ಶಿವಮೊಗ್ಗ : ಬಾವಿಯೊಳಗೆ ನೇಣಿಗೆ ಶರಣಾದ ಯುವತಿ

ಶಿವಮೊಗ್ಗ, ಜನವರಿ 28 : ಯುವತಿಯೊಬ್ಬಳು ಬಾವಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರ ನಗರ ಠಾಣೆ ಪೊಲೀಸರು ಪ್ರಕರಣದ ದಾಖಲು ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಚಿತ್ರ ಶೆಟ್ಟಿ (25) ಎಂದು ಗುರುತಿಸಲಾಗಿದೆ. ಸಾಗರ ತಾಲೂಕಿನ ಜಡ್ಡುಗದ್ದೆ ನಿವಾಸಿ ರಘುವೀರ ಶೆಟ್ಟಿ ಪುತ್ರಿ ಸುಚಿತ್ರ ಸೋದರ ಮಾವನ ಮನೆಯಲ್ಲಿ ವಾಸವಾಗಿದ್ದಳು. ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು.

ಸೋಮವಾರ ಕೆಲಸಕ್ಕೆ ಹೋಗಿದ್ದ ಯುವತಿ ರಾತ್ರಿ 8.30ರ ಸುಮಾರಿಗೆ ಮನೆಗೆ ಹೊರಟಿದ್ದಳು. 10.30 ಆದರೂ ಸುಚಿತ್ರ ಮನೆಗೆ ಬಾರದ ಹಿನ್ನಲೆಯಲ್ಲಿ ಕುಟುಂಬದವರು ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ವಿಷಯ ತಿಳಿಸಿದ್ದರು.

25 Year Old Woman Ends Life At Well

ರಾತ್ರಿ ಪೂರ್ತಿ ಹುಡುಕಿದರೂ ಸುಚಿತ್ರ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಾವಿಯಲ್ಲಿ ಶವ ನೋಡಿದ ಜನರು ಸಾಗರ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಬಾವಿಗೆ ಗ್ರಿಲ್ ಆಳವಡಿಸಲಾಗಿದ್ದು, ಅದಕ್ಕೆ ವೇಲ್‌ನಿಂದ ಸುಚಿತ್ರ ನೇಣು ಹಾಕಿಕೊಂಡಿದ್ದಾಳೆ.

ಸಾಗರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಡಿವೈಎಸ್‌ಪಿ ಜೆ. ರಘು ಸಹ ಆಗಮಿಸಿ ಪರಿಶೀಲನೆ ನಡೆಸಿದರು. ಯವತಿ ಸಾವಿನ ಹಿಂದೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+