದರಿ ಆದರು. ಕ್ಷೇತ್ರದ 157ನೇ ಬೂತ್‌ನಲ್ಲಿ ಅವಿನಹಳ್ಳಿ ನಿವಾಸಿ ಬಿಬಿ ಜಾನ್ ಮತ ಚಲಾವಣೆ ಮಾಡಿದರು.

senior citizen

ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಿತ್ತು. 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ ವಿಕಲಚೇತನರು ಮನೆಯಲ್ಲಿ ಮತದಾನ ಮಾಡಲು ಅವಕಾಶವಿತ್ತು.

ಅರ್ಜಿ ನಮೂನೆ 12 ಡಿ ಅಡಿ ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ತೆರಳಿ ಚುನಾವಣಾಧಿಕಾರಿಗಳು ಮತದಾನ ಪ್ರಕ್ರಿಯೆ ನಡೆಸಿದ್ದಾರೆ. ಆದರೆ ಸಾಗರದಲ್ಲಿ 101 ವರ್ಷದ ಬಿಬಿ ಜಾನ್ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ಅಂಗವಿಕಲರು ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದರು. ಏಪ್ರಿಲ್ 29 ರಿಂದ ಮೇ 6ರ ತನಕ ಈ ಪ್ರಕ್ರಿಯೆ ನಡೆಯಿತು. ಹೆಸರು ನೋಂದಾಯಿಸಲ್ಪಟ್ಟ 2374 ಮತದಾರರ ಪೈಕಿ 2237 ಜನರು ಮತದಾನ ಮಾಡಿದರು.

ದಾವಣಗೆರೆ ವರದಿ; ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ದುರ್ವಿಗೆರೆ ಗ್ರಾಮದ ಮತಗಟ್ಟೆ ಸಂಖ್ಯೆ 254 ರಲ್ಲಿ 106 ವರ್ಷದ ಶತಾಯುಷಿ ಜಾನಕಿಬಾಯಿ ಮತದಾನ ಮಾಡಿದರು.

ಹಗರಿಬೊಮ್ಮನಹಳ್ಳಿಯ ಮೋರಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋರಿಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 124ರಲ್ಲಿ ವೃದ್ಧರು, ಅಂಗವಿಕಲರು ಮತದಾನ ಮಾಡಿದರು.

ಬೆಂಗಳೂರು ನಗರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕೇಂದ್ರೀಯ ವಿದ್ಯಾಲಯದ 157ನೇ ಸಂಖ್ಯೆ ಮತಗಟ್ಟೆಯಲ್ಲಿ 84 ವರ್ಷದ ನಾಗಲಕ್ಷ್ಮೀ ಹಕ್ಕು ಚಲಾಯಿಸಿದರು.

ಮಂಡ್ಯದ ಕೊಪ್ಪಲುವಿನಲ್ಲಿ 106ರ ಮತಗಟ್ಟೆಯಲ್ಲಿ 102 ವರ್ಷದ ದೇವಿರಮ್ಮ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+