ಹಸು ತೊಳೆಯಲು ಹೋದ ಬಾಲಕ, ರಕ್ಷಿಸಲು ಹೋದ ಮಹಿಳೆ ನೀರು ಪಾಲು
ರಾಮನಗರ, ಫೆಬ್ರವರಿ 02: ಜಮೀನು ಬಳಿಯ ಹೊಂಡದಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದ ಬಾಲಕ ಹಾಗೂ ಆತನ್ನು ರಕ್ಷಿಸಲು ಮುಂದಾದ ಮಹಿಳೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕನಕಪುರದ ಹುಣಸೆಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.
ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಕಸಬಾ ಹೋಬಳಿಯ ಹುಣಸೆಮರದದೊಡ್ಡಿ ಗ್ರಾಮದ ದೀಪು (11) ಹಾಗೂ ಆತನ ಸಂಬಂಧಿಯಾದ ಭಾರತಿ (30) ಎಂದು ಗುರುತಿಸಲಾಗಿದೆ. ಬಾಲಕ ನೀರು ಪಾಲಾಗುತ್ತಿದ್ದಾಗ ಭಾರತಿ ಆತನನ್ನು ರಕ್ಷಣೆ ಮಾಡಲು ಹೋಗಿದ್ದರು.
ಗ್ರಾಮದ ಬಳಿಯ ಹೊಂಡದಲ್ಲಿ ಹಸುವನ್ನು ತೊಳೆಯಲು ದೀಪು ಹೋಗಿದ್ದಾಗ ಕಾಲು ಜಾರಿ ನೀರಿನಲ್ಲಿ ಮುಳುತ್ತಿದ್ದ. ಆಗ ಭಾರತಿ ದೀಪುವನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆಗ ಇಬ್ಬರೂ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಹೊಂಡದ ಕೆಸರಿನಲ್ಲಿ ಸಿಲುಕಿ ಇಬ್ಬರು ಮುಳುಗುತ್ತಿದ್ದಾಗ ಅಲ್ಲಿದ್ದ ಜನರು ರಕ್ಷಣೆ ಮಾಡಲ ಪ್ರಯತ್ನ ನಡೆಸಿದ್ದಾರೆ. ಆದರೆ, ಇಬ್ಬರೂ ನೀರಿನಲ್ಲಿ ಮುಳುಗಿದರು ಎಂದು ಸ್ಥಳೀಯರು ಹೇಳಿದ್ದಾರೆ.
ಕಕಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಪೋಲಿಸರು ಶವ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications