ರಾಮನಗರ : ಕಟಾವಿಗೆ ಬಂದ ಭತ್ತಕ್ಕೆ ಕೆಂಪುಹುಳು ಕಾಟ

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ನವೆಂಬರ್. 15 : ಈ ಭಾರಿ ಸಕಾಲಕ್ಕೆ ಬಂದ ಮಳೆ, ಸತತ ಬರಗಾಲದಿಂದ ತತ್ತರಿಸಿದ್ದ ರೈತರ ಮುಖದಲ್ಲಿ ನಗು ಮೂಡಿಸಿತು. ಆದರೆ ಆ ಮಂದಹಾಸ ಹೆಚ್ಚುದಿನ ಉಳಿಯಲಿಲ್ಲ. ಮಳೆ ಬಂದ ಖುಷಿಯಲ್ಲಿ ಭತ್ತ ಬಿತ್ತನೆ ಮಾಡಿ ಕಟಾವಿಗೆ ಕಾಯುತ್ತಿದ್ದ ರೈತರಿಗೆ ಆಕಾಶವೇ ತಲೆ ಮೇಲೆ ಬೀಲುವಂತಿದೆ ಮಾಡಿದೆ ಭತ್ತಕ್ಕೆ ಹಬ್ಬಿರುವ ಕೆಂಪು ತಲೆ ಹುಳುವಿನ ಕಾಟ.

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ನೂರಾರು ಎಕರೆ ಭತ್ತದ ಗದ್ದೆಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿದ್ದ ಭತ್ತಕ್ಕೆ ಇದೀಗ ಕೆಂಪುತಲೆಯ ಹುಳು ಬಿದ್ದಿದೆ. ಭತ್ತದ ಗದ್ದೆಯನ್ನೆಲ್ಲಾ ಆಕ್ರಮಿಸಿಕೊಂಡಿರೋ ಹುಳುಗಳು ಪೈರನ್ನೆಲ್ಲಾ ತಿಂದು ಹಾಕುತ್ತಿವೆ. ಗದ್ದೆಯ ಒಳಗೆ ಕಾಲಿಟ್ರೆ ಸಾಕು ಬರೀ ಹುಳುಗಳೇ ಕಾಣಿಸ್ತಿವೆ. ಇನ್ನೂ ಕಟಾವು ಮಾಡಲು ತಯಾರಿ ನಡೆಸ್ತಿದ್ದ ರೈತರಿಗೆ ಇದೀಗ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ.

red headed worm problem to paddy crop, worms eating the crop,

ಇನ್ನು ಐದು ದಿನಗಳು ಕಳೆದರೆ ರೈತರು ಭತ್ತವನ್ನು ಕಟಾವು ಮಾಡಬೇಕಿತ್ತು. ಆದರೆ ಕಳೆದ 4-5 ದಿನಗಳಿಂದ ಭತ್ತದ ಗದ್ದೆಯೇ ಕೆಂಪುತಲೆ ಹುಳುಗಳಿಂದ ತುಂಬಿ ಹೋಗಿದೆ. ಭತ್ತ ಹೊತ್ತ ತೆನೆಯ ಕಡ್ಡಿಯನ್ನೇ ಹುಳುಗಳು ತುಂಡು ಮಾಡಿ ಹಾಕುತ್ತಿವೆ. ಅಲ್ಲದೇ ಭತ್ತದ ಪೈರನ್ನೂ ತಿಂದು ಹಾಕುತ್ತಿವೆ.

