ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಲಿಕೆಗೆ ಗೊತ್ತಿಲ್ಲದೆ ಮಹಾನಗರ ಪಾಲಿಕೆ ಹೆಸರಲ್ಲಿ ಫ್ಲೆಕ್ಸ್ ಅಳವಡಿಕೆ, ವಿಚಾರಣೆ ಆರಂಭ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 24: ಒಂದೆಡೆ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಮಹಾನಗರ ಪಾಲಿಕೆಗೆ ಗೊತ್ತಿಲ್ಲದೆ ಪಾಲಿಕೆ ಹೆಸರಿನಲ್ಲಿ ಫ್ಲೆಕ್ಸ್ ಕಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಫ್ಲೆಕ್ಸ್ ವಿವಾದದಿಂದಾಗಿ ಶಿವಮೊಗ್ಗ ನಗರದಲ್ಲಿ ಶಾಂತಿ ಭಂಗ ಉಂಟಾಗಿದೆ. ಇದಕ್ಕೆಲ್ಲ ಕಾರಣ ಮಹಾನಗರ ಪಾಲಿಕೆಯ ನೀತಿ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸರಿಯಾದ ನಿಯಮ ರೂಪಿಸದೆ ಇರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಯಾವುದೇ ಹುಟ್ಟುಹಬ್ಬ, ಹಬ್ಬಹರಿದಿನ, ಜಾತ್ರೆ, ಪುಣ್ಯಸ್ಮರಣೆ ಇದ್ದರೂ ಶಿವಮೊಗ್ಗದ ಗಲ್ಲಿಗಲ್ಲಿಗಳೂ, ಪ್ರಮುಖ ಸರ್ಕಲ್‌ಗಳು ಫ್ಲೆಕ್ಸ್‌ಮಯವಾಗುತ್ತವೆ. ಇದರಲ್ಲೂ ರಾಜಕಾರಣಿಗಳ ಅಬ್ಬರ ಜೋರಾಗಿಯೇ ಇರುತ್ತದೆ.

ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಫ್ಲೆಕ್ಸ್ ನೀತಿ ರೂಪಿಸಲು ಪ್ಲಾನ್ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಫ್ಲೆಕ್ಸ್ ನೀತಿ ರೂಪಿಸಲು ಪ್ಲಾನ್

ಆದರೆ ಮಹಾನಗರ ಪಾಲಿಕೆ ಹೆಸರಿನಲ್ಲಿ ಶಿವಮೊಗ್ಗ ನಗರದ ಗೋಪಿ ಸರ್ಕಲ್‌ನಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಈ ಫ್ಲೆಕ್ಸ್ ಅಳವಡಿಸಿದ್ದು ಯಾರು ಎನ್ನವುದು ಪಾಲಿಕೆಗೆ ಗೊತ್ತಿಲ್ಲ. ಹಾಗಾಗಿ ಪರಿಶೀಲನೆ ಕಾರ್ಯ ಆರಂಭಿಸಲಾಗಿದೆ.

ಫ್ಲೆಕ್ಸ್‌ನಲ್ಲಿ ಏನಿತ್ತು?

ಫ್ಲೆಕ್ಸ್‌ನಲ್ಲಿ ಏನಿತ್ತು?

ಗೋಪಿ ಸರ್ಕಲ್‌ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಶುಭ ಕೋರುವ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದರಲ್ಲಿ 40 ಹೋರಾಟಗಾರರ ಭಾವಚಿತ್ರ ಇತ್ತು. ಭಾರತದ ಬಾವುಟದ ರಚನೆಕಾರ ಪಿಂಗಾಳಿ ವೆಂಕಯ್ಯ ಅವರ ದೊಡ್ಡ ಭಾವಚಿತ್ರ, ತ್ರಿವರ್ಣ ಧ್ವಜ ಹಿಡಿದು ನಿಂತಿರುವ ಭಾರತ ಮಾತೆಯ ಫೋಟೋ ಕೂಡ ಫ್ಲೆಕ್ಸ್ ನಲ್ಲಿತ್ತು.

ಫ್ಲೆಕ್ಸ್‌ನ ಎಡ ಭಾಗದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಹೆಸರು ಮತ್ತು ಲೋಗೋ ಬಳಕೆ ಮಾಡಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಲೋಗೋ ಮತ್ತು ಮಹಾನಗರ ಪಾಲಿಕೆ ಕಟ್ಟಡದ ಫೋಟೊವನ್ನು ಕೂಡ ಅಳವಡಿಸಲಾಗಿತ್ತು. ಇದರ ಕೆಳಗೆ ಮಹಾಪೌರರು, ಉಪ ಮಹಾಪೌರರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಆಯುಕ್ತರು ಮತ್ತು ಸಿಬ್ಬಂದಿ ಎಂದು ಬರೆಯಲಾಗಿತ್ತು.

ಪಾಲಿಕೆಗೆ ಗೊತ್ತಿಲ್ಲದಂತೆ ಫ್ಲೆಕ್ಸ್‌

ಪಾಲಿಕೆಗೆ ಗೊತ್ತಿಲ್ಲದಂತೆ ಫ್ಲೆಕ್ಸ್‌

ಆಗಸ್ಟ್ 15ರಂದು ಅಮೀರ್ ಅಹಮದ್ ಸರ್ಕಲ್‌ನಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಗೊಂದಲ ಉಂಟಾಯಿತು. ಆ ಬಳಿಕ ಮಹಾನಗರ ಪಾಲಿಕೆ ವತಿಯಿಂದ ರಾತ್ರೋರಾತ್ರಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಗೋಪಿ ಸರ್ಕಲ್‌ನಲ್ಲಿ ಮಹಾನಗರ ಪಾಲಿಕೆ ಹೆಸರಿನಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಇದನ್ನ ಕಂಡು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ಹೌಹಾರಿದ್ದಾರೆ.

