ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ: ಜಿಲ್ಲಾಧಿಕಾರಿಗೆ ಮನವಿ

ಶಿವಮೊಗ್ಗ, ಡಿಸೆಂಬರ್ 9: ಶಿವಮೊಗ್ಗ ನಗರದಲ್ಲಿ ಜಾರಿ ಮಾಡಲಾಗಿರುವ ಸೆಕ್ಷನ್ 144 ನಿಂದಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದ್ದು, ಬೆಳಗ್ಗೆ 7 ರಿಂದ ಸಂಜೆ 5ರ ವರೆಗೂ ಅವಕಾಶ ನೀಡುವಂತೆ ನಗರದ ವಾಣಿಜ್ಯೋದ್ಯಮಿಗಳು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಯ ಸದಸ್ಯರು, ಕಳೆದೊಂದು ವಾರದಿಂದ ನಗರದಲ್ಲಿ ಹೇರಲಾಗಿರುವ ಕರ್ಫ್ಯೂನಿಂದಾಗಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದ್ದು, ಇದು ಆರ್ಥಿಕವಾಗಿ ನಷ್ಟವುಂಟು ಮಾಡುತ್ತಿದೆ ಎಂದು ಹೇಳಿದರು.

ಈಗಾಗಲೇ ಕೋವಿಡ್-19 ಲಾಕ್ ಡೌನ್'ನಿಂದಾಗಿ ನಮಗೆ ಬಹಳಷ್ಟು ನಷ್ಟವುಂಟಾಗಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಸೆಕ್ಷನ್ ಹಾಕಿರುವುದು ವ್ಯಾಪಾರ ಮಾಡಲು ತೊಂದರೆಯುಂಟಾಗಿದೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

 Shivamogga: Allow To Business Transaction: Request For Shivamogga DC

ಶಿವಮೊಗ್ಗ ನಗರದ ವ್ಯಾಪಾರ ವಹಿವಾಟಿಗೆ ಉಂಟಾಗಿರುವ ತೊಂದರೆಯಿಂದಾಗಿ ಆರ್ಥಿಕ ನಷ್ಟವಾಗುತ್ತಿದೆ. ದಯವಿಟ್ಟು ಇದನ್ನು ನಿವಾರಿಸಿ, ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವ್ಯವಹಾರಕ್ಕೆ ಅವಕಾಶ ಕಲ್ಪಿಸಿ ಎಂದು ಕೋರಿದ್ದಾರೆ.

ಮನವಿ ಆಲಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿಗಳು ಐಜಿ ಅವರ ಜೊತೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+