ರಾಮನಗರದ ವಂಡರ್ ಲಾ ಡಿ. 18ರಿಂದ ಜನರಿಗೆ ಮುಕ್ತ
ರಾಮನಗರ, ಡಿಸೆಂಬರ್ 17: ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ವಂಡರ್ ಲಾ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿದೆ. ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ವಂಡಲ್ ಲಾವನ್ನು ಮುಚ್ಚಲಾಗಿತ್ತು.
ವಂಡರ್ ಲಾದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಲು ರಾಮನಗರ ಜಿಲ್ಲಾಧಿಕಾರಿಗಳಿಂದ ಅನುಮತಿ ಸಿಕ್ಕಿದೆ. ವಂಡರ್ ಲಾ ಡಿಸೆಂಬರ್ 18ರಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನಿರೀಕ್ಷಿತವಾಗಿ ಮುಚ್ಚಿದ್ದರಿಂದ ಅತಿಥಿಗಳಿಗೆ ಸಂಪೂರ್ಣ ಮರುಪಾವತಿ ಅಥವಾ ಬುಕಿಂಗ್ ದಿನಾಂಕದಿಂದ ಒಂದು ತಿಂಗಳವರೆಗೆ ಟಿಕೆಟ್‌ನ ಸಿಂಧುತ್ವವನ್ನು ವಿಸ್ತರಿಸುವ ಆಯ್ಕೆಯನ್ನು ನೀಡಲಾಗಿದೆ.

ಬ್ಯಾಂಕಿನಲ್ಲಿನ ಸಮಸ್ಯೆಗಳಿಂದಾಗಿ ಕೆಲವು ಮರುಪಾವತಿಗಳು ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಅದನ್ನು ಪೂರ್ಣಗೊಳಿಸಲಾಗುತ್ತದೆ. ತಮ್ಮ ಟಿಕೆಟ್‌ಗಳಲ್ಲಿ 30 ದಿನಗಳ ವಿಸ್ತರಣೆಯನ್ನು ಕೋರಿದ ಅತಿಥಿಗಳು ಸಮಯದೊಳಗೆ ಪಾರ್ಕ್ ಪ್ರವೇಶವನ್ನು ಪಡೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ಟಿಕೆಟ್ ಬುಕ್ ಮಾಡುವವರಿಗೆ ಈಗಾಗಲೇ ಆನ್‌ಲೈನ್ ಬುಕ್ಕಿಂಗ್ ಆರಂಭಿಸಲಾಗಿದೆ. ಆನ್‌ಲೈನ್ ಬುಕ್ಕಿಂಗ್ ಪದ್ಧತಿಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ವಂಡರ್ ಲಾ ಹೇಳಿದೆ. ವಂಡರ್ ಲಾಗೆ ಭೇಟಿ ಕೊಡಲು ಬಯಸುವ ಜನರು ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications