ಗಣೇಶ ಮೂರ್ತಿ ವಿಸರ್ಜನೆ ವೇಳೆ ಜನರೇಟರ್ ಗೆ ಸಿಲುಕಿ ಕತ್ತರಿಸಿದ ಯುವಕನ ಕೈ

ರಾಮನಗರ, ಸೆಪ್ಟೆಂಬರ್ 8: ಗಣಪತಿ ಮೂರ್ತಿ‌ ವಿಸರ್ಜನೆ ವೇಳೆ ಜನರೇಟರ್ ಗೆ ಕೈ ಸಿಲುಕಿಕೊಂಡು, ಯುವಕನೊಬ್ಬನ ಕೈ ಕತ್ತರಿಸಿ ಹೋಗಿರುವ ಘಟನೆ ನಡೆದಿದೆ. ನಗರದ ಚಾಮುಂಡೇಶ್ವರಿ ಬಡಾವಣೆ ಅಮೃತ್ ಕೇಬಲ್ ಬಳಿ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಯನ್ನು ಶನಿವಾರ ರಾತ್ರಿ‌ ವಿಸರ್ಜನೆ ಮಾಡುವ ವೇಳೆ ಈ ಘಟನೆ ನಡೆದಿದೆ.

ನರೇಂದ್ರ (24) ಕೈ ಕಳೆದುಕೊಂಡ ಯುವಕ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಯುವಕ ಹೋರಾಡುತ್ತಿದ್ದಾನೆ. ಯುವಕನ ಸ್ಥಿತಿ ನೋಡಿದರೆ ಎಂಥವರಿಗೂ ಹೃದಯ ಕಲುಕುವಂತೆ ಇದೆ.

Ramanagar Youth Lost His Hand While Ganesha Idol Immersion

ರಂಗರಾಯರದೊಡ್ಡಿ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಬಗ್ಗೆ ಪೊಲೀಸರು ಕೂಲಂಕಷವಾದ ತನಿಖೆ ನಡೆಸುತ್ತಿದ್ದು, ಕೆಲವರ ವಿಚಾರಣೆ ಕೂಡ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+