ಬುಡುಬುಡಿಕೆಯವ ದೇವೇಗೌಡ್ರ ಬಗ್ಗೆ ಹೇಳಿದ ಶಾಸ್ತ್ರ ನಿಜವಾಯ್ತು!

Recommended Video

      ಎಚ್ ಡಿ ದೇವೇಗೌಡ್ರ ಬಗ್ಗೆ ಬುಡುಬುಡಿಕೆಯವ ಹೇಳಿದ ಶಾಸ್ತ್ರ ನಿಜವಾಯ್ತಂತೆ | Oneindia Kannada

      ಶಿವಮೊಗ್ಗ, ಸೆಪ್ಟೆಂಬರ್ .14: "ಮಾಜಿ ಪ್ರಧಾನಿಗಳು 5-6 ನೇ ತರಗತಿಯಲ್ಲಿ ಓದುತ್ತಿದ್ದಾಗ ಕುರಿ ಕಾಯುತ್ತಿದ್ದರು. ಆಗ ಅಲ್ಲಿ ಬುಡಬುಡಿಕೆಯವನೊಬ್ಬ ಶಾಸ್ತ್ರ ಹೇಳಲು ಬರುತ್ತಾನೆ. ಆಗ ದೇವೇಗೌಡರ ಹಸ್ತ ರೇಖೆ ನೋಡಿ ನೀನು ಚಕ್ರವರ್ತಿ ಆಗುತ್ತೀಯ ಎಂದು ಹೇಳಿದ್ದ.

      ಆಗ ಅವರ ಜೊತೆಗಿದ್ದ ದೇವೇಗೌಡರ ಚಿಕ್ಕಮ್ಮ ಗೊಣ್ಣೆ ಬುರುಕ ಇವನೆಂತ ಚಕ್ರವರ್ತಿ ಆದಾನು ಎಂದು ಗೇಲಿ ಮಾಡಿದ್ದರು. ಆದರೆ ಇಂದು ಗೌಡರು ನಮ್ಮ ಮುಂದೆ ಚಕ್ರಾಧಿಪತಿಯಾಗಿಯೇ ಕುಳಿತಿದ್ದಾರೆ" ಎಂದು ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದ ಶ್ರೀಗಳು ಹೇಳಿದರು.

      ನಗರದಲ್ಲಿ ಇಂದು ಮಲೆನಾಡು ಕೋಆಪರೇಟಿವ್ ಸೊಸೈಟಿಯ ಬ್ಯಾಂಕ್‌ನ ರಜತ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ದೇವೇಗೌಡರು ಒಬ್ಬ ಮಹಾನ್ ದೈವಭಕ್ತ. ಅವರ ವಿರುದ್ದ ಹೋಗುವುದು, ದೈವ ವಿರುದ್ಧ ನಿಲ್ಲುವುದು ಒಂದೇ.

      Budubudike man said to Former Prime Minister Devegowda you would become Emperor

      ಹಾಗಾಗಿ ಸರ್ಕಾರವನ್ನು ಉರುಳಿಸಲು ಹವಣಿಸುವವರು ದೈವ ಶಕ್ತಿಯ ವಿರುದ್ಧ ನಿಂತಂತೆ. ಸರ್ಕಾರ ಉರುಳಿಸುವ ಕೆಲಸದಲ್ಲಿ ತೊಡಗಿದರೆ ಮಾಜಿ ಪ್ರಧಾನಿ ದೇವೇಗೌಡರ ವಿರೋಧಿ ಕೆಲಸ ಮಾಡಿದಂತೆ. ದೇವೇಗೌಡರ ವಿರುದ್ಧ ಮಾಡುವ ಕೆಲಸ ದೈವದ ವಿರೋಧಿ ಕೆಲಸ ಮಾಡಿದಂತೆ ಎಂದು ಶ್ರೀಗಳು ಹೇಳಿದರು.

      ಮೀಟರ್ ಬಡ್ಡಿಯಿಂದ ಎಷ್ಟೋ ಸಂಸಾರಗಳು ನಾಶ ಹೊಂದಿವೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಮೊಬೈಲ್ ಬ್ಯಾಂಕ್ ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+