ಸಿಎಂ ಪುತ್ರನ ಎದುರು ನಾನೇ ಮುಂದಿನ ಸಿಎಂ ಅಂದ್ರು ಆಯನೂರು ಮಂಜುನಾಥ್

ಶಿವಮೊಗ್ಗ, ನವೆಂಬರ್ 11: ಭಾಷಣಗಳಲ್ಲಿ ನಗೆ ಪಟಾಕಿ ಸಿಡುಸುವ ಮೂಲಕ ಜನರನ್ನು ನಕ್ಕುನಗಿಸುವ ರಾಜಕಾರಣಿ ಆಯನೂರು ಮಂಜುನಾಥ್ ಮತ್ತೊಂದು ಹಾಸ್ಯಚಟಾಕಿ ಸಿಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಶಿವಮೊಗ್ಗ ನಗರದಲ್ಲಿ ಇಂದು ನೂತನ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, "ರಾಘವೇಂದ್ರ ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಘವೇಂದ್ರ ಶಾಶ್ವತ ಸಂಸದರಾಗಿ ಇರಬೇಕು, ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬಾರದು. ದೆಹಲಿಯಲ್ಲಿಯೇ ಶಾಶ್ವತವಾಗಿ ಇರಲಿ, ಯಾಕಂದ್ರೆ ಮುಂದಿನ ಸಿಎಂ ನಾನಾಗಬೇಕು ಅಂತ ಇದ್ದೇನೆ" ಎಂದು ಆಯನೂರು ಮಂಜುನಾಥ್ ಸಂಸದ ರಾಘವೇಂದ್ರ ಎದುರು ಹಾಸ್ಯ ಭರಿತವಾಗಿ ಚಾಟಿ ಬೀಸಿದರು.

I Will Become CM Said Ayanur Manjunath In Front Of BS Raghavendra In Shivamogga

ಬಿಎಸ್ ವೈ ಹೋರಿ, ರಾಘವೇಂದ್ರ ಕರು: "ಜಿಲ್ಲೆಯಲ್ಲಿ ಇಬ್ಬರು ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ಯಡಿಯೂರಪ್ಪ ಅವರನ್ನು ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟರೆ ಶಿವಮೊಗ್ಗ ಅಲ್ಲದೇ, ರಾಜ್ಯದ ಚಿತ್ರಣವನ್ನೆ ಬದಲಾವಣೆ ಮಾಡಲಿದ್ದಾರೆ" ಎಂದರು. ವೇದಿಕೆಯಲ್ಲೇ ಇದ್ದು ಈ ಮಾತನ್ನು ಕೇಳಿದ ಬಿ.ಎಸ್.ವೈ ಪುತ್ರ ರಾಘವೇಂದ್ರ ಮುಗುಳುನಕ್ಕರು. ಯಾವಾಗಲೂ ಹಾಸ್ಯ ಭರಿತವಾಗಿಯೇ ಮಾತನಾಡುವ ಆಯನೂರು ಮಾತುಗಳನ್ನು ಕೇಳಿದ ಜನ ಕೂಡ ಚಪ್ಪಾಳೆ ತಟ್ಟಿ ನಕ್ಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+