ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆಗೆ ಭೇಟಿ, ವಿದ್ಯಾರ್ಥಿಯಾದ ಜಿಲ್ಲಾಧಿಕಾರಿ

|
Google Oneindia Kannada News

ಶಿವಮೊಗ್ಗ, ಡಿಸೆಂಬರ್. 13 : ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಯಾದರು. ಸರ್ಕಾರಿ ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ವರದಿ ನೀಡುವಂತೆ ಸೂಚನೆ ನೀಡಿದರು.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಹೊಸನಗರ ತಾಲೂಕಿನ ನಿರೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿದರು. ಶಾಲೆಯಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ಮಗನನ್ನು ಶಾಲೆ ಬಿಡಿಸಿ, ಟೆನಿಸ್ ಕೋಚಿಂಗ್ ಸೇರಿಸಿದ ತಂದೆಯ ಮನದ ಮಾತುಮಗನನ್ನು ಶಾಲೆ ಬಿಡಿಸಿ, ಟೆನಿಸ್ ಕೋಚಿಂಗ್ ಸೇರಿಸಿದ ತಂದೆಯ ಮನದ ಮಾತು

Deputy Commissioner visits govt school in Hosanagara

1 ನೇ ತರಗತಿಯಿಂದ 5 ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಅವಕಾಶ ಇರುವ ಈ ಶಾಲೆಯಲ್ಲಿ ಪರಿಸರ ಸಂರಕ್ಷಣೆ, ಉದ್ಯಾನವನ, ಸಾಹಸ ಕ್ರೀಡೆ, ಔಷಧಿ ಗಿಡಗಳ ಉದ್ಯಾನವನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಪರಿಶೀಲನೆ ನಡೆಸಿದರು.

ಶಾಲಾ ಮಕ್ಕಳ ಹರಕೆಗೆ ಕೊಡ್ತಾನಂತೆ 100 ಪರ್ಸೆಂಟ್ ಫಲಿತಾಂಶಶಾಲಾ ಮಕ್ಕಳ ಹರಕೆಗೆ ಕೊಡ್ತಾನಂತೆ 100 ಪರ್ಸೆಂಟ್ ಫಲಿತಾಂಶ

ನಲಿ-ಕಲಿ ತರಗತಿಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು. ಮಕ್ಕಳ ಜೊತೆ ಮಾತುಕತೆ ನಡೆಸಿದರು. ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು.

Deputy Commissioner visits govt school in Hosanagara

ಕನ್ನಡ ಮತ್ತು ಆಂಗ್ಲ ಭಾಷೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನೀಡಿದ್ದ ನಿರ್ದೇಶನದಂತೆ ಪ್ರತಿ ದಿನ ಒಬ್ಬ ವಿದ್ಯಾರ್ಥಿಯಿಂದ ಒಂದು ಗಾದೆ ಮಾತು, ಒಂದು ಆಂಗ್ಲ ಪದವನ್ನು ಸಂಗ್ರಹಿಸಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಹೇಳಿಸುವಂತಹ ವ್ಯವಸ್ಥೆಗೆ ಬಗ್ಗೆ ಮಾಹಿತಿ ಪಡೆದರು.

ಶಾಲಾ ಮಕ್ಕಳ ಭಾರದ ಬ್ಯಾಗ್ ಸಮಸ್ಯೆಗೆ ಪರಿಹಾರ ಸಿಕ್ಕೀತೆ?ಶಾಲಾ ಮಕ್ಕಳ ಭಾರದ ಬ್ಯಾಗ್ ಸಮಸ್ಯೆಗೆ ಪರಿಹಾರ ಸಿಕ್ಕೀತೆ?

ಮಕ್ಕಳು ನಡೆಸಿದ ಸಾಹಸ ಚಟುವಟಿಕೆಗಳು, ಸಾಂಸ್ಕೃತಿಕ ಚಟುವಟಿಕೆಗಳನ್ನು ವೀಕ್ಷಿಸಿದರು. ಬಿಸಿಯೂಟ ತಯಾರು ಮಾಡುವ ಹಾಗೂ ವಿತರಣೆ ಮಾಡುವ ಕೊಠಡಿಯನ್ನು ಪರಿಶೀಲಿಸಿ, ಅಡುಗೆಯವರಿಂದ ಮಾಹಿತಿ ಸಂಗ್ರಹಿಸಿದರು.

ಶಾಲೆಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದಲ್ಲಿ ವರದಿ ನೀಡಿದರೆ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

English summary
Shivamogga Deputy Commissioner Dr.M.Lokesh visited the governament school in Hosanagara on December 13, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X