ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಶುಭ ಸುದ್ದಿ

ಶಿವಮೊಗ್ಗ, ಜನವರಿ 24: ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸುವ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ. ಜನಶತಾಬ್ದಿ ರೈಲು ಇನ್ನು ಮುಂದೆ ಬೆಂಗಳೂರಿನ ಮೆಜೆಸ್ಟಿಕ್ ತನಕ ಸಂಚಾರವನ್ನು ನಡೆಸಲಿದೆ. ಹೊಸ ವೇಳಾಪಟ್ಟಿ ಜನವರಿ 31ರಿಂದ ಜಾರಿಗೆ ಬರಲಿದೆ.

Recommended Video

      ರಾಜ್ಯದಲ್ಲಿ ಗಣಿಗಾರಿಕೆ ಅವಶ್ಯಕತೆ ಇದೆ, ಆದ್ರೆ illegal mining ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- CM BSY | Oneindia Kannada

      ಇಷ್ಟು ದಿನ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಯಶವಂತಪುರ ರೈಲು ನಿಲ್ದಾಣದ ತನಕ ಮಾತ್ರ ಸಂಚಾರ ನಡೆಸುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ಬಿಎಂಟಿಸಿ ಬಸ್, ಆಟೋ, ಮೆಟ್ರೋ ಮೂಲಕ ಮೆಜೆಸ್ಟಿಕ್ ತಲುಪಬೇಕಿತ್ತು. ಇದರಿಂದ ಅನಾನುಕೂಲವಾಗಿತ್ತು.

      ಆದರೆ, ಇನ್ನು ಮುಂದೆ ರೈಲು ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ತನಕ ಸಂಚಾರ ನಡೆಸಲಿದೆ. "ರೈಲ್ವೆ ಇಲಾಖೆ ಮೆಜೆಸ್ಟಿಕ್ ತನಕ ರೈಲು ಸಂಚಾರ ವಿಸ್ತರಣೆ ಮಾಡಲು ಒಪ್ಪಿಗೆಯನ್ನು ನೀಡಿದೆ" ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.

      Jan Shatabdi Train Will Run Till Majestic Railway Station

      ವೇಳಾಪಟ್ಟಿ; ಪ್ರತಿದಿನ ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣವನ್ನು 9.50ಕ್ಕೆ ತಲುಪಲಿದೆ.

      ಮೈಸೂರಿಗೆ ತೆರಳುತ್ತಿದ್ದ ರಾತ್ರಿ ರೈಲು ಬೆಂಗಳೂರನ್ನು ಬೆಳಗಿನ ಜಾವ 3.50ಕ್ಕೆ ತಲುಪುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ರೈಲು ಇನ್ನು ಮುಂದೆ ಬೆಂಗಳೂರಿಗೆ 5 ಗಂಟೆಗೆ ತಲುಪಲಿದೆ.

      ಶಿವಮೊಗ್ಗದಿಂದ ರೇಣುಗುಂಟಾ (ತಿರುಪತಿ) ಚಲಿಸುತ್ತಿದ್ದ ರೈಲನ್ನು ಶಿವಮೊಗ್ಗದಿಂದ ಪ್ರತಿ ಶುಕ್ರವಾರ ಹೊರಟು ಶನಿವಾರ ಬೆಳಗ್ಗೆ ತಲುಪಿ, ಶನಿವಾರ ಅಲ್ಲಿಂದ ಹೊರಡುವ ವ್ಯವಸ್ಥೆ ಮಾಡುವಂತೆ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸಹ ಒಪ್ಪಿಗೆ ಸಿಕ್ಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+