ಪಾಲಿಕೆ ವತಿಯಿಂದ ಪಾಲಿಕೆ ಸಭಾಂಗಣ ಮತ್ತು ಸರ್ಕಾರದ ಸೂಚನೆ ಪ್ರಕಾರ ಸಿಟಿ ಸೆಂಟರ್ ಮಾಲ್‌ನಲ್ಲಿ ಕಾರ್ಯಕ್ರಮ ನಡೆಸಲಾಯಿತು. ಇದರ ಹೊರತು ಬೇರೆಲ್ಲೂ ಕಾರ್ಯಕ್ರಮ ಮಾಡಿಲ್ಲ. ಹರ್ ಘರ್ ತಿರಂಗ ಕಾರ್ಯಕ್ರಮದಲ್ಲಿ ಮನೆ ಮನೆಗೆ ಧ್ವಜ ಹಂಚಿಕೆ ಮಾಡಿದ್ದೇವೆ. ಇದರ ಹೊರತು ಪಾಲಿಕೆ ವತಿಯಿಂದ ಎಲ್ಲಿಯೂ ಫ್ಲೆಕ್ಸ್ ಅಳವಡಿಸಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದರು.

ಪಾಲಿಕೆ ಹೆಸರನ್ನು ದುರ್ಬಳಕೆಯಾಗಿದ್ದರೆ ದೂರು

ಪಾಲಿಕೆ ಹೆಸರನ್ನು ದುರ್ಬಳಕೆಯಾಗಿದ್ದರೆ ದೂರು

ಪಾಲಿಕೆ ಹೆಸರಿನಲ್ಲಿ ಪಾಲಿಕೆಗೆ ಗೊತ್ತಿಲ್ಲದಂತೆ ಫ್ಲೆಕ್ಸ್ ಅಳವಡಿಸಿದ್ದು ಯಾರು ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ಮಾಧ್ಯಮಕ್ಕೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ ನೀಡಿದ್ದಾರೆ. ಪಾಲಿಕೆ ಸದಸ್ಯರಲ್ಲಿ ಯಾರಾದರೂ ಇದನ್ನು ಅಳವಡಿಸಿದ್ದಾರೆಯೆ ಎಂದು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ಪಾಲಿಕೆ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಪ್ರಕರಣ ದಾಖಲು ಮಾಡಲು ಕೂಡ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಸದ್ಯ ಶಿವಮೊಗ್ಗ ಮಹಾನಗರ ಪಾಲಿಕೆ ಹೆಸರನ್ನು ಬಳಸಿಕೊಂಡು, ಪಾಲಿಕೆಗೆ ಗೊತ್ತಿಲ್ಲದೆ ಫ್ಲೆಕ್ಸ್ ಅಳವಡಿಸಿರುವುದು ಚರ್ಚೆಗೆ ಕಾರಣವಾಗಿದೆ. ಮುಂದೆ ಪಾಲಿಕೆ ಹೆಸರನ್ನು ಯಾರಾದರೂ ದರ್ಬಳಕೆ ಮಾಡಿಕೊಂಡರೆ ಹೊಣೆ ಯಾರು ಎಂಬ ಪ್ರಶ್ನೆಯು ಉದ್ಭವವಾಗಿದೆ.

ಪಾಲಿಕೆಯಿಂದ ಹೊಸ ಕಾನೂನು

ಪಾಲಿಕೆಯಿಂದ ಹೊಸ ಕಾನೂನು

ಫ್ಲೆಕ್ಸ್ ಅಳವಡಿಕೆ ಸಂಬಂಧ ಸೂಕ್ತ ನಿಯಮ ರೂಪಿಸಲು ಪಾಲಿಕೆ ಚಿಂತನೆ ನಡೆಸಿದೆ. ಫ್ಲೆಕ್ಸ್ ಹಾಕುವ ಸ್ಥಳ, ನಿರ್ಬಂಧಿತ, ಅನಿರ್ಬಂಧಿತ ಪ್ರದೇಶ, ಫ್ಲೆಕ್ಸ್ ಉದ್ದ, ಅಗಲ, ಪೂರ್ವಾನುಮತಿ ಪಡೆಯುವುದು ಹೇಗೆ? ಶುಲ್ಕ ಎಷ್ಟು, ಎಷ್ಟು ದಿನ ಅಳವಡಿಸಬಹುದು, ಲೈಸೆನ್ಸ್ ಹೇಗೆ ಪ್ರದರ್ಶನ ಮಾಡಬೇಕು. ಅನುಮತಿಗೆ ಎಷ್ಟು ದಿನ ಮುಂಚೆ ಅರ್ಜಿ ಸಲ್ಲಿಸಬೇಕು ಹೀಗೆ ಹಲವು ವಿಚಾರಗಳನ್ನು ಒಳಗೊಂಡು ಕರಡು ರೂಪಿಸಲು ಸಿದ್ಧತೆ ನಡೆಸಲಾಗಿದೆ. ಇದನ್ನು ಸಭೆಯಲ್ಲಿ ಮಂಡಿಸಿ ಕಾನೂನು ರೂಪಿಸಲು ಮುಂದಾಗಿದೆ.

English summary
During the Amrit Mahotsav of Independence, the case of flex hanging in many places in the name of the Corporation without the knowledge of the Municipal Corporation has come to light later
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X