ಭತ್ತದ ಫಸಲಿಗೆ ಮಹಾಮಾರಿಯಂತೆ ಎರಗಿರುವ ಕೆಂಪುತಲೆ ಹುಳಗಳ ನಿಯಂತ್ರಣಕ್ಕೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಸಮಸ್ಯೆ ಬಾಧಿಸುತ್ತಿರುವ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆಮಾಡಿ ಹುಳು ನಿಯಂತ್ರಣಕ್ಕೆ ಔಷಧಿ ನೀಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಆರೋಪಿಸಿಸುತ್ತಿದಾರೆ.

red headed worm problem to paddy crop, worms eating the crop,

ಇನ್ನೂ ಕಷ್ಟಪಟ್ಟು ಬೆಳೆದ ಬೆಳೆ ಕೆಂಪುತಲೆ ಹುಳುವಿನ ಬಾಯಿ ಸೇರುತ್ತಿದೆ. ಮತ್ತೊಂದೆಡೆ ಕೃಷಿ ಅಧಿಕಾರಿಗಳು ಹುಳು ನಿಯಂತ್ರಣಕ್ಕೆ ಮುಂದಾಗಿಲ್ಲ ಇದರಿಂದ ಬೇಸತ್ತ ರೈತರು ತಮಗೆ ತೊಚಿದ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ. ಕೆಲವರು ಭತ್ತದ ಫಸಲಿಗೆ ಔಷದಿ ಸಿಂಪಡಿಸುತ್ತಿದ್ದಾರೆ, ಮತ್ತೆ ಕೆಲವರು ಗದ್ದೆಗೆ ಇಳಿದ್ರೆ ಉಳಿದ ಭತ್ತವು ಹಾಳಾಗುತ್ತೆ ಅಂತಾ ಸಪ್ಪೆ ಮೋರೆ ಹಾಕಿ ಕುಳಿತಿದ್ದಾರೆ.

red headed worm problem to paddy crop, worms eating the crop,

ರೈತರು ಸಿಂಪಡಿಸುತ್ತಿರುವ ಕ್ರಿಮಿನಾಶಕ್ಕೆ ಹುಳುಗಳು ಸಾಯುತ್ತಿಲ್ಲ, ಬೆಳೆ ಹಾನಿ ಕಮ್ಮಿಯಾಗಿಲ್ಲ. ಕಟಾವಿಗೆ ಬಂದ ಭತ್ತಕ್ಕೆ ಕ್ರಿಮಿನಾಶಕ ಸಿಂಪಡಿಸಿದರೆ ತಿನ್ನುವ ಅನ್ನ ವಿಷವಾಗುತ್ತದೆ ಎನ್ನೋ ಭಯ ರೈತರನ್ನು ಕಾಡುತ್ತಿದೆ. ಹೊಸದಾಗಿ ಕಾಣಿಸಿಕೊಂಡಿರೋ ರೋಗಕ್ಕೆ ಇದೀಗ ರೈತರು ಬೆಸ್ತು ಬಿದ್ದಿದ್ದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

red headed worm problem to paddy crop, worms eating the crop,

ಒಟ್ಟಾರೆ ಭತ್ತ ಬೆಳೆದ ರೈತರು ಇದೀಗ ಕೆಂಪುತಲೆಯ ಹುಳುವಿನ ಕಾಟಕ್ಕೆ ಬೆಸ್ತು ಬಿದ್ದಿದ್ದಾರೆ. ಅಧಿಕಾರಿಗಳಂತೂ ಕ್ಯಾರೇ ಎನ್ನದಿರುವುದು ರೈತರನ್ನು ಇನ್ನಷ್ಟು ತಲ್ಲಣಗೊಳಿಸಿದೆ. ಇನ್ನಾದ್ರೂ ಕೆಂಪುಹುಳು ಕಾಟಕ್ಕೆ ಅಧಿಕಾರಿಗಳು ಪರಿಹಾರ ನೀಡಬೇಕಿದೆ. ಅಲ್ಲದೇ ಕೆಂಪುತಲೆ ಹುಳು ಕಾಟ ಬೇರೆ ಬೆಳೆಗೆ ಹರಡದಂತೆ ತಡೆಯಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Ramanagar Farmers facing red headed worms problem to their paddy crop. ahead of harvesting these worms are eating the crop. Ramanagara farmers asking help from agriculture department officers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