ಶಿವಮೊಗ್ಗ: ಸಪ್ತಪದಿ ವೇಳೆ ವಧುವಿನ ಕುತ್ತಿಗೆ ಸೀಳಿದ ಭಗ್ನಪ್ರೇಮಿ

ಶಿವಮೊಗ್ಗ, ಏಪ್ರಿಲ್ 02: ವಧು ಸಪ್ತಪದಿ ತುಳಿಯುವ ಸಂದರ್ಭದಲ್ಲಿ ಭಗ್ನ ಪ್ರೇಮಿಯೊಬ್ಬ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ನಡೆದಿದೆ.

ಭೀಮನಕೋಣೆಯ ಕಾಪ್ಟೆಮನೆಯ ವರನ ಸ್ವಗೃಹದಲ್ಲಿ ಭರತ್ ಹಾಗೂ ಸೀತಾಳ ವಿವಾಹ ನೆರವೇರಿತ್ತು, ತಾಳಿ ಕಟ್ಟಿದ ಬಳಿಕ ಸಪ್ತಪದಿ ತುಳಿಯುವ ಶಾಸ್ತ್ರ ನಡೆಯುತ್ತಿದ್ದ ಸಂದರ್ಭದಲ್ಲಿ ಭಗ್ನ ಪ್ರೇಮಿ ವಧುವಿನ ಕುತ್ತಿಗೆಗೆ ಇರಿದಿದ್ದಾನೆ. ಆ ವೇಳೆ ಆತನನ್ನು ತಡೆಯಲು ಮುಂದಾದ ವಧುವಿನ ಚಿಕ್ಕಪ್ಪ ಗಂಗಾಧರಪ್ಪ ಎನ್ನುವವರ ಮೇಲೆ ಕೂಡ ಆತ ಹಲ್ಲೆ ನಡೆಸಿದ್ದಾರೆ.

ವಧು ಸೀತಾ ಹಾಗೂ ಗಂಗಾಧರಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕತ್ತಿಯಿಂದ ಹಲ್ಲೆ ನಡೆಸಿದ್ದ ಯುವಕನನ್ನು ನಂದನ್ ಎಂದು ಗುರುತಿಸಲಾಗಿದ್ದು ಈತ ಶಿವಮೊಗ್ಗದ ನಿವಾಸಿಯಾಗಿದ್ದಾನೆ.

Bride stabbed by disappointed lover

ಕಳೆದ ಆರು ತಿಂಗಳಿನಿಂದ ಸೀತಾಳನ್ನು ಇವನು ಪ್ರೀತಿಸುತ್ತಿದ್ದ ಎನ್ನಲಾಗಿದೆ, ಸೀತಾ ಇವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದಕ್ಕಾಗಿ ತನ್ನನ್ನು ತ್ಯಜಿಸಿ ಇನ್ನೊಬ್ಬನ ಜತೆ ಮದುವೆಗೆ ಮುಂದಾಗಿರುವ ಆಕೆಯನ್ನು ಕೊಲ್ಲಲು ಈತ ಮುಂದಾಗಿದ್ದ. ಇದೀಗ ಆರೋಪಿ ನಂದನ್ ನನ್ನು ಸ್ಥಳೀಯರು ಪೋಲೀಸರಿಗೆ ಒಪ್ಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+