ಡಾ.ನಿರ್ಮಲಾನಂದ ಶ್ರೀಗಳ ವಿರುದ್ಧ ಮಾತನಾಡಲಾರೆ: ಈಶ್ವರಪ್ಪ
ಶಿವಮೊಗ್ಗ, ಸೆಪ್ಟೆಂಬರ್.16: ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದ ಶ್ರೀಗಳು 36 ಶಾಸಕರನ್ನು ಇಟ್ಟುಕೊಂಡು ಸರ್ಕಾರ ರಚನೆ ಮಾಡುವುದರ ಹಿಂದೆ ದೈವ ಶಕ್ತಿ ಇದೆ. ಇದನ್ನ ಕೆಡವಲು ಹೋದವರು ಕೇವಲ ಒಬ್ಬರಿಗೆ ಮಾಡುವ ದ್ರೋಹವಲ್ಲ ಅದು ದೈವಕ್ಕೆ ಮಾಡುವ ಮೋಸ ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಈಶ್ವರಪ್ಪ ಅವರ ಬಳಿ ಮಾಧ್ಯಮದವರು ಪ್ರಸ್ತಾಪಿಸಿದಾಗ ಸ್ವಾಮಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ವಿರುದ್ಧ ಮಾತನಾಡಲಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಡಿಪಿ ಸಭೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಶಕ್ತಿ ಇದ್ದರೆ ಸರ್ಕಾರ ಉಳಿಸಿಕೊಳ್ಳಲಿ.

ರಾಜ್ಯ ಬಿಜೆಪಿಯು ಕಿಂಗ್ ಪಿನ್ ಗಳನ್ನು ಬಳಸಿಕೊಂಡು ಸರ್ಕಾರವನ್ನ ಬೀಳಿಸತೊಡಗಿದೆ ಎಂಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರ ಸ್ವಾಮಿ ಅವರಿಗೆ ಶಕ್ತಿ ಇದ್ದರೆ ಸರ್ಕಾರ ಉಳಿಸಿಕೊಳ್ಳಿ. ಇಲ್ಲವೆಂದಾದರೆ ಬೇರೆಯವರ ಮೇಲೆ ಆಪಾದನೆ ಮಾಡುವುದನ್ನು ಬಿಡಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ಸರ್ಕಾರ ಉರುಳಲಿದೆ ಎಂದು ನಮ್ಮ ಪಕ್ಷದ ನಾಯಕರು ಹೇಳಿಲ್ಲ. ಆದರೆ ಎರಡು ದಿನ ಕಾದು ನೋಡಿ ಎಂದಿದ್ದು ರಾಜ್ಯ ಸರ್ಕಾರದಲ್ಲಿ ಏನೇನು ಆಗುತ್ತೆ ಎಂಬುದರ ಬಗ್ಗೆ ಹೇಳಿದ್ದು, ಕಾಂಗ್ರೆಸ್ ನವರು ಕಾಂಗ್ರೆಸ್ ನ ಪಾಲುದಾರಿಕೆ ಇರುವ ಸರ್ಕಾರಕ್ಕೆ ಯಾವ್ಯಾವ ರೀತಿಯ ತೊಂದರೆ ಕೊಡುತ್ತಿದ್ದಾರೆಂದು ನಾನಂತು ಇತಿಹಾಸದಲ್ಲಿಯೇ ನೋಡಿರಲಿಲ್ಲ.
ಕಾಂಗ್ರೆಸ್ ನಲ್ಲಿ ಕಾಂಗ್ರೆಸ್ ನವರೇ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಹಾಗಾಗಿ ಈ ಸರ್ಕಾರ ಬಿದ್ದು ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ಜನ ಇದ್ದಾರೆ. ರಾಜ್ಯ ಸರ್ಕಾರವನ್ನು ಬಿಜೆಪಿ ಪಕ್ಷ ಉರುಳಿಸಲು ಪ್ರಯತ್ನ ಪಡುವುದಿಲ್ಲ. ಆದರೆ ಅದಾಗೆ ಪಥನಗೊಂಡರೆ ಅದಕ್ಕೆ ನಾವು ಜವಬ್ದಾರರಲ್ಲ ಎಂದು ಈಶ್ವರಪ್ಪ ತಿಳಿಸಿದರು.












Click it and Unblock the Notifications