ದೊರೆಸ್ವಾಮಿಯವರ ಕ್ಷಮೆ ಕೇಳುವ ಬಗ್ಗೆ ಯತ್ನಾಳ್ ತಿರುಗುತ್ತರವೇನು?
ಶಿವಮೊಗ್ಗ, ಫೆಬ್ರವರಿ 27: "ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಓರ್ವ ಡೋಂಗಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೆ ನೀಡಿರುವ ಶಾಸಕ ಯತ್ನಾಳ್, "ನಾನು ಈ ಹೇಳಿಕೆಗೆ ಬದ್ಧನಾಗಿದ್ದು, ವೀರ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ಕ್ಷಮೆ ಕೇಳಿದಲ್ಲಿ ಮಾತ್ರ ನಾನು ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.
Recommended Video
ಶಿವಮೊಗ್ಗದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಶಾಸಕ ಯತ್ನಾಳ್, "ಈ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯಹೋರಾಟಗಾರ ವೀರ ಸಾವರ್ಕರ್. ಇವರನ್ನ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರನೆಂದು ಒಪ್ಪಿಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡಿದೆ. ಮೊದಲು ಈ ಬಗ್ಗೆ ಕಾಂಗ್ರೆಸ್ ಕ್ಷಮೆ ಯಾಚಿಸಲಿ" ಎಂದು ಹೇಳಿದರು.
"ಕಾಂಗ್ರೆಸ್ನವರು ಹುಬ್ಬಳಿ - ಬೆಂಗಳೂರು ಘಟನೆ ಬಗ್ಗೆ ಮಾತನಾಡುವುದಿಲ್ಲ. ದೇಶವಿರೋಧಿ ಹೇಳಿಕೆ ಕೊಟ್ಟ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವುದಿಲ್ಲ, ಕಾಂಗ್ರೆಸ್ ನವರು ದೇಶದ ವಿರುದ್ಧ ಮಾತನಾಡುವವರ ವಿರುದ್ಧ ಮೊದಲು ಹೋರಾಟ ಮಾಡಲಿ. ನನ್ನ ವಿರುದ್ಧ ಹೋರಾಟ ಮಾಡುವುದರಿಂದ ಯಾವುದೇ ಲಾಭವಿಲ್ಲ" ಎಂದರು.

"ವೀರ ಸಾರ್ವಕರ್ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದಿಯಾಗಿ ಹಗುರವಾಗಿ ಮಾತನಾಡಿದ್ದಾರೆ. ಮೊದಲು ಈ ಬಗ್ಗೆ ಅವರು ಜನರ ಬಳಿ ಕ್ಷಮೆ ಕೇಳಲಿ. ಸಂವಿಧಾನ ಬದ್ಧವಾಗಿ ಸಿಎಎ ಪಾರ್ಲಿಮೆಂಟ್ ನಲ್ಲಿ ಪಾಸ್ ಆಗಿದೆ. ಆದರೆ ಅದರ ವಿರುದ್ಧ ಪ್ರತಿಭಟನೆ ಮಾಡುವ ಕಾಂಗ್ರೆಸ್ ನವರು ಮೊದಲು ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬೆಲೆ ಕೊಡುವುದನ್ನು ಕಲಿಯಲಿ. ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ" ಎಂದರು.












Click it and Unblock the Notifications